ಕಲರ್ಸ್ ಕನ್ನಡ ವಾಹಿನಿಯಲ್ಲಿ ಎಂಟು ವರ್ಷಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಜನಪ್ರಿಯ ಧಾರಾವಾಹಿ ಅಗ್ನಿಸಾಕ್ಷಿ ಮುಗಿದು ಎರಡು ತಿಂಗಳು ಕಳೆದಿವೆಯಷ್ಟೇ. ಸುಂದರವಾದ ಕುಟುಂಬದ ಕಥಾ ಹಂದರದ ಕಥೆಯುಳ್ಳ ಅಗ್ನಿಸಾಕ್ಷಿ ಧಾರಾವಾಹಿಯನ್ನು ವೀಕ್ಷಕರು ಮೆಚ್ಚಿಕೊಂಡಿದ್ದರು.

ಎಂಟು ವರ್ಷಗಳ ಕಾಲ ಮನರಂಜನೆಯ ಮಹಾಪೂರವನ್ನೇ ಉಣಬಡಿಸದ್ದ ಅಗ್ನಿಸಾಕ್ಷಿ ಮುಗಿದಾಗ ಒಂದಷ್ಟು ಜನ ನಿಟ್ಟುಸಿರು ಬಿಟ್ಟಿದ್ದರೆ ಮತ್ತೆ ಕೆಲವರಿಗೆ ಬೇಸರವಾಗಿತ್ತು.

ಎಲ್ಲ ಕಲಾವಿದರ ಪಾತ್ರವೂ ಕೂಡಾ ವೀಕ್ಷಕರಿಗೆ ಮೋಡಿ ಮಾಡಿಬಿಟ್ಟಿತ್ತು. ಅದರಲ್ಲೂ ಸಿದ್ಧಾರ್ಥ-ಸನ್ನಿಧಿಯ ನಡುವಿನ ಪ್ರೇಮ ಸಲ್ಲಾಪವೇ ಎಲ್ಲದಕ್ಕಿಂತಲೂ ಹೆಚ್ಚು ವೀಕ್ಷಕರಿಗೆ ಮುದ ನೀಡುತ್ತಿತ್ತು.

ಇದೀಗ ಲಾಕ್ ಡೌನ್ ನೆಪದಲ್ಲಿ ಮುಗಿದು ಹೋದ ಅಗ್ನಿ ಸಾಕ್ಷಿ ಮತ್ತೆ ಆರಂಭವಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿದಿನ ಬೆಳಗ್ಗೆ ಪ್ರಸಾರವಾಗುತ್ತಿದೆ ನಿಮ್ಮ ನೆಚ್ಚಿನ ಅಗ್ನಿ ಸಾಕ್ಷಿ. ಅಂದಹಾಗೇ ಅಗ್ನಿ ಸಾಕ್ಷಿ ಧಾರಾವಾಹಿಯಲ್ಲಿ ನಾಯಕ ಸಿದ್ಧಾರ್ಥ್ನ ತಮ್ಮ ಅಖಿಲ್ ಆಗಿ ನಟಿಸುತ್ತಿದ್ದ ರಾಜೇಶ್ ಧ್ರುವ ಅವರು ಧಾರಾವಾಹಿ ಮರು ಪ್ರಸಾರ ಆಗುತ್ತಿರುವುದರ ಕುರಿತ ಸಂತಸವನ್ನು ಹಂಚಿಕೊಂಡಿದ್ದಾರೆ.