ಸ್ಯಾಂಡಲ್ವುಡ್ ಬಹುನಿರೀಕ್ಷಿತ 'ರಾಬರ್ಟ್' ಸಿನಿಮಾ ಬಿಡುಗಡೆಗೆ ಇನ್ನು 2 ದಿನಗಳಷ್ಟೇಬಾಕಿ ಉಳಿದಿದೆ. ಚಿತ್ರತಂಡ ನಿನ್ನೆ ಮೊದಲನೇ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿತ್ತು. ಇಂದು ಎರಡನೇ ವಿಡಿಯೋ ರಿಲೀಸ್ ಮಾಡಿರುವ ಚಿತ್ರತಂಡ ಈ ವಿಡಿಯೋದಲ್ಲಿ ಚಿತ್ರದ ಸೆಟ್ ಹಾಗೂ ಡಿಒಪಿ ಸುಧಾಕರ್ ಬಗ್ಗೆ ಮಾತನಾಡಿದೆ.
- " class="align-text-top noRightClick twitterSection" data="">
ಇದನ್ನೂ ಓದಿ: ಉದಯೋನ್ಮುಖ ಗಾಯಕಿ, ಸಂಗೀತ ನಿರ್ದೇಶಕಿ ಮಾನಸ ಹೊಳ್ಳ
'ರಾಬರ್ಟ್' ಸಿನಿಮಾದ ಶೇಕಡಾ 80 ರಷ್ಟು ಚಿತ್ರೀಕರಣ ಸೆಟ್ನಲ್ಲಿ ಆಗಿದ್ದು ಉಳಿದ ಭಾಗದ ಚಿತ್ರೀಕರಣ ಮಾತ್ರ ಲೈವ್ ಲೊಕೇಶನ್ನಲ್ಲಿ ಚಿತ್ರೀಕರಿಸಲಾಗಿದೆಯಂತೆ. ಈ ಬಗ್ಗೆ ನಿರ್ದೇಶಕ ತರುಣ್ ಸುಧೀರ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ದರ್ಶನ್, ಕ್ಯಾಮರಾಮ್ಯಾನ್ ಎಸ್. ರಾಜ್ ಸುಧಾಕರ್, ಹಾಗೂ ಕಲಾ ನಿರ್ದೇಶಕ ಮೋಹನ್ ಬಿ. ಕೆರೆ ಈ ಕಲರ್ ಫುಲ್ ಮೇಕಿಂಗ್ ಬಗ್ಗೆ ಹಂಚಿಕೊಂಡಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ಕನಸಿಗೆ ತಕ್ಕಂತೆ ಕಲಾ ನಿರ್ದೇಶಕ ಮೋಹನ್ ಬಿ.ಕೆರೆ ಸೆಟ್ಗಳನ್ನು ಅದ್ಧೂರಿಯಾಗಿ ಹಾಕುವ ಮೂಲಕ ಸಾಕಾರಗೊಳಿಸಿದ್ದಾರೆ. ಅದರಲ್ಲಿ ನಾಲ್ಕು ಎಕರೆ ಜಾಗದಲ್ಲಿ ರಾಮನ ಸೆಟ್ ಹಾಕಿ ಹಾಡನ್ನು ಚಿತ್ರೀಕರಣ ಮಾಡಿರುವುದು 'ರಾಬರ್ಟ್' ಚಿತ್ರದ ಹೈಲೆಟ್ ಎಂದೇ ಹೇಳಬಹುದು. ಇನ್ನು ತಮಗೆ ಯಾವ ರೀತಿ ಫ್ರೇಮ್ ಬೇಕು ಎಂಬುದನ್ನು ನಿರ್ದೇಶಕ ತರುಣ್ ಸುಧೀರ್ ಕ್ಯಾಮರಾಮ್ಯಾನ್ ಸುಧಾಕರ್ಗೆ ಹೇಳಿದರೆ ಸುಧಾಕರ್ ಕೂಡಾ ಅಷ್ಟೇ ಚೆನ್ನಾಗಿ ಔಟ್ಪುಟ್ ನೀಡುತ್ತಿದ್ದರಂತೆ. ದರ್ಶನ್ ಹೇಳುವ ಪ್ರಕಾರ ಒಂದು ಶಾಟ್ಗೆ ಬಹಳ ಸಮಯ ಹಿಡಿಯುತ್ತಿದ್ದಂತೆ. ಆದರೆ ಸುಧಾಕರ್ ಕೆಲಸ ನೋಡಿದ ನಂತರ ಸ್ವತ: ದರ್ಶನ್, ನಿಮಗೆ ಎಷ್ಟು ಸಮಯ ಬೇಕೋ ತೆಗೆದುಕೊಳ್ಳಿ ಎಂದು ಸುಧಾಕರ್ಗೆ ಹೇಳುತ್ತಿದ್ದರಂತೆ. ಇನ್ನಿತರ ಆಸಕ್ತಿಕರ ವಿಚಾರವನ್ನು 'ರಾಬರ್ಟ್' ತಂಡ ಈ ಮೇಕಿಂಗ್ ವಿಡಿಯೋದಲ್ಲಿ ಹಂಚಿಕೊಂಡಿದೆ.