ETV Bharat / sitara

ತಮಿಳಿನಲ್ಲೂ ರಿಲೀಸ್ ಆಗ್ತಿದ್ಯಾ 'ಸಲಗ'... ಟೈಟಲ್ ಹಾಡಿನ ಬಗ್ಗೆ ನಾಗೇಂದ್ರ ಪ್ರಸಾದ್ ಹೇಳಿದ್ದೇನು? - ತಮಿಳಿನಲ್ಲಿ ಬಿಡುಗಡೆಯಾಗಲಿರುವ ಸಲಗ

'ಸಲಗ' ಮೇಕಿಂಗ್ ವಿಡಿಯೋ ನೋಡಿದ ಮೇಲೆ ಈ ಸಿನಿಮಾವನ್ನು ಕಾಲಿವುಡ್ ಮಂದಿ ಕೂಡಾ ಸ್ವೀಕರಿಸುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಹಾಗಾಗಿ ಚಿತ್ರವನ್ನು ತಮಿಳಿನಲ್ಲಿ ಕೂಡಾ ಬಿಡುಗಡೆ ಮಾಡಲು ಪ್ಲಾನ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

Salaga
'ಸಲಗ'
author img

By

Published : Dec 19, 2019, 12:00 AM IST

ಸ್ಯಾಂಡಲ್​ವುಡ್​​​ನಲ್ಲಿ 'ಸಲಗ'ನ ಆರ್ಭಟ ಆರಂಭವಾಗಿದೆ. ಅದರಲ್ಲೂ ಇಂದು ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆಯಾದ ಮೇಲಂತೂ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. 'ಸಲಗ' ಚಿತ್ರತಂಡ ಬಹುತೇಕ ಚಿತ್ರೀಕರಣ ಮುಗಿಸಿದೆ. 'ದುನಿಯಾ' ಚಿತ್ರ ಬಿಡುಗಡೆ ಆದ ದಿನದಂದೇ 'ಸಲಗ' ಚಿತ್ರವನ್ನೂ ಬಿಡುಗಡೆ ಮಾಡಲು ಚಿತ್ರತಂಡ ಸಾಕಷ್ಟು ಶ್ರಮ ವಹಿಸುತ್ತಿದೆ.

'ಸಲಗ' ಸುದ್ದಿಗೋಷ್ಟಿ

ಚಿತ್ರದ ಮೇಕಿಂಗ್ ವಿಡಿಯೋ ನೋಡಿದ ಮೇಲೆ ಈ ಸಿನಿಮಾವನ್ನು ಕಾಲಿವುಡ್ ಮಂದಿ ಕೂಡಾ ಸ್ವೀಕರಿಸುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಹಾಗಾಗಿ ಚಿತ್ರವನ್ನು ತಮಿಳಿನಲ್ಲಿ ಬಿಡುಗಡೆ ಮಾಡಬಹುದು ಎಂಬ ಮಾತು ಕೇಳಿಬರುತ್ತಿದೆ. ಕಾಲಿವುಡ್​​​ನಲ್ಲಿ ಚಿತ್ರ ಬಿಡುಗಡೆ ಮಾಡಲು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದು ಸ್ವತ: ನಿರ್ಮಾಪಕ ಶ್ರೀಕಾಂತ್ ಕೂಡಾ ಹೇಳಿದ್ದಾರೆ.

ಇನ್ನು, ಇಂದಿನ ಸುದ್ದಿಗೋಷ್ಟಿಯಲ್ಲಿ ದುನಿಯಾ ವಿಜಯ್​​​ ಕಷ್ಟದ ದಿನಗಳಲ್ಲಿ ತಮಗೆ ಸಹಾಯ ಮಾಡಿದ ಸಾಹಿತಿ ನಾಗೇಂದ್ರ ಪ್ರಸಾದ್ ಅವರಿಗೆ ಧನ್ಯವಾದ ಅರ್ಪಿಸಿದರು. ಈ ವೇಳೆ ನಾಗೇಂದ್ರ ಪ್ರಸಾದ್ ಕೂಡಾ ಹಾಜರಿದ್ದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನಾಗೇಂದ್ರ ಪ್ರಸಾದ್​​, ಸ್ಟಾರ್ ನಟರ ಸಿನಿಮಾಗಳ ಶಿರ್ಷಿಗೆ ಗೀತೆಗಳ ಬಗ್ಗೆ ಮಾತನಾಡಿದರು.

ಚಿ. ಉದಯಶಂಕರ್ ಅವರ ಕಾಲದಿಂದಲೂ ಓರ್ವ ನಾಯಕ ನಟನ ಇಮೇಜನ್ನು ಹೊಸದಾಗಿ ಕಟ್ಟಿಕೊಡುತ್ತಾ ಬರಲಾಗಿದೆ. ಅದೇ ನಿಟ್ಟಿನಲ್ಲಿ 'ಟಗರು' ಚಿತ್ರದ ಟೈಟಲ್ ಹಾಡು ಕೂಡಾ ಹುಟ್ಟಿತು. 'ಟಗರು' ಟೈಟಲ್, ಶಿವಣ್ಣನ ಇಮೇಜ್ ಹಾಗೂ ರೌಡಿಸಂ ಮೂರನ್ನೂ ಗುಣಾಕಾರ ಮಾಡಿ ಹಾಡು ಬರೆದುಕೊಂಡುವಂತೆ ನಿರ್ದೇಶಕ ಸೂರಿ ನನಗೆ ಡಿಮ್ಯಾಂಡ್ ಮಾಡಿದ್ದರು ಎಂದು ಹೇಳಿದ್ದರು.

ಜೊತೆಗೆ 'ಟಗರು' ಹಾಡಿನಂತೆಯೇ ದುನಿಯಾ ಮ್ಯಾನರಿಸಂಗೆ ತಕ್ಕಂತೆ ಹಾಗೂ ಕಾಡಿನಲ್ಲಿ ಅಲೆಯುವ ಸಲಗ ನಾಡಿಗೆ ಬಂದರೆ ಹೇಗಿರುತ್ತದೆ ಎಲ್ಲವನ್ನೂ ಸೇರಿಸಿ ಈ ಚಿತ್ರಕ್ಕೆ ಕೂಡಾ ಟೈಟಲ್ ಹಾಡು ಬರೆಯುತ್ತಿರುವುದಾಗಿ ನಾಗೇಂದ್ರ ಪ್ರಸಾದ್ ಹೇಳಿದರು.

Intro:ಯಾವುದೇ ಕಲಾವಿದರ ಇಮೇಜನ್ನು ಕಟ್ಟಿಕೊಡುವಲ್ಲಿ ಚಿತ್ರಗೀತೆ ಪಾತ್ರ ತುಂಭಾ ಮಹತ್ವದಾಗಿರುತ್ತದೆ ಎಂದು ಸಾಹಿತಿ ವಿ,ನಾಗೇಂದ್ರ ಪ್ರಸಾದ್ ಹೇಳಿದ್ದಾರೆ.ಸಲಗ ಚಿತ್ರದ ಮೇಕಿಂಗ್ ವಿಡಿಯೋ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅಕ್ಷರ ಬ್ರಹ್ಮ ವಿ ನಾಗೇಂದ್ರ ಪ್ರಸಾದ್, ಸ್ಟಾರ್ ನಟರ ಸಿನಿಮಾಗಳ ಟೈಟಲ್ ಟ್ರಾಕ್ ಗಳ ಸಿಕ್ರೇಟ್ ಬಿಚ್ವಿಟ್ಟರು. ಚಿ, ಉದಯಶಂಕರ್ ಅವರ ಕಾಲದಿಂದಲೂ ಒಬ್ಬ ನಾಯಕ ನಟನ ಇಮೇಜನ್ ಹೊಸದಾಗಿ ಕಟ್ಟಿಕೊಡುತ್ತ ಬಂದಿದ್ದು, ಹೀರೋ ಇಮೇಜ್ ಗಿಂತ ಹೆಚ್ಚ ಭಿನ್ನವಾಗಿ ಏನು ಮಾಡಬೇಕು ಎಂಬ ಅಲೋಚನೆ ಯಾವಗಲು ಇರುತ್ತೆ.ಅದೇ ನಿಟ್ಟಿನಲ್ಲಿ ಟಗರು ಚಿತ್ರದ ಟೈಟಲ್ ಟ್ರಾಕ್ ಹುಟ್ಟಿತು. ನಿರ್ದೇಶಕ ಸೂರಿ" ಟಗರು " ಟೈಟಲ್ ಶಿವಣ್ಣನ ಇಮೇಜ್ ಹಾಗೂ ರೈಡಿಸಂ ಮೂರನ್ನು ಗುಣಾಕಾರ ಮಾಡಿ ಸಾಂಗ್ ಕೊಡುವಂತೆ ಡಿಮ್ಯಾಂಡ್ ಮಾಡಿದ್ರು.

Body:ಅಲ್ಲದೆ ಟಗರು ಕ್ಯಾರೆಕ್ಟರ್ ಒಬ್ಬ ಮನುಷ್ಯನಿಗೆ ಇದ್ರೆ ಹೇಗಿರುತ್ತೆ,
ಅದನ್ನು ಬಳಸಿ ಆ ಹಾಡನ್ನು ಬರೆದೆ. ಗಡಿಗೆಯ ತುಂಭಾ ಏನಾದ್ರು ಇದ್ರೆ ಅದು ಸೌಟಿನಲ್ಲಿ ಬರುತ್ತೆ ,ಅದ್ರೆ ಗಡಿಗೆ ಖಾಲಿ ಇದ್ರೆ ಸೌಟಿನಲ್ಲಿ ಏನು ಬರಲ್ಲ ಎನ್ನುವ ಮೂಲಕ ಶಿವಣ್ಣ ತುಂಭಿದ ಕೊಡ ಎಂದು ಸಾಹಿತಿ ವಿನಾಗೇಂದ್ರ ಪ್ರಸಾದ್ ಹೇಳಿದ್ರು.ಅಲ್ಲದೆ ಈಗ ಸಲಗ ಚಿತ್ರದಲ್ಲೂ ಟೈಟಲ್ ಟ್ರಾಕ್ ಬರಿತಿದ್ದು, ದುನಿಯಾ ವಿಜಯ್ ಮ್ಯಾನರಿಂಸಂ ಹಾಗೂ ಕಾಡಿನಲ್ಲಿ ಅಲೆಯುವ ಸಲಗ ನಾಡಿಗೆ ಬಂದ್ರೆ ಹೇಗಿರುತ್ತೆ ಎಲ್ಲವನ್ನೂ ಸೇರಿಸಿ ಸಲಗ ಟೈಟಲ್ ಟ್ರಾಕ್ ಬರೆಯುವುದಾಗಿ ನಾಗೇಂದ್ರ ಪ್ರಸಾದ್ ಹೇಳಿದ್ರು.

ಸತೀಶ ಎಂಬಿ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.