ETV Bharat / sitara

ರಿಷಬ್ ಶೆಟ್ಟಿಯ 'ಪೆಡ್ರೋ'ಗೆ ಒಲಿದ ಅದೃಷ್ಟ: ಗೋಸ್ ಟು ಕೇನ್ಸ್ ಚಿತ್ರೋತ್ಸವಕ್ಕೆ ಆಯ್ಕೆ - Cannes Film Festival

ನಟ ರಿಷಬ್ ಶೆಟ್ಟಿ ತಮ್ಮ ಹೋಂ ಬ್ಯಾನರ್ ರಿಷಬ್ ಶೆಟ್ಟಿ ಫಿಲ್ಮ್ಸ್ ಅಡಿಯಲ್ಲಿ ನಿರ್ಮಿಸಿರುವ 'ಪೆಡ್ರೊ' ಸಿನಿಮಾ ಪ್ರತಿಷ್ಠಿತ ಗೋಸ್ ಟು ಕೇನ್ಸ್​ಗೆ ಆಯ್ಕೆಯಾಗಿದೆ.

Rishabh Shetty's 'Pedro' movie selected to Cannes Film Festival
ರಿಷಬ್ ಶೆಟ್ಟಿಯ 'ಪೆಡ್ರೋ'ಗೆ ಒಲಿದ ಅದೃಷ್ಟ..ಗೋಸ್ ಟು ಕೇನ್ಸ್ ಚಿತ್ರೋತ್ಸವಕ್ಕೆ ಆಯ್ಕೆ
author img

By

Published : May 29, 2020, 9:02 PM IST

ಚಿತ್ರ ನಿರ್ಮಾಪಕ, ನಿರ್ದೇಶಕ, ನಟ ರಿಷಬ್ ಶೆಟ್ಟಿ ತಮ್ಮ ಹೋಮ್​ ಬ್ಯಾನರ್ ರಿಷಬ್ ಶೆಟ್ಟಿ ಫಿಲ್ಮ್ಸ್ ಅಡಿಯಲ್ಲಿ 'ಪೆಡ್ರೊ' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದೀಗ ಈ ಚಿತ್ರ ಪ್ರತಿಷ್ಠಿತ ಗೋಸ್ ಟು ಕೇನ್ಸ್ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

Rishabh Shetty's 'Pedro' movie selected to Cannes Film Festival
ರಿಷಬ್ ಶೆಟ್ಟಿಯ 'ಪೆಡ್ರೋ'

ಖುಷಿಯ ವಿಚಾರವನ್ನು ತಮ್ಮ ಟ್ವೀಟ್ ಮೂಲಕ ಹಂಚಿಕೊಂಡಿರುವ ರಿಷಬ್​ 'ಪೆಡ್ರೋ' ನನ್ನ ಸ್ವಂತ ಬ್ಯಾನರ್​ನಲ್ಲಿ ತಯಾರಾದ ಚಿತ್ರ. ನಟೇಶ್ ಹೆಗ್ಡೆ ಈ ಚಿತ್ರದ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆಯಲಿದ್ದಾರೆ. ಚಿತ್ರವು ಗೋಸ್ ಟು ಕೇನ್ಸ್​ಗಾಗಿ ಆಯ್ಕೆಯಾಗಿದ್ದು, ಅದೊಂದು ವಿಶ್ವದ ಅತಿದೊಡ್ಡ ಚಲನಚಿತ್ರ ಮಾರುಕಟ್ಟೆಗಳಲ್ಲಿ ಒಂದಾಗಿದ್ದು, ಕೇನ್ಸ್ ಚಲನಚಿತ್ರೋತ್ಸವದ ಪ್ರತಿರೂಪವಾಗಿದೆ ಎಂದಿದ್ದಾರೆ.

ಚಿತ್ರದ ಶೂಟಿಂಗ್ ಪೂರ್ಣವಾಗಿದೆ. ಲಾಕ್‌ಡೌನ್‌ಗಾಗಿ ಇಲ್ಲದಿದ್ದರೆ, ಈ ವರ್ಷದ ಗೋಸ್ ಟು ಕೇನ್ಸ್ ಚಲನಚಿತ್ರೋತ್ಸವದಲ್ಲಿ ಇದನ್ನು ಪ್ರದರ್ಶಿಸಲಾಗುತ್ತಿತ್ತು. ಇದನ್ನು ಈಗ 2021ಕ್ಕೆ ಮುಂದೂಡಲಾಗಿದೆ ಎಂದು ರಿಷಬ್ ಹೇಳಿದ್ದಾರೆ.

ಫಿಲ್ಮ್ ಬಜಾರ್‌ನಲ್ಲಿ ಆಯ್ಕೆಯಾದ ಏಷ್ಯಾದ ಐದು ಚಿತ್ರಗಳಲ್ಲಿ 'ಪೆಡ್ರೋ' ಕೂಡ ಸೇರಿದೆ. ಈಗ ಇದು ಗೋಸ್ ಟು ಕೇನ್ಸ್​ಗಾಗಿ ಆಯ್ಕೆಯಾದ 20 ಜಾಗತಿಕ ಚಲನಚಿತ್ರಗಳಲ್ಲಿ ಒಂದಾಗಿದೆ ಮತ್ತು ಸ್ಪರ್ಧೆಗೆ ನೇರವಾಗಿ ಆಯ್ಕೆಯಾದ ಮೊದಲ ಕನ್ನಡ ಚಿತ್ರವಿದು ಎನ್ನುವುದು ಹೆಮ್ಮೆಯ ಸಂಗತಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.