ಸ್ಯಾಂಡಲ್ವುಡ್ ನಲ್ಲಿ ಮಾಸ್ ಲುಕ್ ಹಾಗೂ ಕಟ್ಟು ಮಸ್ತಾದ ದೇಹ, ರಿಯಲ್ ಸ್ಟಂಟ್ ಮೂಲಕವೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿರೋ ನಟ ದುನಿಯಾ ವಿಜಯ್. ಸದ್ಯ ಸಲಗ ಚಿತ್ರದ ಮೂಲಕ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಮುಕ್ಕಾಲು ಭಾಗ ಸಲಗ ಚಿತ್ರ ಶೂಟಿಂಗ್ ಮುಗಿದಿದ್ದು, ಡಾಲಿ ಧನಜಂಯ್, ಕಾಕ್ರೋಚ್ ಸುಧಿ, ಸಂಜನಾ ಆನಂದ್ ಹೀಗೆ ಬಹು ತಾರಗಣವಿರುವ ಸಲಗ ಚಿತ್ರದ, ಸಾಂಗ್ ಕಂಪೋಸ್ ನಲ್ಲಿ ವಿಜಯ್ ನಿರ್ಮಾಪಕ ಕೆ ಪಿ ಶ್ರೀಕಾಂತ್ ಇನ್ವಾಲ್ವ ಆಗಿದ್ರು.
ಕವಲುದಾರಿ, ಟಗರು ಚಿತ್ರಗಳಿಗೆ ಹೊಸತನದ ಮ್ಯೂಸಿಕ್ ಮಾಡಿರೋ, ಯುವ ಸಂಗೀತ ನಿರ್ದೇಶಕ ಚರಣ್ ರಾಜ್ ಸಲಗ ಚಿತ್ರದ ಟೈಟಲ್ ಹಾಡಿನ ಸಾಂಗ್ ಕಂಪೋಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಚರಣ್ ರಾಜ್ ಕಂಪೋಸ್ ಮಾಡಿರೋ ಈ ಹಾಡು ಫೈನಲ್ ಆಗಿದ್ದು, ಸಲಗ ಟೈಟಲ್ ಗೆ ತಕ್ಕಂತೆ ಕಂಪೋಸ್ ಮಾಡಿದ್ದಾರೆ. ಇನ್ನು ಚಿತ್ರಕ್ಕೆ ಮಾಸ್ತಿ ಮಂಜು ಡೈಲಾಗ್ ಬರೆದಿದ್ದು, ಚರಣ್ ರಾಜ್ ಹಾಗೂ ನವೀನ್ ಸಜ್ಜು ಸಂಗೀತವಿರಲಿದೆ.
ಟಗರು ಸಿನಿಮಾ ನಿರ್ಮಾಣ ಮಾಡಿದ್ದ ಕೆ.ಪಿ ಶ್ರೀಕಾಂತ್ ಚಿತ್ರಕ್ಕೆ ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.. ಹಲವು ವಿಷಯಗಳಿಗೆ ಸಲಗ ಸೌಂಡ್ ಮಾಡುತ್ತಿದ್ದು, ಸದ್ಯದಲ್ಲೇ ಈ ಚಿತ್ರದ ಟೀಸರ್ ರಿಲೀಸ್ ಮಾಡೋದಕ್ಕೆ ಚಿತ್ರತಂಡ ಪ್ಲಾನ್ ಮಾಡಿದೆ.