ETV Bharat / sitara

ಮನೆ ಬಿಟ್ಟು ಸಿನಿಮಾ ಸೆಟ್​ನಲ್ಲಿ ಸಮಂತಾ ವಾಸ! - ಯಶೋದಾ ಚಿತ್ರೀಕರಣದಲ್ಲಿ ಸಮಂತಾ ಬ್ಯುಸಿ

'ಯಶೋದಾ' ಚಿತ್ರಕ್ಕಾಗಿ ನಿರ್ಮಿಸಲಾದ ಹೋಟೆಲ್​ ರೂಪದ ಸೆಟ್‌ ನೋಡಿ ಸಮಂತಾ ನಿಜಕ್ಕೂ ಆಶ್ಚರ್ಯಚಕಿತರಾದ್ದಾರೆ. ಬೃಹತ್​ ಸೆಟ್‌ ನೋಡಿದ ಸಮಂತಾ ನಾನು ಸೆಟ್‌ನಲ್ಲಿಯೇ ಇರಲು ಬಯಸುತ್ತೇನೆ ಎಂದು ಹೇಳಿದ್ದಾರಂತೆ. ಅಲ್ಲದೇ, ಒಂದೆರಡು ದಿನಗಳ ಕಾಲ ಚಿತ್ರದ ಚಿತ್ರೀಕರಣವನ್ನು ಸೆಟ್‌ನಲ್ಲಿ ಉಳಿದುಕೊಂಡು ಮಾಡುತ್ತೇನೆ ಎಂದಿರುವ ಸಮಂತಾ, ಮನೆಯಂತೆ ಅದ್ದೂರಿಯಾದ ಸೆಟ್​ಗೆ ಬ್ಯಾಗ್​​ಗಳನ್ನೂ ಶಿಫ್ಟ್​ ಮಾಡಿದ್ದಾರಂತೆ..

Samantha iving on sets of Yashoda
Samantha iving on sets of Yashoda
author img

By

Published : Mar 18, 2022, 12:27 PM IST

ಹೈದ್ರಾಬಾದ್(ತೆಲಂಗಾಣ) : ಮದುವೆ ವಿಚ್ಛೇದನದಿಂದ ಸಾಕಷ್ಟು ಸುದ್ದಿಯಾಗಿದ್ದ ಖ್ಯಾತ ನಟಿ ಸಮಂತಾ ರುತ್ ಪ್ರಭು ಈಗ ತಮ್ಮ ಮನೆಯಿಂದ ಹೊರ ಬಂದಿದ್ದಾರೆ. ಮನೆ ಬಿಟ್ಟು ಅವರು ಸಿನಿಮಾ ಸೆಟ್​ನಲ್ಲೇ ವಾಸ ಮಾಡಲು ಮುಂದಾಗಿದ್ದಾರೆ.

ಸಮಂತಾ ಸದ್ಯ ತಮ್ಮ ಮುಂದಿನ ಬಹುಭಾಷಾ ಚಿತ್ರ 'ಯಶೋದಾ' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ಅವರು ಮನೆಗೆ ಹೋಗದೇ ಸೆಟ್‌ನಲ್ಲಿ ತಾತ್ಕಾಲಿಕವಾಗಿ ಉಳಿದುಕೊಳ್ಳಲು ನಿರ್ಧರಿಸಿದ್ದಾರಂತೆ.

ಇದಕ್ಕೆ ಪ್ರಮುಖ ಕಾರಣ ಸಿನಿಮಾದ ಸೆಟ್​. ಯಶೋಧ ಚಿತ್ರೀಕರಣಕ್ಕಾಗಿ ಹಾಕಿರುವ ಸೆಟ್​ ನೋಡಿಯೋ ಮಾರು ಹೋಗಿದ್ದು, ತಾವು ಸೆಟ್​ನಲ್ಲೇ ಇರುವುದಾಗಿ ಹೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಏನಿದೆ ಆ ಸೆಟ್​ನಲ್ಲಿ?: ಶ್ರೀದೇವಿ ಮೂವೀಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ 'ಯಶೋದಾ' ಚಿತ್ರವನ್ನು ಶಿವಲೆಂಕ ಕೃಷ್ಣಪ್ರಸಾದ್ ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ 3 ಕೋಟಿ ರೂ. ವೆಚ್ಚದ ಬೃಹತ್ ಸೆಟ್​ ನಿರ್ಮಿಸಲಾಗಿದೆಯಂತೆ. ಅದರಲ್ಲೂ, ಐಷಾರಾಮಿಯಾದ ಸೆವೆನ್ ಸ್ಟಾರ್ ಹೋಟೆಲ್ ಮಾದರಿಯಲ್ಲೇ ಅದ್ದೂರಿ ಸೆಟ್​​ ಕೂಡ ಇದೆ. ಇದು ಚಿತ್ರದ ಪ್ರಮುಖ ಆಕರ್ಷಣೆಗಳಲ್ಲೇ ಒಂದಾಗಿದೆ ಎಂದು ಮೂಲಗಳ ಹೇಳುತ್ತಿವೆ.

'ಯಶೋದಾ' ಚಿತ್ರಕ್ಕಾಗಿ ನಿರ್ಮಿಸಲಾದ ಹೋಟೆಲ್​ ರೂಪದ ಸೆಟ್‌ ನೋಡಿ ಸಮಂತಾ ನಿಜಕ್ಕೂ ಆಶ್ಚರ್ಯಚಕಿತರಾದ್ದಾರೆ. ಬೃಹತ್​ ಸೆಟ್‌ ನೋಡಿದ ಸಮಂತಾ ನಾನು ಸೆಟ್‌ನಲ್ಲಿಯೇ ಇರಲು ಬಯಸುತ್ತೇನೆ ಎಂದು ಹೇಳಿದ್ದಾರಂತೆ. ಅಲ್ಲದೇ, ಒಂದೆರಡು ದಿನಗಳ ಕಾಲ ಚಿತ್ರದ ಚಿತ್ರೀಕರಣವನ್ನು ಸೆಟ್‌ನಲ್ಲಿ ಉಳಿದುಕೊಂಡು ಮಾಡುತ್ತೇನೆ ಎಂದಿರುವ ಸಮಂತಾ, ಮನೆಯಂತೆ ಅದ್ದೂರಿಯಾದ ಸೆಟ್​ಗೆ ಬ್ಯಾಗ್​​ಗಳನ್ನೂ ಶಿಫ್ಟ್​ ಮಾಡಿದ್ದಾರೆ ಅಂತೆ.

'ಯಶೋದಾ' ಚಿತ್ರಕ್ಕಾಗಿ ಸೆಟ್ ಹಾಕಲು ಕಲಾನಿರ್ದೇಶಕ ಅಶೋಕ್ ಕೊರಾಳತ್ ಸುಮಾರು 200 ಜನರೊಂದಿಗೆ ಮೂರು ತಿಂಗಳ ಕಾಲ ಹಗಲಿರುಳು ಶ್ರಮಿಸಿದ್ದಾರೆ. ಥ್ರಿಲ್ಲರ್ ಸಿನಿಮಾ ಎಂದು ಹೇಳಲಾಗುತ್ತಿರುವ ಈ ಚಿತ್ರದಲ್ಲಿ ಸಮಂತಾ, ಉನ್ನಿ ಮುಕುಂದನ್ ಮತ್ತು ವರಲಕ್ಷ್ಮಿ ಶರತ್‌ಕುಮಾರ್​ ನಟಿಸಿದ್ದಾರೆ.

ಪ್ಯಾನ್-ಇಂಡಿಯಾ ಹಾಗೂ ಮಹಿಳಾ ಪ್ರಧಾನ ಚಿತ್ರವಾದ ಇದನ್ನು ನಿರ್ದೇಶಕರಾದ ಹರಿ ಶಂಕರ್ ಮತ್ತು ಹರೀಶ್ ನಿರ್ದೇಶನ ಮಾಡುತ್ತಿದ್ದಾರೆ. ಸಂಗೀತ ಸಂಯೋಜನೆಯನ್ನು ಮಣಿ ಶರ್ಮಾ ಮತ್ತು ಛಾಯಾಗ್ರಾಹಣವನ್ನು ಎಂ.ಸುಕುಮಾರ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಕೆಜಿಎಫ್ ಸಿನಿಮಾ ದಾಖಲೆಯನ್ನ ಮುರಿದ ಜೇಮ್ಸ್ ಸಿನಿಮಾ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.