ಬಹಳಷ್ಟು ಮಂದಿ ತಾವು ಓದುವುದು ಒಂದು ವಿಷಯವಾದರೆ, ಆಯ್ಕೆ ಮಾಡಿಕೊಳ್ಳುವ ಕರಿಯರ್ ಮತ್ತೊಂದು. ಇದು ಅಕ್ಕಿನೇನಿ ನಾಗಾರ್ಜುನ ಸೊಸೆ ಸಮಂತಾ ಅಕ್ಕಿನೇನಿಗೆ ಕೂಡಾ ಅನ್ವಯಿಸುತ್ತದೆ.
ನನ್ನ ವಿದ್ಯಾಭ್ಯಾಸ ಒಂದೇ ವಿಷಯಕ್ಕೆ ಉಪಯೋಗಕ್ಕೆ ಬಂತು ಎನ್ನುತ್ತಾರೆ ಸಮಂತಾ. ಕಳೆದ ಎರಡು ವರ್ಷಗಳಲ್ಲಿ 'ಯುಟರ್ನ್', 'ರಂಗಸ್ಥಲಂ' ಜೊತೆ ಇತ್ತೀಚೆಗೆ 'ಮಜಿಲಿ', 'ಓ ಬೇಬಿ' ಸಿನಿಮಾಗಳ ಮೂಲಕ ವಿಜಯ ಸಾಧಿಸಿದ ಸಮಂತಾ ಸದ್ಯಕ್ಕೆ ಅಮೆಜಾನ್ ಪ್ರೈಂ ನಿರ್ಮಿಸುತ್ತಿರುವ ಒಂದು ವೆಬ್ ಸೀರೀಸ್ನಲ್ಲಿ ನಟಿಸುತ್ತಿದ್ದಾರೆ.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು, ಆಸಕ್ತಿಕರ ವಿಷಯವೊಂದನ್ನು ಹೇಳಿಕೊಂಡರು. 'ನನ್ನ ವಿದ್ಯಾಭ್ಯಾಸದ ಸಂದರ್ಭದಲ್ಲಿ ನಮ್ಮ ಊರಿನವರೆಲ್ಲಾ ಚೆನ್ನಾಗಿ ಓದಿ ಆಸ್ಟ್ರೇಲಿಯಾಗೆ ಹೋಗು ಎನ್ನುತ್ತಿದ್ದರು. ನಾನು ಕೂಡಾ ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ಓದಿದೆ. ಕಾಲೇಜು ಓದುತ್ತಿದ್ದ ವೇಳೆ ಪಾಕೆಟ್ ಮನಿಗಾಗಿ ಮಾಡೆಲಿಂಗ್ ಕಡೆಗೆ ಹೆಜ್ಜೆ ಇಟ್ಟೆ. ಆ ನಂತರ ಅದೇ ನನ್ನ ಜೀವನವಾಗಿಹೋಯ್ತು.
'ಏಂ ಮಾಯಮ್ ಚೇಸಾವೆ' ಹಿಟ್ ಆದ ನಂತರ ಇನ್ನು ಸಿನಿಮಾನೇ ನನ್ನ ಕರಿಯರ್ ಎಂದು ನಿರ್ಧರಿಸಿದೆ. ಆ ಕಾರಣಕ್ಕೆ ಓದನ್ನು ಕೂಡಾ ಅರ್ಧಕ್ಕೆ ನಿಲ್ಲಿಸಿ ಸಿನಿಮಾ ಕಡೆಗೆ ಹೆಚ್ಚು ಗಮನ ಹರಿಸಿದೆ. ನನ್ನ ವಿದ್ಯಾಭ್ಯಾಸ ಉಪಯೋಗವಾಗಿದ್ದು ಒಂದೇ ವಿಷಯಕ್ಕೆ ಎಂದು ಅನ್ನಿಸುತ್ತಿದೆ. ಸ್ಕ್ರಿಪ್ಟ್ ಓದಲು ಮಾತ್ರ ವಿದ್ಯಾಭ್ಯಾಸ ಸಹಾಯಕ್ಕೆ ಬಂತು. ಯಾರು ಎಂತಹ ದೊಡ್ಡ ಸ್ಕ್ರಿಪ್ಟ್ ಕೊಟ್ಟರೂ, ಡೈಲಾಗ್ ಕೊಟ್ಟರೂ ಪಟಪಟ ಓದಿ ಅದನ್ನು ಅರ್ಥ ಮಾಡಿಕೊಂಡು ನನ್ನ ಕೆಲಸವನ್ನು ಮುಂದುವರೆಸುತ್ತೇನೆ ಎಂದು ಸಮಂತಾ ಹೇಳಿಕೊಂಡಿದ್ದಾರೆ.