ETV Bharat / sitara

ಗಂಡು ಮಗುವಿನ ತಂದೆಯಾದ್ರು 'ಡಿಟೆಕ್ಟಿವ್ ದಿವಾಕರ್'​​​​! ಸಂತಸದ ಸುದ್ದಿ ಹಂಚಿಕೊಂಡರು ರಿಷಭ್​​ - ಪ್ರಗತಿ ಶೆಟ್ಟಿ

'ಬೆಲ್​​​ಬಾಟಮ್' ಹೀರೋ ರಿಷಭ್​​​ ಇದೀಗ ಮತ್ತೊಬ್ಬ ಹೀರೋಗೆ ತಂದೆಯಾಗಿದ್ದಾರೆ. ರಿಷಭ್ ಪತ್ನಿ ಪ್ರಗತಿ ಗಂಡುಮಗುವಿಗೆ ಜನ್ಮ ನೀಡಿದ್ದು 'Yes. it's a Hero' ಎಂಬ ಕ್ಯಾಪ್ಷನ್ ಜೊತೆಗೆ ತಮ್ಮ ಹಾಗೂ ಪತ್ನಿ ಪೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ರಿಷಭ್ ಶೆಟ್ಟಿ
author img

By

Published : Apr 7, 2019, 3:44 PM IST

ನಟ, ನಿರ್ದೇಶಕ ರಿಷಭ್ ಶೆಟ್ಟಿ ಇದೀಗ ಗಂಡು ಮಗುವಿನ ತಂದೆ. ಹೌದು, ಇಂದು ಬೆಳಗ್ಗೆ ರಿಷಭ್ ಪತ್ನಿ ಪ್ರಗತಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಗಂಡುಮಗುವಿಗೆ ಜನ್ಮ ಕೊಟ್ಟರು.

ಮೂಲತ: ಉಡುಪಿಯವರಾದ ಪ್ರಗತಿ, ಶಿವಮೊಗ್ಗದಲ್ಲಿ ಓದಿ IBM ಕಂಪನಿಯಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದ್ದರು. 2,017 ಫೆಬ್ರವರಿ 9 ರಂದು ರಿಷಭ್ ಹಾಗೂ ಪ್ರಗತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವತ್ತು ವಿಜಯನಗರದ ಆಸ್ಪತ್ರೆಯೊಂದರಲ್ಲಿ ಪ್ರಗತಿ ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪತ್ನಿ ಜೊತೆ ಸೆಲ್ಫಿ ಫೊಟೋ ತೆಗೆದು ಸಂತೋಷದ ಸುದ್ದಿಯನ್ನು ರಿಷಭ್ ತಮ್ಮ ಟ್ವಿಟ್ಟರ್​​ನಲ್ಲಿ ಹಂಚಿಕೊಂಡರು. ಜ್ಯೂನಿಯರ್ ರಿಷಭ್ ಆಗಮನದ ಸುದ್ದಿ ತಿಳಿದ ಅಕುಲ್ ಬಾಲಾಜಿ, ಅಜನೀಶ್ ಲೋಕನಾಥ್, ಸಿಂಪಲ್ ಸುನಿ, ಕಾರ್ತಿಕ್​​​​ಗೌಡ ಸೇರಿ ಇನ್ನಿತರ ಚಿತ್ರರಂಗದ ಸ್ನೇಹಿತರು ಶುಭ ಕೋರಿದ್ದಾರೆ.

Intro:Body:

ನಟ, ನಿರ್ದೇಶಕ ರಿಷಭ್ ಶೆಟ್ಟಿ ಇದೀಗ ಗಂಡು ಮಗುವಿನ ತಂದೆ. ಹೌದು, ಇಂದು ಬೆಳಗ್ಗೆ ರಿಷಭ್ ಪತ್ನಿ ಪ್ರಗತಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಗಂಡುಮಗುವಿಗೆ ಜನ್ಮ ನೀಡಿದ್ದಾರೆ. 

ಮೂಲತ: ಉಡುಪಿಯವರಾದ ಪ್ರಗತಿ ಶಿವಮೊಗ್ಗದಲ್ಲಿ ಓದಿ IBM ಕಂಪನಿಯಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದ್ದರು. 2017 ಫೆಬ್ರವರಿ 9 ರಂದು ರಿಷಭ್ ಹಾಗೂ ಪ್ರಗತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮಾರ್ಚ್ 15 ರಂದು ಪ್ರಗತಿಗೆ ಸೀಮಂತ ಕಾರ್ಯ ನೆರವೇರಿತ್ತು. ವಿಜಯನಗರದ ಆಸ್ಪತ್ರೆಯೊಂದರಲ್ಲಿ ಪ್ರಗತಿ ಮಗುವಿಗೆ ಜನ್ಮ ನೀಡಿದ್ದು ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. 

ತಮ್ಮ ಹಾಗೂ ಪತ್ನಿ ಸೆಲ್ಫಿ ಫೋಟೋ ಜೊತೆಗೆ ಈ ಸಂತೋಷದ ಸುದ್ದಿಯನ್ನು ರಿಷಭ್ ತಮ್ಮ ಟ್ವಿಟ್ಟರ್​​ನಲ್ಲಿ ಹಂಚಿಕೊಂಡಿದ್ದಾರೆ.  ಇನ್ನು ಜ್ಯೂನಿಯರ್ ರಿಷಭ್ ಆಗಮನದ ಸುದ್ದಿ ತಿಳಿದ ಅಕುಲ್ ಬಾಲಾಜಿ, ಅಜನೀಶ್ ಲೋಕನಾಥ್, ಸಿಂಪಲ್ ಸುನಿ, ಕಾರ್ತಿಕ್​​​​ಗೌಡ ಸೇರಿ ಇನ್ನಿತರ ಚಿತ್ರರಂಗದ ಸ್ನೇಹಿತರು ಅವರಿಗೆ ಶುಭ ಕೋರಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.