ETV Bharat / sitara

ಜೀವ ಪಡೆದ ರಾಜ ರವಿವರ್ಮನ ಚಿತ್ರಗಳು...ಫೋಟೋಗ್ರಾಫರ್ ಐಡಿಯಾಗೆ ಚಿತ್ರರಂಗ ಫಿದಾ

author img

By

Published : Feb 4, 2020, 11:27 PM IST

Updated : Feb 5, 2020, 3:46 PM IST

ನಟಿಯರ ಹೇರ್​ಸ್ಟೈಲ್, ಮುಖಭಾವ, ಪೋಟೋಶೂಟ್​​ಗಾಗಿ ಹಾಕಲಾಗಿರುವ ಸೆಟ್ ಎಲ್ಲವೂ ರವಿವರ್ಮನ ಚಿತ್ರಕಲೆಯನ್ನು ಹೋಲುತ್ತಿದೆ. 2020 ರ ಕ್ಯಾಲೆಂಡರ್​​​ಗಾಗಿ ಜಿ. ವೆಂಕಟರಾಮ್ ಈ ಫೋಟೋಗ್ರಫಿ ಮಾಡಿದ್ದು ಶೀಘ್ರದಲ್ಲೇ ಈ ಕ್ಯಾಲೆಂಡರ್ ಬಿಡುಗಡೆಯಾಗಲಿದೆ.

Ravivarma
ರವಿವರ್ಮನ ಚಿತ್ರಗಳು

ರಾಜ ರವಿವರ್ಮನ ಹೆಸರನ್ನು ಯಾರು ತಾನೇ ಕೇಳಿಲ್ಲ...? ಸುಮಾರು 200 ವರ್ಷಗಳ ಹಿಂದೆ ಕೇರಳದ ತಿರುವನಂತಪುರಂ ಪ್ರಾಂತ್ಯವನ್ನು ಆಳಿದ ರವಿವರ್ಮ, ಚಿತ್ರಕಲೆಯಲ್ಲಿ ಎತ್ತಿದ ಕೈ. ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ರವಿವರ್ಮ ಬರೆದ 'ಗ್ಲೋ ಆಫ್ ಹೋಪ್' ಚಿತ್ರಕಲೆಯನ್ನು ನೀವು ಇಂದಿಗೂ ನೋಡಬಹುದು.

Samanta Akkineni
ಸಮಂತಾ ಅಕ್ಕಿನೇನಿ
Shruti hassan
ಶೃತಿ ಹಾಸನ್

ಇದೀಗ ರಾಜ ರವಿವರ್ಮನ ಚಿತ್ರಕಲೆಗಳಿಗೆ ಮತ್ತೆ ಜೀವ ಬಂದಿದೆ. ಹೌದಾ.. ಅದು ಹೇಗೆ ಅಂತೀರಾ..? ತಮಿಳಿನ ಖ್ಯಾತ ಫೋಟೋಗ್ರಾಫರ್ ಜಿ. ವೆಂಕಟ್​​​​ರಾಮ್ ಅವರ ಪರಿಕಲ್ಪನೆಯಿಂದ ಮತ್ತೊಮ್ಮೆ ಎಲ್ಲರೂ ರವಿವರ್ಮನನ್ನು ನೆನಪಿಸಿಕೊಳ್ಳುವಂತಾಗಿದೆ. ಖ್ಯಾತ ನಟಿಯರಾದ ಸಮಂತಾ ಅಕ್ಕಿನೇನಿ, ಖಷ್ಬೂ, ಶೃತಿ ಹಾಸನ್, ಐಶ್ವರ್ಯ ರಾಜೇಶ್, ಲಕ್ಷ್ಮಿ ಮಂಚು, ಶೋಭನಾ, ರಮ್ಯಕೃಷ್ಣನ್ ಹಾಗೂ ಇನ್ನಿತರರು ರವಿವರ್ಮನ ಚಿತ್ರಕಲೆಯ ಜೀವಂತ ಗೊಂಬೆಗಳಾಗಿ ಮಾರ್ಪಟ್ಟಿದ್ದಾರೆ. ರವಿವರ್ಮನ ಖ್ಯಾತ ಪೇಯ್ಟಿಂಗ್​​ಗಳಾದ ದೇರ್ ಕಮ್ಸ್ ಪಾಪಾ, ಮಹಾರಾಣಿ ಭರಣಿ ತಿರುನಲ್ ಲಕ್ಷ್ಮಿಬಾಯಿ, ದಮಯಂತಿ ಟಾಕಿಂಗ್ ಟು ಸ್ವಾನ್, ದಿ ಮಹಾರಾಷ್ಟ್ರಿಯನ್ ಲೇಡಿ, ವುಮನ್ ಹೋಲ್ಡಿಂಗ್ ಎ ಫ್ರೂಟ್​ ಹಾಗೂ ಇನ್ನಿತರ ಪೇಯ್ಟಿಂಗ್​​​​ಗಳನ್ನು ಜಿ. ವೆಂಕಟ್​​​​ರಾಮ್ ಅವರು ಪೋಟೋಗ್ರಫಿ ಮೂಲಕ ಮರುಸೃಷ್ಟಿಸಿದ್ದಾರೆ.

Khushboo
ಖುಷ್ಬೂ
Shobhana
ಶೋಭನಾ

ನಟಿಯರ ಹೇರ್​ಸ್ಟೈಲ್, ಮುಖಭಾವ, ಪೋಟೋಶೂಟ್​​ಗಾಗಿ ಹಾಕಲಾಗಿರುವ ಸೆಟ್ ಎಲ್ಲವೂ ರವಿವರ್ಮನ ಚಿತ್ರಕಲೆಯನ್ನು ಹೋಲುತ್ತಿದೆ. 2020 ರ ಕ್ಯಾಲೆಂಡರ್​​​ಗಾಗಿ ಜಿ. ವೆಂಕಟರಾಮ್ ಈ ಫೋಟೋಗ್ರಫಿ ಮಾಡಿದ್ದು ಶೀಘ್ರದಲ್ಲೇ ಈ ಕ್ಯಾಲೆಂಡರ್ ಬಿಡುಗಡೆಯಾಗಲಿದೆ. ಜಿ. ವೆಂಕಟರಾಮ್ ಅವರ ಈ ಐಡಿಯಾಗೆ ಚಿತ್ರರಂಕಕ್ಕೆ ಚಿತ್ರರಂಗವೇ ಫಿದಾ ಆಗಿದ್ದು ಈ ಫೋಟೋಗಳು ಇದೀಗ ಇಂಟರ್​​ನೆಟ್​​​ನಲ್ಲಿ ಹರಿದಾಡುತ್ತಿವೆ.

Aishwarya Rajesh
ಐಶ್ವರ್ಯ ರಾಜೇಶ್
Ramyakrishnan
ರಮ್ಯಕೃಷ್ಣನ್​​

Last Updated : Feb 5, 2020, 3:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.