ETV Bharat / sitara

ಜಂಗಲ್ ಥೀಮ್​​ನಲ್ಲಿ ಚಿರು - ಮೇಘನಾ ಪುತ್ರ ರಾಯನ್ ರಾಜ್ ಸರ್ಜಾ ಹುಟ್ಟುಹಬ್ಬ - Chiru Meghana son Rayan Raj Sarja

ದಿ.ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ಸರ್ಜಾ ಮುದ್ದಿನ ಮಗ ರಾಯನ್ ರಾಜ್ ಸರ್ಜಾಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಜೆ.ಪಿ ನಗರದಲ್ಲಿರೋ ತಮ್ಮ ನಿವಾಸದಲ್ಲಿ, ಕಾಡಿನ ಥೀಮ್​ನಲ್ಲಿ ಬಹಳ ಗ್ರ್ಯಾಂಡ್ ಆಗಿ ಡೆಕೊರೇಷನ್ ಮಾಡಲಾಗಿದ್ದು, ಬಲೂನ್‌ಗಳಿಂದ ಕೂಡಿರುವ ಆಟದ ಮೈದಾನವನ್ನ ಸೃಷ್ಟಿ ಮಾಡಲಾಗಿದೆ.

ರಾಯನ್ ರಾಜ್ ಸರ್ಜಾ
ರಾಯನ್ ರಾಜ್ ಸರ್ಜಾ
author img

By

Published : Oct 22, 2021, 3:11 PM IST

Updated : Oct 22, 2021, 3:22 PM IST

ದಿ.ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ಸರ್ಜಾ ಮುದ್ದಿನ ಮಗ ರಾಯನ್ ರಾಜ್ ಸರ್ಜಾಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಇದು ರಾಯನ್ ರಾಜ್ ಸರ್ಜಾ ಮೊದಲ ವರ್ಷದ ಹುಟ್ಟು ಹಬ್ಬ.

ಚಿರು - ಮೇಘನಾ ಪುತ್ರ ರಾಯನ್ ರಾಜ್ ಸರ್ಜಾ ಹುಟ್ಟುಹಬ್ಬ

ಮೇಘನಾ ರಾಜ್ ಪುತ್ರನ ಹುಟ್ಟು ಹಬ್ಬವನ್ನು ಬಹಳ ವಿಶೇಷವಾಗಿ ಸೆಲೆಬ್ರೆಟ್ ಮಾಡುತ್ತಿದ್ದಾರೆ. ಜೆ.ಪಿ ನಗರದಲ್ಲಿರೋ ತಮ್ಮ ನಿವಾಸದಲ್ಲಿ, ಕಾಡಿನ ಥೀಮ್​ನಲ್ಲಿ ಬಹಳ ಗ್ರ್ಯಾಂಡ್ ಆಗಿ ಡೆಕೊರೇಷನ್ ಮಾಡಲಾಗಿದ್ದು, ಬಲೂನ್‌ಗಳಿಂದ ಕೂಡಿರುವ ಆಟದ ಮೈದಾನವನ್ನ ಸೃಷ್ಟಿ ಮಾಡಲಾಗಿದೆ.

ಹಿರಿಯ ನಟಿ ಸುಧಾರಾಣಿ ಸೇರಿದಂತೆ ಕನ್ನಡ ಚಿತ್ರರಂಗದ ಸ್ನೇಹಿತರು ಹಾಗೂ ಕುಟುಂಬದವರು ರಾಯನ್ ರಾಜ್ ಸರ್ಜಾಗೆ ಶುಭಾಶಯ ‌ತಿಳಿಸುತ್ತಿದ್ದಾರೆ. ಮೇಘನಾ ರಾಜ್ ಮನೆಯಲ್ಲಿ ಕಳೆ ಕಟ್ಟಿರುವ ರಾಯನ್ ರಾಜ್ ಸರ್ಜಾ ಹುಟ್ಟು ಹಬ್ಬದ ಕ್ಷಣಗಳನ್ನ, ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯ್ ಸಂಬಂಧಿಯಾಗಿರೋ ತೇಜ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ರಾಯನ್ ರಾಜ್ ಸರ್ಜಾ ಜತೆ ಹಿರಿಯ ನಟಿ ಸುಧಾರಾಣಿ
ರಾಯನ್ ರಾಜ್ ಸರ್ಜಾ ಜತೆ ಹಿರಿಯ ನಟಿ ಸುಧಾರಾಣಿ

ಚಿರಂಜೀವಿ ಸರ್ಜಾ ನಿಧನದ ಬಳಿಕ ಮೇಘನಾ ರಾಜ್​ ಬದುಕಿನಲ್ಲಿ ಕತ್ತಲೆ ಆವರಿಸಿತ್ತು. ಅವರ ಬಾಳಿಗೆ ಹೊಸ ಭರವಸೆಯ ಬೆಳಗಾಗಿ ಬಂದಿದ್ದೇ ರಾಯನ್​ ರಾಜ್​ ಸರ್ಜಾ. ಮಗನ ಆಗಮನದ ಬಳಿಕ ಮೇಘನಾ ರಾಜ್​, ಅಲ್ಲದೇ ಅವರ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.

ಕೆಲವು ದಿನಗಳ ಹಿಂದೆ ಮೇಘನಾ ರಾಜ್ ಮಗನ ನಾಮಕರಣವನ್ನ ಬಹಳ ಅದ್ಧೂರಿಯಾಗಿ ಮಾಡಿದರು. ಈಗ ಮಗ ರಾಯನ್ ರಾಜ್ ಸರ್ಜಾ ಮೊದಲ ವರ್ಷದ ಬರ್ತ್ ಡೇಯನ್ನ ಗ್ರ್ಯಾಂಡ್ ಆಗಿ ಆಚರಿಸುತ್ತಿದ್ದಾರೆ.

Last Updated : Oct 22, 2021, 3:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.