ಇಂದು ರಾಕಿಂಗ್ ಸ್ಟಾರ್ ಯಶ್ಗೆ 35ರ ಜನ್ಮದಿನದ ಸಂಭ್ರಮ. 1986 ಜನವರಿ 8 ರಂದು ಹಾಸನ ಜಿಲ್ಲೆಯ ಭುವನಹಳ್ಳಿಯಲ್ಲಿ ಅರುಣ್ ಕುಮಾರ್ ಮತ್ತು ಪುಷ್ಪಾ ದಂಪತಿಯ ಮಗನಾಗಿ ಯಶ್ ಜನಿಸಿದರು. ಇವರ ತಂದೆ ಬೆಂಗಳೂರು ಬಿಎಂಟಿಸಿಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು.
ಮೈಸೂರಿನಲ್ಲೇ ವ್ಯಾಸಂಗ...
ಕಾಲೇಜಿನವರೆಗೆ ಮೈಸೂರಿನಲ್ಲೇ ವಿದ್ಯಾಭ್ಯಾಸವನ್ನು ಮುಗಿಸಿದ ಯಶ್ ತಮ್ಮ 17ನೇ ವಯಸ್ಸಿನಲ್ಲಿಯೇ ಕುಟುಂಬಕ್ಕೆ ಸಹಾಯವಾಗಲು ಪಿಯುಸಿಗೆ ಗುಡ್‌ಬೈ ಹೇಳಿ ಕೆಲಸ ಮಾಡಲು ಪ್ರಾರಂಭಿಸಿದರು. ‘ನವೀನ್ ಪ್ರಾವಿಜನ್ ಸ್ಟೋರ್’ ಎಂಬ ಶಾಪ್ ತೆಗೆದು ಕುಟುಂಬದ ಜವಾಬ್ದಾರಿ ವಹಿಸಿಕೊಂಡರು.
ಇದನ್ನೂ ಓದಿ: ಬಿಡುಗಡೆಗೆ ಮುನ್ನವೇ ಲೀಕ್ : ಬಹುನಿರೀಕ್ಷಿತ ಕೆಜಿಎಫ್-2 ಟೀಸರ್ ರಿಲೀಸ್ ಮಾಡಿದ ಚಿತ್ರತಂಡ
ನಟ ಉಪೇಂದ್ರ ಸ್ಫೂರ್ತಿ...
ಹೈಸ್ಕೂಲ್-ಕಾಲೇಜು ದಿನಗಳಲ್ಲಿ ಹಲವು ಡ್ಯಾನ್ಸ್ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಯಶ್ ಒಂದು ಸಲ ಮೈಸೂರಿನಲ್ಲಿ ಆರ್ಕೆಸ್ಟ್ರಾದಲ್ಲಿ ಡ್ಯಾನ್ಸ್ ಮಾಡಬೇಕಾದರೆ ರಿಯಲ್ ಸ್ಟಾರ್ ಉಪೇಂದ್ರರವರು ನೋಡಿ ಯಶ್‌ರನ್ನು ತುಂಬಾ ಹೊಗಳಿದ್ದರು. ‘ವಿಕೆಂಡ್ ವಿಥ್ ರಮೇಶ್’ ಕಾರ್ಯಕ್ರಮದಲ್ಲಿ ಈ ಘಟನೆ ನೆನೆದ ಯಶ್ ಉಪೇಂದ್ರರವರು ತಮಗೆ ಸ್ಫೂರ್ತಿ ಎಂದಿದ್ದರು.
ನ್ಯಾಷನಲ್ ಸ್ಟಾರ್ ಆದ ಯಶ್...
2007ರಲ್ಲಿ ತೆರೆಗೆ ಬಂದ 'ಜಂಬದ ಹುಡುಗಿ' ಚಿತ್ರದ ಮೂಲಕ ಚಂದನವನ ಪ್ರವೇಶಿಸಿದ ಯಶ್ 2014ರಲ್ಲಿ ತೆರೆಗೆ ಬಂದ 'Mr & Mrs ರಾಮಾಚಾರಿ' ಬಾಕ್ಸ್ ಆಫೀಸ್ನಲ್ಲಿ ಐವತ್ತು ಕೋಟಿಗೂ ಹೆಚ್ಚು ಗಳಿಕೆ ಕಂಡು ದಾಖಲೆ ಬರೆಯಿತು. ಇದಾದ ಬಳಿಕ ‘ಕೆಜಿಎಫ್ ಚಾಪ್ಟರ್ 1’ 2018 ಡಿಸೆಂಬರ್‌ನಲ್ಲಿ ತೆರೆಕಂಡ ಈ ಚಿತ್ರ ಬಿಡುಗಡೆಯಾದ ಐದು ದಿನಗಳಲ್ಲಿ 100 ಕೋಟಿ ಗಳಿಕೆ ಕಂಡು ಕನ್ನಡ ಚಿತ್ರರಂಗದಲ್ಲಿ ಹೊಸ ಪರ್ವಕ್ಕೆ ನಾಂದಿ ಹಾಡಿತು. ಈ ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಆಗಿ ಯಶ್ ಮಿಂಚಿದರು.
ಇದನ್ನೂ ಓದಿ: ಬರ್ತ್ ಡೇ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಯಶ್ ಮನವಿ ಇದು!
ರಾಕಿಂಗ್ ಸ್ಟಾರ್ ಅಭಿಮಾನಿಗಳು ತುಂಬಾನೆ ಕಾತುರದಿಂದ ಕಾಯುತ್ತಿದ್ದ ಯಶ್ ಬರ್ತ್ಡೇ ಬಂದೇ ಬಿಡ್ತು. ಹೀಗಾಗಿ ನಟ ಯಶ್ ತಮ್ಮ ಅಭಿಮಾನಿಗಳಿಗೆ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ಎರಡ್ಮೂರು ದಿನಗಳ ಹಿಂದೆ ಟ್ವಿಟರ್ನಲ್ಲಿ ವಿಡಿಯೋ ಒಂದನ್ನು ಹಾಕಿರುವ ಯಶ್, ನನ್ನ ಹುಟ್ಟುಹಬ್ಬದ ದಿನದಂದು ಯಾರೂ ಕೂಡ ಮನೆ ಬಳಿ ಬಾರದೆ ಸಾಮಾಜಿಕ ಜಾಲತಾಣದಲ್ಲಿಯೇ ನನಗೆ ವಿಶ್ ಮಾಡಿ. ನೀವು ಅನಾವಶ್ಯಕವಾಗಿ ಎಲ್ಲರೂ ಒಟ್ಟಿಗೆ ಸೇರುವುದರಿಂದ ಯಾರಿಗಾದ್ರು ತೊಂದರೆ ಆದ್ರೆ ನನಗೆ ತುಂಬಾ ನೋವಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬಿಡುಗಡೆಗೆ ಮುನ್ನವೇ ಲೀಕ್ ಆದ ಕೆಜಿಎಫ್-2 ಟೀಸರ್: ನಟ ಯಶ್ ಬೇಸರ
ಯಶ್ ಹುಟ್ಟುಹಬ್ಬ ಇರುವ ಕಾರಣ, ಜ.8ರಂದು 10:18ಕ್ಕೆ ಕೆಜಿಎಫ್ ಚಾಪ್ಟರ್ 2 ಟೀಸರ್ ರಿಲೀಸ್ ಮಾಡೋದಿಕ್ಕೆ ಚಿತ್ರತಂದ ಸಿದ್ಧಗೊಂಡಿತು. ಆದರೆ ಹ್ಯಾಕರ್ಸ್ ಕೆಜಿಎಫ್ ಚಿತ್ರತಂಡಕ್ಕೆ ಶಾಕ್ ನೀಡಿದ್ದರಿಂದ ಕೆಜಿಎಫ್ ಚಾಪ್ಟರ್ 2 ಟೀಸರ್ನ್ನು ನಿನ್ನೆ ರಾತ್ರಿ 9:29ಕ್ಕೆ ರಿಲೀಸ್ ಮಾಡಲಾಯಿತು. ಬಹುನಿರೀಕ್ಷಿತ ಕೆಜಿಎಫ್-2 ಚಿತ್ರದ ಟೀಸರ್ ಬಿಡುಗಡೆಗೆ ಮುನ್ನವೇ ಲೀಕ್ ಆಗಿದ್ದರಿಂದ ನಟ ಯಶ್ ಬೇಸರ ವ್ಯಕ್ತಪಡಿಸಿದ್ದಾರೆ.