ದುನಿಯಾ ವಿಜಯ್ ಅಭಿನಯದ ಸಲಗ ಚಿತ್ರ ಸ್ಯಾಂಡಲ್ವುಡ್ನಲ್ಲಿ ಹಲವಾರು ವಿಶೇಷತೆಗಳಿಂದಾಗಿ ಸಖತ್ ಸದ್ದು ಮಾಡುತ್ತಿದೆ. ದುನಿಯಾ ವಿಜಯ್ ಚೊಚ್ಚಲ ಬಾರಿಗೆ ನಿರ್ದೇಶನದ ಜೊತೆಗೆ ಅಭಿನಯ ಮಾಡುತ್ತಿರುವ ಸಿನಿಮಾ ಇದಾಗಿದೆ.
ಈಗಾಗಲೇ ಚಿತ್ರದ ಟೀಸರ್ ಹಾಗೂ ಹಾಡುಗಳಿಂದ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ಸಲಗ ಚಿತ್ರ, ಇದೀಗ ಒಂದು ಪ್ರಮೋಷನಲ್ ಹಾಡಿನ ಚಿತ್ರೀಕರಣ ಮಾಡೋದ್ರಲ್ಲಿ ಬ್ಯುಸಿಯಾಗಿದೆ. ಬೆಂಗಳೂರಿನ ವರ್ಲ್ಡ್ ಟ್ರೇಡ್ ಸೆಂಟರ್ ಮತ್ತು ಶರಟಾನ್ ಹೋಟೆಲ್ನಲ್ಲಿ ಸಲಗ ಪ್ರಮೋಷನಲ್ ಸಾಂಗ್ ಶೂಟಿಂಗ್ ನಡೆಯುತ್ತಿದೆ.
ಈ ಹಾಡಿನ ವಿಶೇಷ ಅಂದರೆ 70ರಿಂದ 75 ಜನ ಸಿದ್ದಿ ಕಲಾವಿದರು ಈ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿದ್ದಿ ಜನರ ಜೊತೆ ದುನಿಯಾ ವಿಜಯ್ ವಿಶೇಷ ಲುಕ್ನಲ್ಲಿ ಕಾಣಿಸಿಕೊಂಡು, ಸಿದ್ದಿ ಜನರ ಜೊತೆ ಮಸ್ತ್ ಸ್ಟೆಪ್ಸ್ ಹಾಕಲಿದ್ದಾರೆ.
ಸಂಗೀತ ನಿರ್ದೇಶಕ ಚರಣ್ ರಾಜ್ ಸಂಗೀತ ಸಂಯೋಜನೆಯ ಈ ಹಾಡಿಗೆ ಕೊರಿಯೋಗ್ರಾಫರ್ ಮುರಳಿ ಮಾಸ್ಟರ್ ನೇತೃತ್ವದಲ್ಲಿ ನೃತ್ಯ ಸಂಯೋಜನೆಯಾಗ್ತಿದೆ. 75ಕ್ಕೂ ಹೆಚ್ಚು ಜನ ನೃತ್ಯ ಕಲಾವಿದರೊಂದಿಗೆ ವಿಜಯ್ ಸ್ಟೆಪ್ಸ್ ಹಾಕಲಿದ್ದಾರೆ.
ಈ ಅದ್ಧೂರಿ ಪ್ರಮೋಷನಲ್ ಹಾಡನ್ನ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ನಿರ್ಮಾಣ ಮಾಡಲಿದ್ದಾರೆ. ಏಪ್ರಿಲ್ನಲ್ಲಿ ಪ್ರೇಕ್ಷಕರೆದುರಿಗೆ ಚಿತ್ರ ಬರಲಿದ್ದು, ಚಿತ್ರತಂಡ ಪ್ರಚಾರದ ಕೆಲಸಕ್ಕೆ ಕಿಕ್ ಸ್ಟಾರ್ಟ್ ಕೊಟ್ಟಿದೆ. ಈ ಹಾಡು ಸಲಗ ಚಿತ್ರಕ್ಕೆ ಎಷ್ಟು ಮುಖ್ಯ ಆಗಲಿದೆ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ.