ಮುಂಬೈ : ಮಹಿಳೆಯರನ್ನು ಬಟ್ಟೆಯಿಂದ ನಿರ್ಣಯಿಸುವ ಟ್ರೋಲರ್‌ಗಳಿಗೆ ನಟಿ ಸಮಂತಾ ರೂತ್ ಪ್ರಭು ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.
ಮಾರ್ಚ್ 10ರಂದು ನಡೆದ 'ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್'ಗೆ ನಟಿ ಸಮಂತಾ ಹಸಿರು ಬಣ್ಣದ ಡೀಪ್ ನೆಕ್ ಡಿಸೈನರ್ ಗೌನ್ ಧರಿಸಿ ಭಾಗಿಯಾಗಿದ್ದರು. ಈವೆಂಟ್‌ನ ಅವರ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.
ಆ ಫೋಟೋಗಳನ್ನು ಕಂಡ ಅಭಿಮಾನಿಗಳು ಏನಾಗಿದೆ ನಿಮಗೆ? ಹಣಕ್ಕಾಗಿ ಏನೇನೆಲ್ಲ ಮಾಡ್ತಿದ್ದೀರಿ?’ ಎಂದು ಖಾರವಾಗಿಯೇ ಪ್ರಶ್ನಿಸಿದ್ದರು. ಇನ್ನೊಬ್ಬರು 'ಮನೆಯಿಂದ ಹೊರಡುವ ಗಡಿಬಿಡಿಯಲ್ಲಿ ಬೆಡ್‌ಶೀಟ್ ಸುತ್ತಿಕೊಂಡು ಬಂದಿದ್ದಾರೆ ಎಂದೆನಿಸುತ್ತಿದೆ' ಎಂದು ಕಮೆಂಟ್ ಮಾಡಿದ್ದರು.
ಇದಕ್ಕೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿಕ್ರಿಯಿಸಿರುವ ಸಮಂತಾ, 'ಸಾಮಾನ್ಯವಾಗಿ ಮಹಿಳೆಯರು ಧರಿಸುವ ಬಟ್ಟೆ, ಅವರ ಜನಾಂಗ, ಶಿಕ್ಷಣ, ಸಾಮಾಜಿಕ ಸ್ಥಾನಮಾನ, ನೋಟ, ಚರ್ಮದ ಟೋನ್ ಮತ್ತು ಪಟ್ಟಿಯನ್ನು ಆಧರಿಸಿ ಅವರನ್ನು ಅಳೆಯುತ್ತೇವೆ.
ಇನ್ನು ಒಬ್ಬ ವ್ಯಕ್ತಿಯನ್ನು ಅವರು ಧರಿಸುವ ಬಟ್ಟೆಯ ಆಧಾರದ ಮೇಲೆ ಟೀಕೆ ಮಾಡುವುದು ಅಕ್ಷರಶಃ ಒಬ್ಬರು ಮಾಡಬಹುದಾದ ಸುಲಭವಾದ ಕೆಲಸವಾಗಿದೆ. ಹೀಗೆ ಮಾಡುವುದನ್ನು ಮೊದಲು ನಿಲ್ಲಿಸಿ' ಎಂದು ಖಾರವಾಗಿ ಹೇಳಿದ್ದಾರೆ.
ಇದನ್ನೂ ಓದಿ: ಗಡಿಬಿಡಿಯಲ್ಲಿ ಬೆಡ್‌ಶೀಟ್ ಸುತ್ಕೊಂಡ್ ಬಂದ್ರಾ.. ನಟಿ ಸಮಂತಾ ಧರಿಸಿದ ಡ್ರೆಸ್ ಬಗ್ಗೆ ನೆಟ್ಟಿಗರಿಂದ ಟ್ರೋಲ್..