ಮುಂಬೈ: ಬಾಹುಬಲಿ ಖ್ಯಾತಿಯ ರಾಜಮೌಳಿಯ ಬಹುನಿರೀಕ್ಷಿತ ಚಿತ್ರ RRR ಬಿಡುಗಡೆ ದಿನಾಂಕ ಮತ್ತೊಮ್ಮೆ ಮುಂದೂಡಿಕೆಯಾಗಿದೆ. ಇದರಿಂದ ಸಿನಿ ಪ್ರೀಯರಿಗೆ ಮತ್ತಷ್ಟು ನಿರಾಸೆಯಾಗಿದೆ. ಈಗಾಗಲೇ ಲಭ್ಯವಾಗಿದ್ದ ಮಾಹಿತಿ ಪ್ರಕಾರ ಚಿತ್ರ ಮುಂದಿನ ತಿಂಗಳು ಅಕ್ಟೋಬರ್ 21ಕ್ಕೆ ರಿಲೀಸ್ ಆಗಲಿದೆ ಎನ್ನಲಾಗಿತ್ತು. ಆದರೆ, ಇದಕ್ಕೆ ಸಂಬಂಧಿಸಿದಂತೆ ಚಿತ್ರತಂಡ ಇಂದು ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ.
-
Post production nearly done to have #RRRMovie ready by October’21.
— RRR Movie (@RRRMovie) September 11, 2021 " class="align-text-top noRightClick twitterSection" data="
But as known to many, we are postponing the release but cannot announce a new date with theatres indefinitely closed.
We will release at the earliest possible date when the world cinema markets are up and running.
">Post production nearly done to have #RRRMovie ready by October’21.
— RRR Movie (@RRRMovie) September 11, 2021
But as known to many, we are postponing the release but cannot announce a new date with theatres indefinitely closed.
We will release at the earliest possible date when the world cinema markets are up and running.Post production nearly done to have #RRRMovie ready by October’21.
— RRR Movie (@RRRMovie) September 11, 2021
But as known to many, we are postponing the release but cannot announce a new date with theatres indefinitely closed.
We will release at the earliest possible date when the world cinema markets are up and running.
ಈಗಾಗಲೇ ಶೂಟಿಂಗ್ ಹಾಗೂ ನಿರ್ಮಾಣಕ್ಕೆ ಸಂಬಂಧಿಸಿರುವ ಎಲ್ಲ ಕೆಲಸ ಮುಗಿಸಿರುವ ಆರ್ಆರ್ಆರ್, ಅಕ್ಟೋಬರ್ 21ರಂದು ರಿಲೀಸ್ ಮಾಡುವುದಾಗಿ ಹೇಳಿಕೊಂಡಿತ್ತು. ಆದರೆ, ಇದೀಗ ಮಾಹಿತಿ ಹಂಚಿಕೊಂಡಿರುವ ಚಿತ್ರತಂಡ, ಅಕ್ಟೋಬರ್ ತಿಂಗಳಲ್ಲಿ ಆರ್ಆರ್ಆರ್ ಚಿತ್ರ ರಿಲೀಸ್ ಮಾಡಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ವೈರಸ್ನಿಂದ ಅನೇಕ ರೀತಿಯ ತೊಂದರೆಯಾಗಿದ್ದು, ಹೀಗಾಗಿ ಸಿನಿಮಾ ರಿಲೀಸ್ ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿಸಿದೆ. ಮುಂದಿನ ದಿನಾಂಕ ಆದಷ್ಟ ಬೇಗ ತಿಳಿಸುವುದಾಗಿ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಕೋವಿಡ್ ಕಾರಣ ಸದ್ಯ ಬಹುತೇಕ ಎಲ್ಲ ಚಿತ್ರ ಮಂದಿರಗಳು ಬಂದ್ ಆಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಸಿನಿಮಾ ರಿಲೀಸ್ ಮಾಡಲು ಸಾಧ್ಯವಿಲ್ಲ. ಚಿತ್ರ ರಿಲೀಸ್ ಆಗುವ ಮುಂದಿನ ದಿನಾಂಕ ಈಗಲೇ ನಾವು ಪ್ರಕಟಿಸುತ್ತಿಲ್ಲ. ಎಲ್ಲವೂ ಸಹಜ ಸ್ಥಿತಿಗೆ ಬಂದ ಬಳಿಕ ಚಿತ್ರ ಬಿಡುಗಡೆಯ ದಿನಾಂಕದ ಬಗ್ಗೆ ಮಾಹಿತಿ ಹಂಚಿಕೊಳ್ಳುವುದಾಗಿ ತಿಳಿಸಿದೆ.
ಎಲ್ಲವೂ ಸರಿಯಾಗಿದಿದ್ದರೆ ಚಿತ್ರ ಜುಲೈ 30, 2020ರಲ್ಲೇ ಸಿನಿಮಾ ರಿಲೀಸ್ ಆಗಬೇಕಾಗಿತು. ಆದರೆ, ಕೊರೊನಾ ಕಾರಣ ರಿಲೀಸ್ ದಿನಾಂಕ ಮುಂದೂಡಿಕೆ ಮಾಡಲಾಗಿತು.
ಇದನ್ನೂ ಓದಿರಿ: Namo ನಾಡಲ್ಲಿ ದಿಢೀರ್ ರಾಜಕೀಯ ಬೆಳವಣಿಗೆ... ರೂಪಾನಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ಯಾಕೆ!?
ತೆಲುಗು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಾಮ್ ಭೀಮ್ ಅವರ ಜೀವನ ಆಧಾರಿತ ಚಿತ್ರ ಇದಾಗಿದೆ. ಬರೋಬ್ಬರಿ 450 ಕೋಟಿ ರೂ.ಗಳ ಬಜೆಟ್‌ನಲ್ಲಿ ಈ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ. ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಅತ್ಯಂತ ನಿರೀಕ್ಷೆ ಮೂಡಿಸಿರುವ ಚಿತ್ರವನ್ನ ಇದೇ ಅಕ್ಟೋಬರ್ 21 ರಂದು ಬಿಡುಗಡೆ ಮಾಡಲು ಚಿತ್ರ ತಂಡ ನಿರ್ಧರಿಸಿತ್ತು.