ಹುಬ್ಬಳ್ಳಿ : ಕನ್ನಡ ಸಿನಿಮಾಗಳು ಎಷ್ಟೇ ಚೆನ್ನಾಗಿದ್ರೂ ಕೂಡಾ ಆನ್‌ಲೈನ್ ಸಿನಿಮಾ ಬುಕಿಂಗ್ ಆ್ಯಪ್‌ಗಳು ಕನ್ನಡ ಸಿನಿಮಾಗಳಿಗೆ ಕಡಿಮೆ ರೇಟಿಂಗ್ಸ್ ಕೊಟ್ಟು ಅನ್ಯಾಯ ಮಾಡುತ್ತಿವೆ ಎಂದು ಸಾಗುತ ದೂರ ದೂರ ಸಿನಿಮಾ ನಿರ್ದೇಶಕ ರವಿತೇಜ ಆರೋಪಿಸಿದರು.
ಹುಬ್ಬಳ್ಳಿ ಶೃಂಗಾರ ಚಿತ್ರಮಂದಿರಕ್ಕೇ ಭೇಟಿ ನೀಡಿ ಸಾಗುತ ದೂರಾ ದೂರಾ ಚಿತ್ರ ವೀಕ್ಷಣೆ ಬಳಿಕ ಮಾತನಾಡಿದ ಅವರು, ಕನ್ನಡದಲ್ಲಿ ಇತ್ತೀಚೆಗೆ ಹಲವಾರು ಹೊಸ ಪ್ರತಿಭೆಗಳು ಅತ್ಯುತ್ತಮ ಚಿತ್ರಗಳನ್ನು ನಿರ್ಮಾಣ ಮಾಡುತ್ತಿವೆ. ಕಥೆ, ಗುಣಮಟ್ಟದಲ್ಲಿ ಚೆನ್ನಾಗಿದ್ದರೂ ಕೂಡಾ ಆನ್‌ಲೈನ್ ಚಿತ್ರಗಳ ಬುಕಿಂಗ್ ಆ್ಯಪ್‌ಗಳು ಮಾತ್ರ ಕನ್ನಡ ಸಿನಿಮಾಗಳಿಗೆ ರೇಟಿಂಗ್ಸ್ ನೀಡುತ್ತಿಲ್ಲ. ಬದಲಾಗಿ ತೆಲುಗು, ತಮಿಳು ಚಿತ್ರಗಳು ಸರಿ ಇರದೇ ಹೋದರೂ, ಅವುಗಳಿಗೆ ರೇಟಿಂಗ್ ಕೊಡುವ ಮೂಲಕ ಕರ್ನಾಟಕದಲ್ಲಿ ಕನ್ನಡ ಚಿತ್ರಗಳ ವೀಕ್ಷಕರಿಗೆ ದಾರಿ ತಪ್ಪಿಸುತ್ತಿವೆ ಎಂದರು.
ಬುಕ್ ಮೈ ಶೋ ಆ್ಯಪ್ನವರು ತಮಿಳು, ತೆಲುಗು ಸಿನಿಮಾಗಳಿಗೆ ನೀಡುವಷ್ಟು ರೇಟಿಂಗ್ನ ಕನ್ನಡಕ್ಕೆ ನೀಡುತ್ತಿಲ್ಲ. ಕನ್ನಡ ಚಲನಚಿತ್ರ ವೀಕ್ಷಕರು ಆನ್ಲೈನ್ನಲ್ಲಿ ನೀಡುವ ರೆಟಿಂಗ್ಸ್ನ ನೋಡದೇ ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡಿ, ತಾವೇ ರೇಟಿಂಗ್ಸ್ ಕೊಡಬೇಕು ಎಂದು ಮನವಿ ಮಾಡಿದರು.