ಯಶ್ ಮತ್ತು ರಾಧಿಕಾ ಪಂಡಿತ್ ಸದ್ಯ ಮಾಲ್ಡೀವ್ಸ್ನಲ್ಲಿ ರಜಾ ದಿನಗಳನ್ನು ಎಂಜಾಯ್ ಮಾಡ್ತಿದ್ದಾರೆ. ಮುದ್ದು ಮಕ್ಕಳ ಜೊತೆ ಮಾಲ್ಡೀವ್ಸ್ಗೆ ಹೋಗಿರುವ ಸ್ಟಾರ್ ದಂಪತಿ, ಮಕ್ಕಳ ಜೊತೆ ಅಲ್ಲಿನ ಸಮುದ್ರ ತೀರದಲ್ಲಿ ಆಟವಾಡಿ ಫೋಟೋ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡಿದ್ದಾರೆ. ಇದೀಗ ಯಶ್ ದಂಪತಿಯ ಪ್ರವಾಸ ಮುಕ್ತಾಯದ ಹಂತಕ್ಕೆ ಬಂದಿದ್ದು, ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.
- — Yash (@TheNameIsYash) January 27, 2021 " class="align-text-top noRightClick twitterSection" data="
— Yash (@TheNameIsYash) January 27, 2021
">— Yash (@TheNameIsYash) January 27, 2021
ಈ ಬಗ್ಗೆ ಯಶ್ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ವಿಡಿಯೋ ಮೂಲಕ ಮಾತನಾಡಿರುವ ರಾಧಿಕಾ ಪಂಡಿತ್, ನಮ್ಮ ಜೀವನದಲ್ಲಿ ಹಾಲಿಡೇಸ್ ತುಂಬಾ ಮುಖ್ಯ. ನಾವು ನಮ್ಮ ಜೀವನದ ಜಂಜಾಟಗಳನ್ನು ಬಿಟ್ಟು ರಿಫ್ರೆಶ್ ಆಗೋದಿಕ್ಕೆ ರಜಾ ದಿನಗಳು ಬೇಕು. ಅದ್ರಲ್ಲೂ ಕುಟುಂಬದ ಜೊತೆ ಎಂಜಾಯ್ ಮಾಡುವುದು ಇನ್ನೂ ಖುಷಿ ಕೊಡತ್ತೆ ಎಂದಿದ್ದಾರೆ.
ಇದೇ ವಿಡಿಯೋದಲ್ಲಿ ಯಶ್ ಮಾತನಾಡಿದ್ದು, ನಮಗೆ ಅದ್ಭುತ ಪ್ರವಾಸಕ್ಕೆ ಸಹಾಯ ಮಾಡಿದ ಅಲ್ಲಿನ ಎಲ್ಲಾ ಸಿಬ್ಬಂದಿಗೂ ಧನ್ಯವಾದ ಅಂದ್ರು. ಅಲ್ಲದೆ ನೆನಪಿನಲ್ಲಿ ಉಳಿಯುವಂತಹ ಕ್ಷಣಗಳನನ್ನು ನಾವು ಮಾಲ್ಡೀವ್ಸ್ನಲ್ಲಿ ಕಳೆದಿದ್ದೇವೆ ಎಂದಿದ್ದಾರೆ.