ETV Bharat / sitara

ಆರ್​ಆರ್​ಆರ್​ ಪ್ರಿ ರಿಲೀಸ್ ಈವೆಂಟ್ ​: ಮೆಗಾಪವರ್ ಸ್ಟಾರ್-ಯಂಗ್ ಟೈಗರ್​ನ ನೋಡಲು ಮುಗಿಬಿದ್ದ ಫ್ಯಾನ್ಸ್‌ - ಚಿಕ್ಕಬಳ್ಳಾಪುರದಲ್ಲಿ ಆರ್​ಆರ್​ ಆರ್​ ಕಾರ್ಯಕ್ರಮ

ನೆಚ್ಚಿನ ನಟನನ್ನ ನೋಡಲು ಅಭಿಮಾನಿಗಳು, ಸೌಂಡ್ ಸಿಸ್ಟಮ್​​ಗೆ ಹಾಕಿದ್ದ ಸ್ಟೇಜ್ ಮೇಲೆ ಏರಿ ಕುಳಿತ್ತಿದ್ದರು. ಈ ಅಭಿಮಾನಿಗಳನ್ನ ಕೆಳಗೆ ಇಳಿಸಲು ಪೊಲೀಸರು ಕೂಡ ಹರಸಾಹಸ ಪಡಬೇಕಾಯಿತ್ತು. ಲಕ್ಷಾಂತರ ಜನ ಆರ್​ಆರ್​ಆರ್​​​ ಸಿನಿಮಾ ಈವೆಂಟ್​​ಗೆ ಬಂದಿದ್ದರು. ದೂರದ ಊರುಗಳಿಂದ ಬಂದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಸರ್ಕಸ್ ಮಾಡಬೇಕಾಯಿತು..

rrr-movie-pre-release-event-in-chikkaballapur
ಆರ್​ಆರ್​ಆರ್​ ಪ್ರಿ ರಿಲೀಸ್ ಈವೆಂಟ್​: ಮೆಗಾಪವರ್ ಸ್ಟಾರ್ ಹಾಗೂ ಯಂಗ್ ಟೈಗರ್​ನನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು
author img

By

Published : Mar 20, 2022, 4:29 PM IST

ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿ ಅಲ್ಲದೇ ಭಾರತೀಯ ಚಿತ್ರರಂಗದಲ್ಲಿ ಟೈಟಲ್ ಹಾಗೂ ಹಾಡುಗಳಿಂದಲೇ ಕ್ರೇಜ್ ಹುಟ್ಟಿಸಿರೋ ಬಹು ನಿರೀಕ್ಷಿತ ಚಿತ್ರ ಆರ್​ಆರ್​ಆರ್​. ಟಾಲಿವುಡ್ ಚಿತ್ರರಂಗದ ಇಬ್ಬರು ಸ್ಟಾರ್​ಗಳಾದ ಮೆಗಾ ಪವರ್ ಸ್ಟಾರ್ ರಾಮ್‌ಚರಣ್ ತೇಜಾ ಹಾಗೂ ಯಂಗ್ ಟೈಗರ್ ಎನ್‌ಟಿಆರ್ ಅಭಿನಯದ ಚಿತ್ರ ಆರ್​ಆರ್​​ಆರ್. ಈ ಚಿತ್ರ ಬಿಡುಗಡೆಗೂ ಮುನ್ನ ಕರ್ನಾಟಕದ ಚಿಕ್ಕಬಳ್ಳಾಪುರದ ಅಗಲಗುರ್ಕಿಯಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮ ಮಾಡಲಾಗಿತ್ತು.

ಈ ಕಾರ್ಯಕ್ರಮಕ್ಕೆ ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ಬಂದಿದ್ದರು. ರಾಮ್ ಚರಣ್ ತೇಜಾ ಹಾಗೂ ಜ್ಯೂನಿಯರ್ ಎನ್​ಟಿಆರ್ ಫ್ಯಾನ್ಸ್ ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿದ್ದರು. 60 ಎಕರೆ ಜಾಗದಲ್ಲಿ ನಡೆದ ಕಾರ್ಯಕ್ರಮ, ಎಲ್ಲಿ ನೋಡಿದರು ಅಭಿಮಾನಿಗಳಿಂದ ತುಂಬಿ ಹೋಗಿತ್ತು. ಈ ಲಕ್ಷಾಂತರ ಅಭಿಮಾನಿಗಳ ಮಧ್ಯೆ ಪವರ್ ಸ್ಟಾರ್ ಭಾವಚಿತ್ರವನ್ನ ಹೊತ್ತು ಕನ್ನಡ ಅಭಿಮಾನಿಗಳ ಗಮನ ಸೆಳೆದರು.

ರಾಮ್ ಚರಣ್ ತೇಜಾ ಹಾಗೂ ಜ್ಯೂನಿಯರ್ ಎನ್​ಟಿಆರ್ ಫ್ಯಾನ್ಸ್ ತಮ್ಮ ನೆಚ್ಚಿನ ನಟನ ಭಾವಚಿತ್ರ ಇರುವ ಬಾವುಟಗಳನ್ನ ಹಿಡಿದು, ಜೈಕಾರ ಹಾಕುವ ಮೂಲಕ ಸಂಭ್ರಮಿಸಿದರು. ತಮ್ಮ ನೆಚ್ಚಿನ ನಟ ಮತ್ತು ಸಿನಿಮಾದ ಬಗ್ಗೆ ಅಭಿಮಾನಿಗಳು ಸಂಭ್ರಮ ಹಂಚಿಕೊಂಡರು. ಮೊದಲೇ ಹೇಳುವಂತೆ ಲಕ್ಷಕ್ಕೂ ಹೆಚ್ಚು ಜನರು ಬರುವ ನಿರೀಕ್ಷೆ ಇತ್ತು. ಈ ಕಾರಣಕ್ಕೆ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿತ್ತು.

ನೆಚ್ಚಿನ ನಟನನ್ನ ನೋಡಲು ಅಭಿಮಾನಿಗಳು, ಸೌಂಡ್ ಸಿಸ್ಟಮ್​​ಗೆ ಹಾಕಿದ್ದ ಸ್ಟೇಜ್ ಮೇಲೆ ಏರಿ ಕುಳಿತ್ತಿದ್ದರು. ಈ ಅಭಿಮಾನಿಗಳನ್ನ ಕೆಳಗೆ ಇಳಿಸಲು ಪೊಲೀಸರು ಕೂಡ ಹರಸಾಹಸ ಪಡಬೇಕಾಯಿತ್ತು. ಲಕ್ಷಾಂತರ ಜನ ಆರ್​ಆರ್​ಆರ್​​​ ಸಿನಿಮಾ ಈವೆಂಟ್​​ಗೆ ಬಂದಿದ್ದರು. ದೂರದ ಊರುಗಳಿಂದ ಬಂದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಸರ್ಕಸ್ ಮಾಡಬೇಕಾಯಿತು.

ಮತ್ತೊಂದು ಕಡೆ ಅಭಿಮಾನಿಗಳ ಅತಿರೇಕ ಕೂಡ ಶುರುವಾಯ್ತು. ಪೊಲೀಸರ ಮೇಲೆ ಚಪ್ಪಲಿ ಹಾಗೂ ಕುರ್ಚಿಗಳನ್ನ ಎಸೆಯುವ ಮೂಲಕ ಪೊಲೀಸರ ಕೋಪಕ್ಕೆ ತುತ್ತಾದರು. ಬಳಿಕ ಪೊಲೀಸರು ಅಭಿಮಾನಿಗಳನ್ನ ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು. ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ಬಂದಿದ್ದ ಅಭಿಮಾನಿಗಳನ್ನು ನೋಡಿ ನಿರ್ದೇಶಕ ಎಸ್.ಎಸ್.ರಾಜಮೌಳಿ, ರಾಮ್ ಚರಣ್ ತೇಜಾ, ಜ್ಯೂನಿಯರ್ ಎನ್​ಟಿಆರ್ ಮನ ಸೋತರು.

ಇದನ್ನೂ ಓದಿ: ರಾಜ್ಯದಲ್ಲಿ ಕನ್ನಡದಲ್ಲೇ ಆರ್​​ಆರ್​ಆರ್​ ಸಿನಿಮಾ ರಿಲೀಸ್​​ ಮಾಡಲು ರಾಜಮೌಳಿಗೆ​​ ಶಿವಣ್ಣ ಮನವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.