ಸಾಯಿ ಪಲ್ಲವಿ ಎಲ್ಲರ ಮೋಸ್ಟ್ ಫೇವರೆಟ್ ನಟಿ. ಡ್ಯಾನ್ಸಿಂಗ್ ಶೋನಲ್ಲಿ ಭಾಗವಹಿಸುವ ಮೂಲಕ ಸಿನಿಮಾ ಇಂಡಸ್ಟ್ರಿಗೆ ಪರಿಚಯವಾದ ಈ ಪಿಂಪಲ್ ಬ್ಯೂಟಿ ತಮಿಳಿನ 'ಕಸ್ತೂರಿ ಮಾನ್', 'ಧಾಮ್ ಧೂಮ್' ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡರೂ ಮಲಯಾಳಂನ 'ಪ್ರೇಮಂ' ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಿದವರು.
ಇನ್ನು ಈ ನಟಿ ಸ್ಕಿನ್ ಶೋ ಕೂಡಾ ಮಾಡದೆ ಕಡಿಮೆ ಸಮಯದಲ್ಲೇ ದೊಡ್ಡ ಹೆಸರು ಮಾಡಿದಾಕೆ. ಸೆಲ್ವ ರಾಘವನ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಎನ್ಜಿಕೆ (ನಂದ ಗೋಪಾಲ ಕುಮಾರನ್) ಸಿನಿಮಾದಲ್ಲಿ ಪಲ್ಲವಿ ಖ್ಯಾತ ನಟ ಸೂರ್ಯ ಅವರೊಂದಿಗೆ ನಟಿಸಿದ್ದಾರೆ. ಯಾವುದೇ ಡೈಲಾಗ್ ಇದ್ದರೂ ಭಾವನೆಗೆ ತಕ್ಕಂತೆ ಅಭಿನಯಿಸುವ ಪಲ್ಲವಿಗೆ ಸೂರ್ಯ ಜೊತೆ ನಟಿಸುವಾಗ ಒಂದು ಶಾಟ್ಗೆ 50 ಟೇಕ್ಸ್ ತೆಗೆದುಕೊಂಡಿದ್ದಾರಂತೆ. ಇದಕ್ಕೆ ಸೂರ್ಯ ಕೂಡಾ ಸ್ವಲ್ಪವೂ ಬೇಸರ ಮಾಡಿಕೊಳ್ಳದೆ ತಾಳ್ಮೆಯಿಂದಲೇ ಪಲ್ಲವಿ ಶಾಟ್ ಓಕೆ ಮಾಡುವವರೆಗೂ ಸಹಕರಿಸಿದ್ದಾರಂತೆ. ಈ ವಿಷಯವನ್ನು ಸ್ವತ: ಪಲ್ಲವಿ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಸೂರ್ಯ ಅವರ ಜೊತೆ ಮತ್ತೊಂದು ಸಿನಿಮಾ ಮಾಡಬೇಕು ಎಂದು ಕೂಡಾ ಪಲ್ಲವಿ ತಮ್ಮ ಆಸೆ ವ್ಯಕ್ತಪಡಿಸಿದ್ದಾರೆ.
ಡ್ರೀಮ್ ವಾರಿಯರ್ ಪಿಕ್ಚರ್ಸ್ ಬ್ಯಾನರ್ ಅಡಿ ತಯಾರಾಗುತ್ತಿರುವ NGK, ಪೊಲಿಟಿಕಲ್ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದೆ. ಸೂರ್ಯ, ರಕುಲ್ ಪ್ರೀತ್ ಸಿಂಗ್, ಸಾಯಿ ಪಲ್ಲವಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಮೇ 31 ರಂದು ಬಿಡುಗಡೆಯಾಗಲಿದೆ.