ETV Bharat / sitara

Yash birthday: ಹುಟ್ಟುಹಬ್ಬದ ಸಂಭ್ರಮದಲ್ಲಿ ರಾಕಿಂಗ್ ಸ್ಟಾರ್.. ಅಭಿಮಾನಿಗಳಿಗೆ ಸಿಗಲಿದೆ ವಿಶೇಷ ಗಿಫ್ಟ್​​​

author img

By

Published : Jan 8, 2022, 7:51 AM IST

Rocking star Yash birthday: ಇಂದು ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಜನ್ಮದಿನ. ನೆಚ್ಚಿನ ನಟನ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಕೆಜಿಎಫ್​-2 ಚಿತ್ರ ತಂಡದಿಂದ ಭರ್ಜರಿ ಗಿಫ್ಟ್​ ಸಿಗಲಿದೆ.

Rocking star yash birthday today
ರಾಕಿಂಗ್ ಸ್ಟಾರ್ ಯಶ್ ಜನ್ಮದಿನ

ಇಂದು ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಜನ್ಮದಿನ. ಯಶ್​​ ಅಭಿಮಾನಿಗಳು ಸೇರಿದಂತೆ ಸಿನಿಮಾರಂಗದವರಿಂದ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಅಲ್ಲದೇ ನೆಚ್ಚಿನ ನಟನ ಹುಟ್ಟುಹಬ್ಬದಂದು ಫ್ಯಾನ್ಸ್​ಗೆ ಕೆಜಿಎಫ್​-2 ಚಿತ್ರ ತಂಡದಿಂದ ಭರ್ಜರಿ ಗಿಫ್ಟ್​ ಸಿಗಲಿದೆ.

ಈ ಬಗ್ಗೆ ಕೆಜಿಎಫ್​-2 ಸಿನಿಮಾ ನಿರ್ಮಾ ಸಂಸ್ಥೆಯಾದ ಹೊಂಬಾಳೆ ತನ್ನ ಅಧಿಕೃತ ಟ್ವಿಟರ್​ನಲ್ಲಿ ಘೋಷಣೆ ಮಾಡಿದೆ. 'ಬೆಳಗ್ಗೆ 9 ಗಂಟೆಗೆ ಉಗ್ರ ರಾಕ್ಷಸ ನಿಮ್ಮನ್ನು ಭೇಟಿಯಾಗಲಿದ್ದಾನೆ, ಮಿಂಚಿನದಾಳಿ ಆರಂಭವಾಗಲಿ! ಎಂದು ಹೊಂಬಾಳೆ ಶುಕ್ರವಾರ ಟ್ವೀಟ್​ ಮಾಡಿತ್ತು.

ಪ್ಯಾನ್ ಇಂಡಿಯಾ ಚಿತ್ರವಾಗಿ ಸಾಕಷ್ಟು ಹವಾ ಸೃಷ್ಟಿಸಿರುವ ಕನ್ನಡದ ಹೆಮ್ಮೆಯ ಚಿತ್ರ 'ಕೆಜಿಎಫ್ 2' ಬಗ್ಗೆ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇದೆ. ಚಿತ್ರ ತಂಡದಿಂದ ಅಪ್​ಡೇಟ್​ಗಳಿಗಾಗಿ ಕಾಯುತ್ತಿದ್ದ ಅಭಿಮಾನಿಗಳು ಇಂದಿನ ದಿನಕ್ಕಾಗಿ ಕಾಯುತ್ತಿದ್ದಾರೆ.

ಇಂದು ಯಶ್ ಜನ್ಮ ದಿನದ ನಿಮಿತ್ತ ಹೊಂಬಾಳೆ ತಂಡವು ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸಿಕ್ವೆಲ್​ಗೆ ಭಾರಿ ಬೇಡಿಕೆ ಇದ್ದು, ಏಪ್ರಿಲ್ 14ರಂದು ಚಿತ್ರ ಬಿಡುಗಡೆ ಆಗಲಿದೆ. ಈಗಾಗಲೇ ಯಶ್​ಗೆ ನಿರ್ದೇಶಕ ಪವನ್​ ಒಡೆಯರ್​, ಖ್ಯಾತ ಗಾಯಕ ರಾಜೇಶ್​ ಕೃಷ್ಣನ್​ ಸೇರಿದಂತೆ ಹಲವರು ಜನ್ಮದಿನಕ್ಕೆ ಶುಭ ಕೋರಿದ್ದಾರೆ.

ಕಳೆದ ವರ್ಷ ಯಶ್ ಜನ್ಮದಿನಕ್ಕೆ ನಿಗದಿಯಾಗಿದ್ದ ಟೀಸರ್‌ ಅನ್ನು ಮುನ್ನಾ ದಿನವೇ ಬಿಡುಗಡೆ ಮಾಡಲಾಗಿತ್ತು. ಆ ಟೀಸರ್ 230ಕ್ಕೂ ಹೆಚ್ಚು ಮಿಲಿಯನ್ ವೀಕ್ಷಣೆ ಪಡೆದು ಹೊಸ ದಾಖಲೆ ಬರೆದಿದೆ.

ಇದನ್ನೂ ಓದಿ: ನೇತ್ರಾಣಿಯಲ್ಲಿ ಸ್ಕೂಬಾ ಡೈವ್ ಮಾಡಿ ಕಡಲಾಳದ ಜಗತ್ತಿನ ಅನುಭವ ಪಡೆದ ನಟ ದಿಗಂತ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.