ETV Bharat / sitara

ಹಳ್ಳಿ ಮೇಷ್ಟ್ರು ಚಿತ್ರದ ಹೀರೋಯಿನ್ ಕಿರಿಕ್ ಅಂತಾ ಒಪ್ಪಿಕೊಂಡ್ರು ನಟ ರವಿಚಂದ್ರನ್! - ಹಳ್ಳಿ ಮೇಷ್ಟ್ರು ಸಿನೆಮಾದ ಬಗ್ಗೆ ರವಿಚಂದ್ರನ್​ ಪ್ರತಿಕ್ರಿಯೆ

ಕಾಮಿಡಿ, ಪ್ರೀತಿ ಎರಡರ ಕಥೆ ಹೊಂದಿದ್ದ ಹಳ್ಳಿಮೇಷ್ಟ್ರು ಸಿನಿಮಾದ ಹಾಡುಗಳು ಸಹ ಸೂಪರ್ ಹಿಟ್ ಆಗಿದ್ದವು. ಈ ಚಿತ್ರದಲ್ಲಿ ಹೀರೋಯಿನ್ ಆಗಿ ಅಭಿನಯಿಸಿದ ವಿಂದ್ಯಾ, ಹಳ್ಳಿಮೇಷ್ಟ್ರು ಸಿನಿಮಾ ಸಂದರ್ಭದಲ್ಲಿ ಕಿರಿಕ್ ಮಾಡಿಕೊಂಡು ರವಿಚಂದ್ರನ್ ಮೇಲೆ ದೊಡ್ಡ ಆರೋಪ ಹೊರಿಸುವ ಮೂಲಕ ಕಿರಿಕ್ ಹೀರೋಯಿನ್ ಅಂತಾ ಕರೆಯಿಸಿಕೊಂಡಿದ್ದರು.

Actor Ravichandran
ನಟ ರವಿಚಂದ್ರನ್
author img

By

Published : Feb 16, 2022, 9:07 PM IST

ಕನ್ನಡ ಚಿತ್ರರಂಗದಲ್ಲಿ ಆಲ್ ಟೈಮ್ ಸೂಪರ್ ಹಿಟ್ ಸಿನಿಮಾಗಳ ಸಾಲಿನಲ್ಲಿ ಹಳ್ಳಿಮೇಷ್ಟ್ರು ಕೂಡ ಒಂದು. ಈ ಸಿನಿಮಾವನ್ನ‌ ಇಂದು ಟಿವಿಯಲ್ಲಿ ಪ್ರಸಾರವಾದಾಗ ಜನ ಬಹಳ ಇಷ್ಟಪಟ್ಟು ನೋಡುತ್ತಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿ, ನಿರ್ದೇಶನ ಮಾಡಿರೋ ಹಳ್ಳಿಮೇಷ್ಟ್ರು ತಮಿಳು ಸಿನಿಮಾದ ರಿಮೇಕ್ ಆದರೂ ಸಹ ರವಿಚಂದ್ರನ್ ಅವರು ಕನ್ನಡದ ನೇಟಿವಿಟಿಗೆ ತಕ್ಕಂತೆ ಸಿನಿಮಾವನ್ನು ನಿರ್ದೇಶನ ಮಾಡಿದ್ದರು.

ನಟ ರವಿಚಂದ್ರನ್ ಮಾತನಾಡಿದರು

ಕಾಮಿಡಿ, ಪ್ರೀತಿ ಎರಡರ ಕಥೆ ಹೊಂದಿದ್ದ ಹಳ್ಳಿಮೇಷ್ಟ್ರು ಸಿನಿಮಾದ ಹಾಡುಗಳು ಸಹ ಸೂಪರ್ ಹಿಟ್ ಆಗಿದ್ದವು. ಈ ಚಿತ್ರದಲ್ಲಿ ಹೀರೋಯಿನ್ ಆಗಿ ಅಭಿನಯಿಸಿದ ಬಿಂದಿಯಾ, ಹಳ್ಳಿಮೇಷ್ಟ್ರು ಸಿನಿಮಾ ಸಂದರ್ಭದಲ್ಲಿ ಕಿರಿಕ್ ಮಾಡಿಕೊಂಡು ರವಿಚಂದ್ರನ್ ಮೇಲೆ ದೊಡ್ಡ ಆರೋಪ ಹೊರಿಸುವ ಮೂಲಕ ಕಿರಿಕ್ ಹೀರೋಯಿನ್ ಅಂತಾ ಕರೆಯಿಸಿಕೊಂಡಿದ್ದರು.

ಆದರೆ, ರವಿಚಂದ್ರನ್ ಎಲ್ಲೂ ಆ ಹೀರೋಯಿನ್ ಕಿರಿಕ್ ಅಂತಾ ಹೇಳಿರಲಿಲ್ಲ. ನಿರ್ದೇಶಕ ಹರಿ ಸಂತೋಷ್ ನಿರ್ದೇಶನದ, ಧನ್ವೀರ್ ಹಾಗೂ ಶ್ರೀಲೀಲಾ ಅಭಿನಯದ 'ಬೈ ಟು ಲವ್' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಬಂದಿದ್ದ ರವಿಚಂದ್ರನ್, ಹಳ್ಳಿಮೇಷ್ಟ್ರು ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ನಟಿ ಬಿಂದಿಯಾ ಮಾಡಿದ ಅವಾಂತರ ಬಗ್ಗೆ ಹಂಚಿಕೊಂಡರು.

ಅದಕ್ಕೂ ಒಂದು ಕಾರಣ ಇದೆ. ಬೈ ಟು ಲವ್ ಸಿನಿಮಾದಲ್ಲಿ ಒಂದು ಮಗು ಅಭಿನಯ ಮಾಡಿದೆ. ಆ ಮಗು ಎಷ್ಟು ಹೈಪರ್ ಆ್ಯಕ್ಟೀವ್ ಅಂದ್ರೆ, ಸ್ಟೇಜ್ ಮೇಲೆ ಬಿಟ್ಟರೆ ಸ್ಟೇಜ್ ತುಂಬಾ ಒಡಾಡುತ್ತಾ ಒಂದಿಷ್ಟು ತರ್ಲೆ ಮಾಡ್ತಾ ಇತ್ತು. ಈ ಮಗುವನ್ನ ಗಮನಿಸಿದ ನಟ ರವಿಚಂದ್ರನ್ ಮಕ್ಕಳನ್ನ ಹೇಗೆ ಹ್ಯಾಂಡಲ್ ಮಾಡಬೇಕು ಅಂತಾ ಹೇಳುವ ಸಂದರ್ಭದಲ್ಲಿ ಹಳ್ಳಿಮೇಷ್ಟ್ರು ಸಿನಿಮಾದ ನೆನಪುಗಳನ್ನ ಹೊರ ಹಾಕಿದರು‌.

ಮಗುವಿನ ಮೇಲೆ ಹೀರೋಯಿನ್ ಬಿಂದಿಯಾ ದಾಟುವ ಸಿಕ್ವೇನ್ಸ್. ಆದರೆ, ಹೀರೋಯಿನ್ ದಾಟುವ ವೇಳೆ ಆ ಮಲಗಿದ್ದ ಮಗು ಎದ್ದು ಕುಳಿತುಕೊಳ್ಳುತ್ತಿತ್ತು. ಮತ್ತೊಂದು ಕಡೆ ನಟಿ ಲಂಗಾ ಹಾಗು ಸೀರೆ ಹಾಕಿಕೊಳ್ಳಬೇಕು. ಆದರೆ, ನಟಿ ಲಂಗಾದ ಒಳಗೆ ಮತ್ತೊಂದು ಡ್ರೆಸ್ ಹಾಕಿಕೊಂಡು ಕಿರಿಕಿರಿ ಮಾಡ್ತಾ ಇದ್ದಳು. ಹಾಗೇ ಕ್ಯಾಮರಾಮ್ಯಾನ್ ಜೊತೆ ಗಲಾಟೆ ಮಾಡಿದಳು. ಇದು ನನಗೆ ಗೊತ್ತಾಗಿರಲಿಲ್ಲ ಎಂದಿದ್ದಾರೆ. ಕಾರಣ ಆಗ ಅವರು ತನ್ನ ಅಸಿಸ್ಟೆಂಟ್ ಡೈರೆಕ್ಟರ್​ಗಳು ನಿರ್ದೇಶನ ಮಾಡುತ್ತಿದ್ದರು.

ಒಂದು ವಾರ ಆದರೂ ಮಗುವಿನ ಶಾಟ್ ತೆಗೆಯೋದಿಕ್ಕೆ ಆಗಿರಲಿಲ್ಲ. ಈ ವಿಷ್ಯ ಗೊತ್ತಾಗಿ ನಾನು ಕೆಲವೇ ಕ್ಷಣದಲ್ಲಿ ಆ ಶಾಟ್ ಮುಗಿಸಿದೆ ಅಂದರು. ಇನ್ನು ಶಾಂತಿ ಕ್ರಾಂತಿ ಸಿನಿಮಾ ಮಾಡಬೇಕಾದರೆ, ಮೂರು ಸಾವಿರ ಮಕ್ಕಳನ್ನ ರವಿಚಂದ್ರನ್, ಚಿತ್ರೀಕರಣದಲ್ಲಿ ಬಳಸಿಕೊಂಡಿದ್ದು ಒಂದು ದಾಖಲೆನೇ. ಯಾಕೆಂದರೆ ಒಂದು ಮಗುವನ್ನ‌ ಸಿನಿಮಾ ಚಿತ್ರೀಕರಣದಲ್ಲಿ ಮೆಟೈಂನ್ ಮಾಡೋದು ಕಷ್ಟ.

ಶಾಲಾ ಶಿಕ್ಷಕರೇ ನೀವು ಬೆಟ್ಟ್​​ ಟೀಚರ್​ ಎಂದು ಹೊಗಳಿದ್ದರಂತೆ: ಅಂತಹುದರಲ್ಲಿ ರವಿಚಂದ್ರನ್ ಅವರ ಶಾಂತಿ ಕ್ರಾಂತಿ ಸಿನಿಮಾದಲ್ಲಿ ನಾನು ಮೂರು ಸಾವಿರ ಮಕ್ಕಳನ್ನ ಸಂಬಾಳಿಸುತ್ತಿದ್ದೆ. ಬಿಸಿಲಿನಲ್ಲಿ ಮಕ್ಕಳು ನಿಂತಿರಬೇಕಾದ್ರೆ, ನಾನು ಛತ್ರಿಯನ್ನು ಹಿಡಿದುಕೊಳ್ಳುತ್ತಿರಲಿಲ್ಲ. ಹಾಗೆಯೇ, ಅವರ ಮುಂದೆ ಜ್ಯೂಸ್ ಕುಡಿಯೋದನ್ನ ಬೇಡ ಅಂದಿದ್ದೇ. ಹಾಗೇ ಮೂರು ಜನ ಸಾವಿರ ಮಕ್ಕಳು ನನ್ನ ಜೊತೆ 300 ದಿನ‌ ಇದ್ರು. ಕೊನೆಯಲ್ಲಿ ಆ ಮಕ್ಕಳ ಸ್ಕೂಲ್ ಶಿಕ್ಷಕರು ಬಂದು Your Best Teacher Our Children ಅಂತಾ ಕೊಂಡಾಡಿದ್ರಂತೆ. ಆ ದಿನಗಳನ್ನ ರವಿಚಂದ್ರನ್ ಬೈ ಟು ಲವ್ ಸಿನಿಮಾದ ಕಾರ್ಯಕ್ರಮದಲ್ಲಿ ಹಂಚಿಕೊಂಡರು.

ಓದಿ: ಉತ್ತರ ಬಂಗಾಳದೊಂದಿಗೆ ಬಪ್ಪಿ ಲಹರಿಗೆ ಅವಿನಾಭಾವ ಸಂಬಂಧ ಇತ್ತು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.