ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾ ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಅದ್ದೂರಿಯಾಗಿ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದಿದೆ. 'ರಾಬರ್ಟ್' ಸಿನಿಮಾ ಬಿಡುಗಡೆಯಾಗಿ ಒಂದು ವಾರ ಕಳೆದಿದ್ದು ಗಲ್ಲಾ ಪೆಟ್ಟಿಗೆಯಲ್ಲಿ ನಾಗಾಲೋಟ ಮುಂದುವರೆಸಿದೆ.
ಇದನ್ನೂ ಓದಿ: ಸಿಎಂ ಭೇಟಿ ಮಾಡಿ ಕೃತಜ್ಞತೆ ಹೇಳಿದ ಕಿಚ್ಚ ಸುದೀಪ್
ಕೆಲವು ದಿನಗಳ ಹಿಂದೆ 'ರಾಬರ್ಟ್' ಸಿನಿಮಾ ಸಕ್ಸಸ್ ಮೀಟ್ನಲ್ಲಿ ದರ್ಶನ್ ಮಾತನಾಡಿ "ಸಿನಿಮಾ ಪೈರಸಿ ಆದರೂ ಒಳ್ಳೆ ಕಲೆಕ್ಷನ್ ಗಳಿಸಿರುವುದು 'ರಾಬರ್ಟ್' ಚಿತ್ರಕ್ಕೆ ಇರುವ ತಾಕತ್ತು" ಎಂದು ಹೇಳಿದ್ದರು. ಅದರಂತೆ ಒಂದು ವಾರದಲ್ಲಿ 'ರಾಬರ್ಟ್' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಧೂಳು ಎಬ್ಬಿಸಿದೆ. ಸಿನಿಮಾ ಒಂದು ವಾರಕ್ಕೆ ಬರೋಬ್ಬರಿ 78.36 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಹೊಸ ಅಧ್ಯಾಯ ಬರೆದಿದೆ. 'ರಾಬರ್ಟ್' ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ಅಧಿಕೃತವಾಗಿ ಒಂದು ವಾರದ ಕಲೆಕ್ಷನ್ ಅನೌನ್ಸ್ ಮಾಡಿದ್ದಾರೆ. ಕನ್ನಡ ಮತ್ತು ತೆಲುಗು ಎರಡೂ ವರ್ಷನ್ಗಳಿಂದ ಮೊದಲ ವಾರ ಒಟ್ಟು 78.36 ಕೋಟಿ ರೂಪಾಯಿ ಬಾಚಿಕೊಂಡಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಮೊದಲ ವಾರವೇ 7.61 ಕೋಟಿ ರೂಪಾಯಿ ಕಲೆಹಾಕಿದ್ದರೆ ಕನ್ನಡದಲ್ಲಿ 17.24 ಕೋಟಿ ರೂಪಾಯಿ ಗಳಿಸಿತ್ತು. ಈ ಮೂಲಕ ಸಿನಿಮಾ 100 ಕೋಟಿ ಕ್ಲಬ್ ಸೇರುವತ್ತ ದಾಪುಗಾಲಿಟ್ಟಿದೆ.