ಸುದೀಪ್ ಅಭಿನಯದ 'ಕೋಟಿಗೊಬ್ಬ 3' ಚಿತ್ರತಂಡದಿಂದ ಹಲವು ದಿನಗಳಿಂದ ಯಾವೊಂದು ಅಪ್‍ಡೇಟ್ ಬಂದಿಲ್ಲ ಎಂದು ಸುದೀಪ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಈ ವಿಷಯವಾಗಿ ನಿರ್ಮಾಪಕ ಸೂರಪ್ಪ ಬಾಬು ಬಗ್ಗೆ ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಟ್ರೋಲ್ ಮಾಡಿದ್ದರು. ಕೂಡಲೇ ಎಚ್ಚೆತ್ತ ಚಿತ್ರತಂಡ ಮಾರ್ಚ್ 7 ರಂದು ಕೋಟಿಗೊಬ್ಬ -3 ಮೇಕಿಂಗ್ ಬಿಡುಗಡೆ ಮಾಡಿತ್ತು.
ಇದನ್ನೂ ಓದಿ: ಕೊರೊನಾ ಲಸಿಕೆ ಪಡೆದ ಚಂದನವನದ ಎವರ್ಗ್ರೀನ್ ನಟ ಅನಂತ್ನಾಗ್
ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ಚಿತ್ರದ ಹಾಡುಗಳು, ಡೈಲಾಗ್ ದೃಶ್ಯಗಳು ಸೇರಿದಂತೆ ಹಲವು ಸನ್ನಿವೇಶಗಳ ಚಿತ್ರೀಕರಣವನ್ನು ಮೇಕಿಂಗ್ ವಿಡಿಯೋದಲ್ಲಿ ತೋರಿಸಲಾಗಿದೆ. ಈ ನಡುವೆ ಅಭಿಮಾನಿಗಳ ಒತ್ತಾಯದ ಮೇರೆಗೆ ದರ್ಶನ್ ಅಭಿನಯದ 'ರಾಬರ್ಟ್' ಮೇಕಿಂಗ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. 'ರಾಬರ್ಟ್' ಮೇಕಿಂಗ್ ವೀಡಿಯೋಗಳು ಮೂರು ಕಂತುಗಳಲ್ಲಿ ಬಿಡುಗಡೆಯಾಗಲಿದ್ದು, ಸೋಮವಾರ, ಮಂಗಳವಾರ ಮತ್ತು ಬುಧವಾರ ಆನಂದ್ ಆಡಿಯೋ ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಈ ಮೂರೂ ದಿನಗಳು 3 ಕಂತುಗಳ ವಿಡಿಯೋ ತೋರಿಸಿ ಗುರುವಾರ ಸಿನಿಮಾ ಬಿಡುಗಡೆ ಮಾಡುವುದು ಚಿತ್ರದ ಉದ್ದೇಶ. ಇಂದು ಮೊದಲನೇ ವಿಡಿಯೋ ಬಿಡುಗಡೆಯಾಗಿದೆ. 'ರಾಬರ್ಟ್' ಮೇಕಿಂಗ್ ವಿಡಿಯೋಗೆ ಜನರು ಯಾವ ರೀತಿ ಪ್ರತಿಕ್ರಿಯಿಸಲಿದ್ದಾರೆ ಕಾದು ನೋಡಬೇಕು.