ETV Bharat / sitara

ಮಗದೊಂದು ಲವ್ ಸ್ಟೋರಿಗೆ ಮುಂದಾದ ಸಮಂತಾ; ಅಭಿಮಾನಿಗಳಿಗೆ ಶೀಘ್ರದಲ್ಲೇ ಸಿಹಿ ಸುದ್ದಿ - ನಟ ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದ ನಟಿ ಸಮಂತಾ ರುತ್ ಪ್ರಭು

ನಟ ವಿಜಯ್ ದೇವರಕೊಂಡ ಮತ್ತು ನಟಿ ಸಮಂತಾ ರುತ್ ಪ್ರಭು ಇದೇ ಮೊದಲ ಬಾರಿಗೆ ಪರದೆ ಹಂಚಿಕೊಳ್ಳುವ ತವಕದಲ್ಲಿದ್ದಾರೆ. ಪ್ರೇಮಕಥೆ ಇದಾಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹುಟ್ಟುಹಾಕಿದೆ.

Samantha ruth prabhu team up with Vijay Deverakonda for a love story movie

author img

By

Published : Mar 4, 2022, 1:27 PM IST

ಹೈದರಾಬಾದ್​: ನಟ ಅಕ್ಕಿನೇನಿ ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದ ಬಳಿಕ ಸೌಥ್​ ಚಿತ್ರರಂಗದ ಖ್ಯಾತ ನಟಿ ಸಮಂತಾ ರುತ್ ಪ್ರಭು ಒಂದರ ನಂತರ ಒಂದು ಚಿತ್ರ ಮಾಡುತ್ತಿದ್ದಾರೆ. ಟಾಲಿವುಡ್​ನ ಟಾಪ್​ ನಟ ವಿಜಯ್ ದೇವರಕೊಂಡ ಅವರೊಂದಿಗೆ ಸ್ಕ್ರೀನ್​ ಶೇರ್​ ಮಾಡಿಕೊಳ್ಳುವ ಅವಕಾಶವೊಂದು ಇದೀಗ ಕೂಡಿಬಂದಿದೆ.

ಪುಷ್ಪ ಚಿತ್ರದಲ್ಲಿನ ಐಟಂ ಸಾಂಗ್​​​ನಲ್ಲಿ ಸೊಂಟ ಬಳುಕಿಸಿದ್ದ ಸಮಂತಾ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಇದೀಗ ಅದೇ ಖುಷಿಯಲ್ಲಿ ತೇಲುತ್ತಿರುವಾಗ ಸಮಂತಾ ಅಭಿಮಾನಿಗಳಿಗಾಗಿ ಶೀಘ್ರದಲ್ಲೇ ಮಗದೊಂದು ಖುಷಿ ವಿಚಾರವೊಂದನ್ನು ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಚಿತ್ರವನ್ನು ನಿರ್ದೇಶಕ ಶಿವ ಅವರು ನಿರ್ಮಾಣ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಈಗಾಗಲೇ ನಟ ವಿಜಯ್ ದೇವರಕೊಂಡ ಅವರೊಂದಿಗೆ ಮಾತನಾಡಿದ್ದು, ಶೀಘ್ರದಲ್ಲೇ ಚಿತ್ರೀಕರಣ ಆರಂಭ ಮಾಡಲಿದ್ದಾರೆ ಎಂದೂ ತಿಳಿದು ಬಂದಿದೆ. ಆದ್ರೆ ಚಿತ್ರದ ಹೆಸರು ಇನ್ನೂ ಖಚಿತಪಡಿಸಿಲ್ಲ.

ಚಿತ್ರೀಕರಣಕ್ಕಾಗಿ ನಿರ್ದೇಶಕ ಪುರಿ ಜಗನ್ನಾಥ್ ಅವರೊಂದಿಗೆ ಸೂಕ್ತ ಸ್ಥಳವನ್ನು ಹುಡುಕಲಾಗುತ್ತಿದೆ. ಈ ನಡುವೆ ಚಿತ್ರದ ನಾಯಕಿ ನಟಿಯರ ಪಾತ್ರಕ್ಕೆ ಕಿಯಾರಾ ಅಡ್ವಾಣಿ ಸೇರಿದಂತೆ ಅನೇಕ ನಟಿಯರ ಸಂಪರ್ಕ ಮಾಡಲಾಗಿತ್ತು. ಆದರೆ, ಸಮಂತಾ ರುತ್ ಪ್ರಭು ಅವರನ್ನು ಫೈನಲ್​ ಮಾಡಲಾಗಿದೆಯಂತೆ.

ಪ್ರೇಮಕಥೆ ಇದಾಗಿದ್ದು ನಟ ವಿಜಯ್ ದೇವರಕೊಂಡ ಮತ್ತು ನಟಿ ಸಮಂತಾ ರುತ್ ಪ್ರಭು ಇದೇ ಮೊದಲ ಬಾರಿಗೆ ಪರದೆ ಹಂಚಿಕೊಳ್ಳುವ ತವಕದಲ್ಲಿದ್ದಾರೆ. ಅಭಿಮಾನಿಗಳಲ್ಲಿಯೂ ಸಹ ಅಷ್ಟೇ ಕುತೂಹಲ ಹುಟ್ಟುಹಾಕಿದೆ. ಈ ಬಗ್ಗೆ ಚಿತ್ರತಂಡ ಶೀಘ್ರದಲ್ಲೇ ಸ್ಪಷ್ಟನೆ ನೀಡಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.