ETV Bharat / sitara

ಕೋವಿಡ್​ ಫಂಡ್​ಗೆ 25 ಲಕ್ಷ ನೀಡಿದ್ದೇನೆ, 1 ಲಕ್ಷ ರೂ. ದಂಡ ಕಟ್ಟಲ್ಲ: ಕೋರ್ಟ್‌ಗೆ ತಿಳಿಸಿದ ದಳಪತಿ ವಿಜಯ್ - ನಟ ದಳಪತಿ ವಿಜಯ್​

ಈಗಾಗಲೇ ಮುಖ್ಯಮಂತ್ರಿಗಳ ಕೋವಿಡ್​ ರಿಲೀಫ್​ ಫಂಡ್​ಗೆ 25 ಲಕ್ಷ ರೂ. ನೀಡಿದ್ದು, 1 ಲಕ್ಷ ರೂ. ದಂಡ ನೀಡಲು ಸಾಧ್ಯವಿಲ್ಲ ಎಂದು ದಳಪತಿ ವಿಜಯ್​ ಪರ ವಕೀಲರು ಕೋರ್ಟ್​ನಲ್ಲಿ ತಿಳಿಸಿದ್ದಾರೆ.

Vijay
Vijay
author img

By

Published : Jul 28, 2021, 9:10 PM IST

ಚೆನ್ನೈ(ತಮಿಳುನಾಡು): ವಿದೇಶದಿಂದ ಐಷಾರಾಮಿ ರೋಲ್ಸ್​ ರಾಯ್ಸ್​ ಘೋಸ್ಟ್​ ಕಾರು ಆಮದು ಮಾಡಿಕೊಂಡು ತೆರಿಗೆ ಕಟ್ಟುವುದರಲ್ಲಿ ವಿನಾಯಿತಿ ಕೇಳಿದ್ದ ನಟ ವಿಜಯ್​ಗೆ 1ಲಕ್ಷ ರೂ. ದಂಡ ಕಟ್ಟುವಂತೆ ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ​ ಆದೇಶ ನೀಡಿತ್ತು. ಇದರ ಜೊತೆಗೆ ಅವರ ವಿರುದ್ಧ ವಾಗ್ದಾಳಿ ನಡೆಸಿತ್ತು.

ಈ ಪ್ರಕರಣದ ವಿಚಾರಣೆ ಇಂದು ನಡೆದಿದ್ದು, ಈ ವೇಳೆ ನಟ ವಿಜಯ್​ ಪರ ವಕೀಲರು ಈಗಾಗಲೇ ಕೋವಿಡ್​ ರಿಲೀಫ್ ಫಂಡ್​ಗೆ 25 ಲಕ್ಷ ರೂ. ನೀಡಿರುವೆ, ಹೀಗಾಗಿ 1 ಲಕ್ಷ ರೂಪಾಯಿ ದಂಡ ಕಟ್ಟುವುದಿಲ್ಲ ಎಂದು ಮದ್ರಾಸ್​ ಹೈಕೋರ್ಟ್​ಗೆ ತಿಳಿಸಿದ್ದಾರೆ.

Rolls Royce case
1 ಲಕ್ಷ ರೂ. ದಂಡ ಕಟ್ಟುವಂತೆ ಸೂಚನೆ ನೀಡಿದ್ದ ಮದ್ರಾಸ್ ಹೈಕೋರ್ಟ್​​

ನಟ ದಳಪತಿ ವಿಜಯ್​ಗೆ ಮದ್ರಾಸ್​ ಹೈಕೋರ್ಟ್​​ 1 ಲಕ್ಷ ರೂ. ದಂಡ ಪಾವತಿ ಮಾಡುವಂತೆ ಸೂಚನೆ ನೀಡಿತ್ತು. ಜತೆಗೆ ಆ ಹಣವನ್ನು ಮುಂದಿನ ಎರಡು ವಾರಗಳಲ್ಲಿ ಮುಖ್ಯಮಂತ್ರಿ ಕೋವಿಡ್​ ಪರಿಹಾರ ನಿಧಿಗೆ ನೀಡುವಂತೆ ಸೂಚನೆ ನೀಡಿತ್ತು. ಇದಾದ ಬಳಿಕ ಹೈಕೋರ್ಟ್​ ಏಕ ಸದಸ್ಯ ಪೀಠದ ಆದೇಶಕ್ಕೆ ಮದ್ರಾಸ್ ಹೈಕೋರ್ಟ್​​ ಮಧ್ಯಂತರ ತಡೆ ನೀಡಿತ್ತು. ಇಂದು ಕೂಡ ಇದರ ವಿಚಾರಣೆ ನಡೆದಿದ್ದು, ಈ ವೇಳೆ ವಿಜಯ್​ ಪರ ವಕೀಲರು ವಾದ ಮಂಡನೆ ಮಾಡಿದ್ದಾರೆ.

ವಾದ ಮಂಡನೆ ವೇಳೆ ನ್ಯಾಯಮೂರ್ತಿಗಳಾದ ಸುಬ್ರಹ್ಮಣ್ಯಂ ನೇತೃತ್ವದ ವಿಭಾಗೀಯ ಪೀಠ 1 ಲಕ್ಷ ರೂ. ದಂಡ ಕಟ್ಟಿದ್ದೀರಾ? ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಉತ್ತರಿಸಿರುವ ನಟನ ಪರ ವಕೀಲರು, ಕಳೆದ ವರ್ಷ 25 ಲಕ್ಷ ರೂ. ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗಿದೆ. ಇದೀಗ ಹೆಚ್ಚಿನ ಹಣ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಹೀಗಾಗಿ ವಿಚಾರಣೆ ಆಗಸ್ಟ್​ 31ಕ್ಕೆ ಮುಂದೂಡಿಕೆಯಾಗಿದೆ.

Rolls Royce case
ನಟ ದಳಪತಿ ವಿಜಯ್​

ಇದನ್ನೂ ಓದಿರಿ: ಇಂಗ್ಲೆಂಡ್‌ನಲ್ಲಿ ಕ್ರಿಕೆಟಿಗ ಕೆ.ಎಲ್‌.ರಾಹುಲ್‌ ಜೊತೆ ನಟಿ ಅಥಿಯಾ ಫೋಟೋ; ಮತ್ತೆ ಡೇಟಿಂಗ್ ಶುರು?

ಐಷಾರಾಮಿ ರೋಲ್ಸ್​ ರಾಯ್ಸ್​ ಘೋಸ್ಟ್​ ಕಾರಿಗೆ ಬಾಕಿ ಉಳಿಸಿಕೊಂಡಿರುವ ಶೇ.80ರಷ್ಟು ಎಂಟ್ರಿ ಟ್ಯಾಕ್ಸ್​ ಕಟ್ಟಬೇಕು ಎಂದು ಮದ್ರಾಸ್​ ಹೈಕೋರ್ಟ್​ ಆದೇಶಿಸಿತ್ತು. ದಳಪತಿ ವಿಜಯ್ ಅವರು 410 ಕೋಟಿ ರೂ. ಆಸ್ತಿಯ ಒಡೆಯ ಎನ್ನಲಾಗಿದ್ದು, 6 ಕೋಟಿ ರೂ. ಬೆಲೆ ಬಾಳುವ ರೋಲ್ಸ್​ ರಾಯ್ಸ್​ ಘೋಸ್ಟ್​ ಕಾರು ಅವರ ಮನೆಯಲ್ಲಿದೆ. ಇದರ ತೆರಿಗೆ ವಿನಾಯ್ತಿ ಕೇಳಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.