ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ' ಚಿತ್ರದ ಚಿತ್ರೀಕರಣ ಮುಗಿದಿದೆ. ಇನ್ನೊಂದು ವಾರದ ಪ್ಯಾಚ್‍ವರ್ಕ್ ಮುಗಿದರೆ, ಚಿತ್ರದ ಚಿತ್ರೀಕರಣ ಸಂಪೂರ್ಣ ಮುಗಿದಂತಾಗುತ್ತದೆ. ಈ ಮಧ್ಯೆ, `'ಸಪ್ತ ಸಾಗರದಾಚೆ ಎಲ್ಲೋ' ಎಂಬ ಅವರ ಮುಂದಿನ ಚಿತ್ರದ ಪ್ರೀ - ಪ್ರೊಡಕ್ಷನ್ ಕೆಲಸಗಳು ಬಹಳ ಜೋರಾಗಿ ನಡೆದಿದ್ದು, ನಾಯಕಿಯ ಆಯ್ಕೆಯೂ ಆಗಿದೆ.
ಚಿತ್ರಕ್ಕೆ ರುಕ್ಮಿಣಿ ವಸಂತ್ ಕುಮಾರ್ ನಾಯಕಿಯಾಗಿ ಆಯ್ಕೆಯಾಗಿದ್ದು, ಇಂದು ಚಿತ್ರತಂಡದಿಂದ ಅಧಿಕೃತ ಪ್ರಕಟಣೆ ಹೊರಬೀಳಲಿದೆ. ರುಕ್ಮಿಣಿ ಬಗ್ಗೆ ಗೊತ್ತಿಲ್ಲದವರು, ಈಕೆ ಯಾರೋ ಹೊಸಬರಿರಬೇಕು ಅಂದುಕೊಂಡಿರಬಹುದು. ರುಕ್ಮಿಣಿ ಇದಕ್ಕೂ ಮುನ್ನ ಎಂ.ಜಿ. ಶ್ರೀನಿವಾಸ್ ಅಭಿನಯದ ಮತ್ತು ನಿರ್ದೇಶನದ `ಬೀರ್‍ಬಲ್' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಆ ಚಿತ್ರ ಬಿಡುಗಡೆಯಾಗಿ ಎರಡು ವರ್ಷಗಳಾಗಿರುವುದರಿಂದ ಮತ್ತು ಈ ಮಧ್ಯೆ ರುಕ್ಮಿಣಿ ಯಾವುದೇ ಚಿತ್ರದಲ್ಲೂ ನಟಿಸಿಲ್ಲವಾದ್ದರಿಂದ ಆಕೆಯ ಬಗ್ಗೆ ಮರೆತು ಹೋಗುವಂತೆ ಆಗಿದೆ. ಈಗ `ಸಪ್ತ ಸಾಗರದಾಚೆ ಎಲ್ಲೋ' ಚಿತ್ರದಲ್ಲಿ ರುಕ್ಮಿಣಿ ಬಹಳ ಇಂಟೆನ್ಸ್ ಆದಂತಹ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
-
Welcoming onboard @rukminitweets as Priya of #SSE 😊@hemanthrao11 @Pushkara_M @PushkarFilms pic.twitter.com/hRdpfsLTZ7
— Rakshit Shetty (@rakshitshetty) February 3, 2021 " class="align-text-top noRightClick twitterSection" data="
">Welcoming onboard @rukminitweets as Priya of #SSE 😊@hemanthrao11 @Pushkara_M @PushkarFilms pic.twitter.com/hRdpfsLTZ7
— Rakshit Shetty (@rakshitshetty) February 3, 2021Welcoming onboard @rukminitweets as Priya of #SSE 😊@hemanthrao11 @Pushkara_M @PushkarFilms pic.twitter.com/hRdpfsLTZ7
— Rakshit Shetty (@rakshitshetty) February 3, 2021
ಇನ್ನು,`ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಮುಹೂರ್ತ ಸದ್ಯದಲ್ಲೇ ನಡೆಯಲಿದ್ದು, ಈ ತಿಂಗಳ ಕೊನೆಯಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ರಕ್ಷಿತ್ ಅವರ ಹಿಂದಿನ ಚಿತ್ರಗಳಂತೆ ಈ ಚಿತ್ರದ ಚಿತ್ರೀಕರಣ ಬೇರೆ ಊರುಗಳಲ್ಲಿ ಮಾಡಬೇಕಿಲ್ಲವಂತೆ.
ಇದನ್ನೂ ಓದಿ : ತುರಹಳ್ಳಿ ಅರಣ್ಯ ಪರಿಸರದಲ್ಲಿ ಕಾಂಕ್ರೀಟಿಕರಣ ನಡೆಸದಂತೆ ನಟ ಅನಿರುದ್ಧ್ ಮನವಿ
ಹಾಗೆಯೇ ಚಿತ್ರದ ಬಜೆಟ್ ಸಹ ದೊಡ್ಡದಲ್ಲವಂತೆ. ಇದೊಂದು ಸರಳ ಪ್ರೇಮಕಥೆಯಾಗಿದ್ದು, ಬೆಂಗಳೂರು ಮತ್ತು ಮೈಸೂರಿನ ಸುತ್ತ ಚಿತ್ರೀಕರಣ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ, ಹೆಚ್ಚು ದಿನಗಳ ಚಿತ್ರೀಕರಣದ ಅವಶ್ಯಕತೆ ಇಲ್ಲದಿರುವುದರಿಂದ, ಮುಂದಿನ ಮೂರ್ನಾಲ್ಕು ತಿಂಗಳುಗಳಲ್ಲಿ ಚಿತ್ರದ ಚಿತ್ರೀಕರಣ ಮುಗಿದು, ಇದೇ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆಯಂತೆ.
ಸಪ್ತ ಸಾಗರದಾಚೆ ಎಲ್ಲೋ' ಚಿತ್ರವನ್ನು ಪುಷ್ಕರ್ ಫಿಲಂಸ್‍ನಡಿ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಿಸಿದರೆ, `ಗೋಧಿಬಣ್ಣ ಸಾಧಾರಣ ಮೈಕಟ್ಟು' ಮತ್ತು `ಕವಲುದಾರಿ' ಚಿತ್ರಗಳನ್ನು ನಿರ್ದೇಶಿಸಿದ್ದ ಹೇಮಂತ್ ರಾವ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.