ಬೆಲ್ ಬಾಟಮ್ ಚಿತ್ರದ ಮೂಲಕ ನಾಯಕನಾಗಿ ಬಡ್ತಿ ಪಡೆದ ನಿರ್ದೇಶಕ ರಿಷಬ್ ಶೆಟ್ಟಿ, ನಂತರ ನಿರ್ದೇಶನಕ್ಕಿಂತ ನಟನೆಯಲ್ಲಿ ಸಖತ್ ಬ್ಯುಸಿ ಆಗಿ ಬಿಟ್ರು. ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ಕೌ ಬಾಯ್ ಕೃಷ್ಣನಾಗಿ ಗಮನ ಸೆಳೆದಿದ್ದ ಡಿಟೆಕ್ಟಿವ್ ದಿವಾಕರ ಇದೀಗ ಮತ್ತೊಂದು ಚಿತ್ರದಲ್ಲಿ ನಾಯಕನಾಗಿ ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿನ ಕೌ ಬಾಯ್ ಕೃಷ್ಣ ಹೆಸರು ಗಮನ ಸೆಳೆದಿತ್ತು. ಈಗ ಅದೇ ಟೈಟಲ್ ಇಟ್ಟುಕೊಂಡು ಹೊಸ ಚಿತ್ರ ಮಾಡಲು ರಂಗಿತರಂಗ ಚಿತ್ರದ ನಿರ್ಮಾಪಕ ಪ್ರಕಾಶ್ ರೆಡಿಯಾಗಿದ್ದಾರೆ. ಅಲ್ಲದೆ ಕೌಬಾಯ್ ಕೃಷ್ಣ ಚಿತ್ರದಲ್ಲಿ ರಿಷಬ್ ನಾಯಕನಾಗಿ ನಟಿಸಲು ಓಕೆ ಅಂದಿದ್ದಾರೆ. ಹಾಗೂ 'ಕೌ ಬಾಯ್ ಕೃಷ್ಣ' ಟೈಟಲ್‌ನ ರಿಷಬ್ ಶೆಟ್ಟಿ ರಿಜಿಸ್ಟರ್ ಮಾಡಿಸಿರೋದಾಗಿ ಹೇಳಿದ್ದಾರೆ.
ವಿಶೇಷ ಅಂದ್ರೆ ಕೌ ಬಾಯ್ ಕೃಷ್ಣ ಚಿತ್ರವು 80ರ ದಶಕದ ರೆಟ್ರೋ ಸ್ಟೈಲ್ನಲ್ಲೇ ಇರಲಿದೆ. ಈ ಚಿತ್ರದಲ್ಲಿ ನಾನು ಆ್ಯಕ್ಟ್ ಮಾಡ್ತೀನಿ, ನಮ್ಮ ತಂಡದ ಒಬ್ಬರು ಈ ಚಿತ್ರಕ್ಕೆ ಡೈರೆಕ್ಷನ್ ಮಾಡಲಿದ್ದಾರೆ. ಸದ್ಯ ಕೌ ಬಾಯ್ ಕೃಷ್ಣ ಚಿತ್ರದ ಕಥೆ ಕೆಲಸ ಶುರುವಾಗಿದ್ದು, ನಾನು ಕಮಿಟ್ ಆಗಿರುವ ಎಲ್ಲಾ ಚಿತ್ರ ಮುಗಿಸಿ ಈ ವರ್ಷದ ಅಂತ್ಯಕ್ಕೆ ಕೌವ್ ಬಾಯ್ ಕೃಷ್ಣ ಚಿತ್ರ ಶುರುವಾಗಲಿದೆ ಎಂದು ರಿಷಬ್ ಶೆಟ್ಟಿ ಹೇಳಿದ್ರು.