ಹೈದರಾಬಾದ್ : ತೆಲುಗು ನಟ ಅಲ್ಲು ಅರ್ಜುನ್ ಬ್ಲಾಕ್ ಬಸ್ಟರ್ 'ಪುಷ್ಪ' ಸಿನಿಮಾದ ಐಟಂ ಸಾಂಗ್ನಲ್ಲಿ ಸೊಂಟ ಬಳುಕಿಸುವ ಮೂಲಕ ನಟಿ ಸಮಂತಾ ಸಾಕಷ್ಟು ಖ್ಯಾತಿ ಪಡೆದಿದ್ದು, ಬೇಡಿಕೆ ಕೂಡ ಹೆಚ್ಚಾಗಿದೆ. ಇದೀಗ ಮತ್ತೊಮ್ಮೆ ಗಮನ ಸೆಳೆದಿದ್ದಾರೆ.
ಮಾರ್ಚ್10ರಂದು ಮುಂಬೈನಲ್ಲಿ ನಡೆದ 4ನೇ ಆವೃತ್ತಿಯ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಸಮಂತಾ ಭಾಗವಹಿಸಿದ್ದರು. ಈ ವೇಳೆ ಸಮಂತಾ ಹಸಿರು ಬಣ್ಣದ ಗೌನ್ ಧರಿಸಿದ್ದರು.
ಈ ಕುರಿತಾದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗಿದ್ದವು. ಇದೀಗ ನಟಿಯ ಡ್ರೆಸ್ ಬಗ್ಗೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳಿಗೆ ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ.
'ಹಿಂದೆ ಇಟ್ಟಿರುವ ಬಟ್ಟೆಯನ್ನು ಮುಂದೆ ಹಾಕಿದ್ದರೆ ಉತ್ತಮ' ಎಂದೊಬ್ಬರು ಕಮೆಂಟ್ ಮಾಡಿದ್ದರೆ, ಮತ್ತೊಬ್ಬ ತಮಾಷೆಯಾಗಿ ‘ನನ್ನ ಮನೆಯ ಕರ್ಟನ್ ಸಿಕ್ಕಿದೆ' ಎಂದು ಬರೆದಿದ್ದಾರೆ.
ಇನ್ನೊಬ್ಬರು 'ಮನೆಯಿಂದ ಹೊರಡುವ ಗಡಿಬಿಡಿಯಲ್ಲಿ ಬೆಡ್ಶೀಟ್ ಸುತ್ತಿಕೊಂಡು ಬಂದಿದ್ದಾರೆ ಎಂದೆನಿಸುತ್ತಿದೆ' ಎಂದು ಕಮೆಂಟ್ ಮಾಡಿದ್ದಾರೆ.
ಸಮಂತಾ ಟ್ರೋಲ್ ಆಗಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಸಾಕಷ್ಟು ಟ್ರೋಲ್ಗಳನ್ನು ಎದುರಿಸಿದ್ದಾರೆ. ಇದಾವುದಕ್ಕೂ ನಟಿ ತಲೆಕೆಡಿಸಿಕೊಳ್ಳುತ್ತಿಲ್ಲ.
ಸದ್ಯ ಸಮಂತಾ ಗುಣಶೇಖರ್ ನಿರ್ದೇಶನದ ‘ಶಾಕುಂತಲಂ’ ಚಿತ್ರದಲ್ಲಿ ಶಕುಂತಲಾ ಆಗಿ ಬಣ್ಣ ಹಚ್ಚಿದ್ದಾರೆ. ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ.
ಇದನ್ನೂ ಓದಿ: ತೆರೆಗೆ ಅಪ್ಪಳಿಸಿದ ರಾಧೆ ಶ್ಯಾಮ್: ಕ್ಲೈಮ್ಯಾಕ್ಸ್ ಬಗ್ಗೆ ನೆಟಿಜನ್ ಫುಲ್ ಖುಷ್!