ಸಲ್ಮಾನ್ ಖಾನ್ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಬೈಸಿಕಲ್ ಸವಾರಿಯ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ಈ ಪೋಸ್ಟ್ನಲ್ಲಿ ಅಭಿಮಾನಿಗಳಿಗೆ ಸುರಕ್ಷಿತವಾಗಿರಿ ಎಂದು ಬರೆದಿದ್ದಾರೆ. ಈ ಪೋಸ್ಟ್ಗೆ ಅಭಿಮಾನಿಗಳು ಭರಪೂರ ಕಮೆಂಟ್ ಮಾಡಿದ್ದು, 2002ರಲ್ಲಿ ನಡೆದ ಹಿಟ್ ಅಂಡ್ ರನ್ ಪ್ರಕರಣವನ್ನು ಮೆಲುಕು ಹಾಕಿದ್ದಾರೆ.
ಅಭಿಮಾನಿಗಳು ತಮ್ಮ ಕಮೆಂಟ್ನಲ್ಲಿ ಸಲ್ಮಾನ್ ಖಾನ್ ಹಿಟ್ ಅಂಡ್ ರನ್ ಕೇಸ್ನಲ್ಲಿ ಸಾಕ್ಷಾಧಾರಗಳಿಲ್ಲದೆ ಹೇಗೆ ಪಾರಾದರು ಎಂಬ ಬಗ್ಗೆ ಕಮೆಂಟ್ ಮಾಡಿದ್ದಾರೆ.
- " class="align-text-top noRightClick twitterSection" data="
">
ಮತ್ತೊಂದು ಕಮೆಂಟ್ನಲ್ಲಿ ಮೊದಲು ಕಾರಿನಲ್ಲಿ ಬಂದಿದ್ದರು, ನಂತ್ರ ಟ್ರಾಕ್ಟರ್ನಲ್ಲಿ ಬಂದರು. ಈಗ ಸೈಕಲ್ ಮೇಲೆ ಬಂದಿದ್ದು, ಎಷ್ಟು ಜನರಿಗೆ ಡಿಕ್ಕಿ ಹೊಡೆಯುತ್ತಾರೋ ಎಂದು ಲೇವಡಿ ಮಾಡಿದ್ದಾರೆ. ಹಾಗೆಯೇ ದಯಮಾಡಿ ನೀವು ಕಾಲು ದಾರಿಯಲ್ಲಿ ಸೈಕಲ್ ಸವಾರಿ ಮಾಡಬೇಡಿ ಎಂದಿದ್ದಾರೆ.
ಮತ್ತೂ ಕೆಲವರು ಪ್ರಸ್ತುತ ಬಾಲಿವುಡ್ ವಿದ್ಯಮಾನಗಳಿಗೆ ಸಲ್ಮಾನ್ ಖಾನ್ ಯಾಕೆ ಪ್ರತಿಕ್ರಿಯೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಕಂಗನಾ ಮನೆ ಮೇಲೆ ದಾಳಿ ನಡೆದಿದ್ದು, ಈ ಬಗ್ಗೆ ಸಲ್ಮಾನ್ ಏಕೆ ಮೌನ ತಾಳಿದ್ದಾರೆ?. ಬಾಲಿವುಡ್ ಹೀರೋ ಅನ್ನಿಸಿಕೊಂಡ ನೀವು ಏಕೆ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಕೆಲವರು ಪ್ರಶ್ನಿಸಿದ್ದಾರೆ.