ಡಾನ್ಸ್ ವಿಚಾರದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಅವರದು ಎತ್ತಿದ ಕೈ. 50 ಪ್ಲಸ್ ವಯಸ್ಸಾದರೂ ನವಯುವಕರನ್ನು ನಾಚಿಸುವಂತೆ ಸ್ಟೆಪ್ ಹಾಕುತ್ತಾರೆ ಈ ಕರುನಾಡ ಚಕ್ರವರ್ತಿ.
ಇದೀಗ ಶಿವಣ್ಣನ ಭರ್ಜರಿ ಡಾನ್ಸ್ ನೋಡೋ ಸೌಭಾಗ್ಯ ರುಸ್ತುಂ ಚಿತ್ರದ ಮೂಲಕ ಅಭಿಮಾನಿಗಳಿಗೆ ಒದಗಿ ಬಂದಿದೆ. ಹ್ಯಾಟ್ರಿಕ್ ಹೀರೋ ಶಿವಣ್ಣ ಕೆಲ ದಿನಗಳ ಹಿಂದೆಯಷ್ಟೆ ಕಲರ್ ಫುಲ್ ಕಾಸ್ಟ್ಯೂಮ್ ತೊಟ್ಟು, ಶ್ರದ್ಧಾ ಶ್ರೀನಾಥ್ ಜೊತೆ ಬೊಂಬಾಟ್ ಸ್ಟೆಪ್ ಹಾಕಿದ್ರು. ಇಂದು ಈ ಸಾಂಗ್ನ ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ.
- " class="align-text-top noRightClick twitterSection" data="">
'ಯೂ ಆರ್ ಮೈ ಪೊಲೀಸ್ ಬೇಬಿ' ಸಾಂಗ್ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆ ಆಗಿದೆ. ಈ ಹಾಡಿಗೆ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಕೋರಿಯೋಗ್ರಾಫ್ ಮಾಡಿದ್ದು, ಎ.ಪಿ.ಅರ್ಜುನ್ ಬರೆದಿರುವ ಗೀತೆಗೆ ರಘು ದೀಕ್ಷಿತ್ ಹಾಗು ಅಪೂರ್ವ ಶ್ರೀಧರ್ ಧ್ವನಿಯಾಗಿದ್ದಾರೆ. ಅನೂಪ್ ಸೀಳಿನ್ ಕ್ಯಾಚೀ ಟ್ಯೂನ್ಸ್ ಹಾಕಿದ್ದಾರೆ.
ಇನ್ನು ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನವಿರೋ 'ರುಸ್ತುಂ' ಚಿತ್ರನ್ನು ನಿರ್ಮಾಪಕರಾದ ಜಯಣ್ಣ ಭೋಗೇಂದ್ರ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.