ETV Bharat / sitara

ಮನೋರಂಜನ್ 'ಪ್ರಾರಂಭ' ಟೀಸರ್​​ ಆರಂಭವಾಗುವುದೇ ದರ್ಶನ್ ಮಾತಿನಿಂದ! - ಆನಂದ್ ಆಡಿಯೋ

ರವಿಚಂದ್ರನ್ ಅವರ ಮೇಲಿನ ಗೌರವಕ್ಕೆ ಮೊನ್ನೆಯಷ್ಟೇ ಸುದೀಪ್ 'ರವಿ ಬೋಪಣ್ಣ' ಶೂಟಿಂಗ್​ ಸೆಟ್​​​ಗೆ ಬಂದು ತಮ್ಮ ಭಾಗದ ಚಿತ್ರೀಕರಣ ಮುಗಿಸಿಕೊಟ್ಟರು. ಇದೀಗ ದರ್ಶನ್ ಅವರು ರವಿಚಂದ್ರನ್​​​​​​​​​​​​​​​​ ಪುತ್ರ ಮನೋರಂಜನ್ 'ಪ್ರಾರಂಭ' ಸಿನಿಮಾ ಟೀಸರ್​​​ಗೆ ಬಿಡುವು ಮಾಡಿಕೊಂಡು ಧ್ವನಿ ನೀಡಿದ್ದಾರೆ.

ದರ್ಶನ್ ಪ್ರಾರಂಭ
author img

By

Published : Aug 21, 2019, 9:25 AM IST

ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಪುತ್ರ ಮನೋರಂಜನ್ ರವಿಚಂದ್ರನ್ ಮೂರನೇ ಸಿನಿಮಾ ‘ಪ್ರಾರಂಭ’ ಶೂಟಿಂಗ್ ಮುಗಿದಿದ್ದು, ಪೋಸ್ಟ್​ ಪ್ರೊಡಕ್ಷನ್ ಹಂತದಲ್ಲಿದೆ. ಚಿತ್ರದ ಟೀಸರ್ ಇದೇ ತಿಂಗಳ 23ರಂದು ಬಿಡುಗಡೆ ಆಗುತ್ತಿದೆ. ವಿಶೇಷ ಅಂದ್ರೆ ಟೀಸರ್​​​​​ಗೆ ಚಾಲೆಂಜಿಂಗ್ ಸ್ಟಾರ್​ ದರ್ಶನ್ ಧ್ವನಿ ನೀಡಿದ್ದಾರೆ. ಆನಂದ್ ಆಡಿಯೋ ಈ ಟೀಸರ್ ಬಿಡುಗಡೆ ಮಾಡುತ್ತಿದೆ.

prarambha
ದರ್ಶನ್ ಜೊತೆ 'ಪ್ರಾರಂಭ' ಚಿತ್ರತಂಡ

ದರ್ಶನ್ ಹಾಗೂ ವಿ.ರವಿಚಂದ್ರನ್ ಸ್ನೇಹ ಬಹಳ ಹಳೆಯದು. ಈ ಸ್ನೇಹ ಹಾಗೂ ರವಿಚಂದ್ರನ್ ಮೇಲಿನ ಗೌರವಕ್ಕೆ ಬೆಲೆ ನೀಡಿ ಅವರ ಮಗನ ಸಿನಿಮಾಕ್ಕೆ ದರ್ಶನ್​​​ ಧ್ವನಿ ನೀಡಿದ್ದಾರೆ. ಬೆಂಗಳೂರು, ಬಳ್ಳಾರಿ, ಚಿಕ್ಕಮಗಳೂರು, ಗೋವಾ, ಮೂಡಿಗೆರೆ, ಮೈಸೂರು ಹಾಗೂ ಇನ್ನಿತರ ಸ್ಥಳಗಳಲ್ಲಿ 50 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಮನು ಕಲ್ಯಾಡಿ ಕಥೆ ಹಾಗೂ ನಿರ್ದೇಶನವಿರುವ ಈ ಚಿತ್ರವನ್ನು ಜಗದೀಶ್ ಕಲ್ಯಾಡಿ ನಿರ್ಮಿಸಿದ್ದಾರೆ. ಜೇನುಶ್ರೀ ತನುಷ ಪ್ರೊಡಕ್ಷನ್ ಬ್ಯಾನರ್ ಅಡಿ ಚಿತ್ರವನ್ನು ನಿರ್ಮಿಸಲಾಗುತ್ತಿದೆ.

prarambha
ಟೀಸರ್​​ಗಾಗಿ ಡಬ್ ಮಾಡುತ್ತಿರುವ ದರ್ಶನ್

ಚಿತ್ರದ 5 ಹಾಡುಗಳಿಗೆ ಪ್ರಜ್ವಲ್ ಪೈ ಸಂಗೀತ ನೀಡಿದ್ದಾರೆ. 2 ಆ್ಯಕ್ಷನ್ ದೃಶ್ಯಗಳಿಗೆ ಥ್ರಿಲ್ಲರ್ ಮಂಜು ಹಾಗೂ ವಿಕ್ರಮ್ ಮೋರ್ ಸಾಹಸ ನಿರ್ದೇಶನ ಮಾಡಿದ್ದಾರೆ. ಸುರೇಶ್​​​​​ ಬಾಬು ಛಾಯಾಗ್ರಹಣ, ವಿಜಯ್​​ ಎನ್​​​. ಕುಮಾರ್ ಸಂಕಲನ, ಸಂತು ಹಾಗೂ ಗೀತಾ ನೃತ್ಯ ನಿರ್ದೇಶನ, ರವಿ ಸಂತೆಹಕ್ಲು ಕಲಾ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಸಂತೋಷ್ ನಾಯಕ್ ಹಾಡುಗಳನ್ನು ಬರೆದಿದ್ದಾರೆ. ಮನೋರಂಜನ್ ಜೊತೆ ಕೀರ್ತಿ ನಾಯಕಿ ಆಗಿ ಅಭಿನಯಿಸಿದ್ದಾರೆ. ಕಡ್ಡಿಪುಡಿ ಚಂದ್ರು, ಹನುಮಂತೇ ಗೌಡ, ರಘು ಶ್ರೀವಾತ್ಸವ್, ಶಾಂಭವಿ, ಸೂರಜ್ ಹಾಗೂ ಇತರರು ತಾರಾಗಣದಲ್ಲಿದ್ದಾರೆ.

ಪ್ರಾರಂಭ ಸಿನಿಮಾಕ್ಕೆ ದರ್ಶನ್ ಮಾತು ಪ್ರಾರಂಭದಲ್ಲಿ

ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಅವರ ಪುತ್ರ ಮನೋರಂಜನ್ ರವಿಚಂದ್ರನ್ ಪ್ರಾರಂಭ (ಮೂರನೇ ಸಿನಿಮಾ) ಸಿದ್ದವಾಗುತ್ತಿದೆ. ಆ ಚಿತ್ರದ ಟೀಸರ್ 23 ರಂದು ಬಿಡುಗಡೆ ಆಗುತ್ತಿದೆ. ಅದರ ವಿಶೇಷ ಏನಪ್ಪಾ ಅಂದರೆ ಡಿ ಬಾಸ್ ದರ್ಶನ್ ಅದಕ್ಕೆ ಮಾತುಗಳನ್ನು ಜೋಡಿಸಿದ್ದಾರೆ. ಆನಂದ್ ಆಡಿಯೋ ಈ ಟೀಸರ್ ಬಿಡುಗಡೆ ಮಾಡುತ್ತಿದೆ.

ಡಿ ಬಾಸ್ ದರ್ಶನ್ ಹಾಗೂ ವಿ ರವಿಚಂದ್ರನ್ ಅವರ ಸ್ನೇಹ ಬಹಳ ಹಳೆಯದು. ಈ ಸ್ನೇಹವೇ ಮತ್ತು ರವಿಚಂದ್ರನ್ ಅವರ ಮೇಲಿನ ಗೌರವಕ್ಕೆ ಡಿ ಬಾಸ್ ಅವರ ಮಗನ ಸಿನಿಮಾಕ್ಕೆ ಮಾತುಗಳನ್ನು ಜೋಡಿಸಿರುವುದು.

ಪ್ರಾರಂಭ ಚಿತ್ರೀಕರಣ ಮುಖ್ತಾಯ ಆಗಿರುವ ಸಿನಿಮಾ ಬೆಂಗಳೂರು,ಬಳ್ಳಾರಿ, ಚಿಕ್ಕಮಗಳೂರು, ಗೋವ, ಮೂಡಿಗೆರೆ, ಮೈಸೂರು ಸ್ಥಳಗಳಲ್ಲಿ 50 ದಿವಸ ಚಿತ್ರೀಕರಣ ಮಾಡಲಾಗಿದೆ. ಮನು ಕಲ್ಯಾಡಿ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಜಗದೀಶ್ ಕಲ್ಯಾಡಿ ನಿರ್ಮಾಣ ಜೇನುಸ್ರಿ ತನುಷ ಪ್ರೊಡಕ್ಷನ್ ಇಂದ ಆಗಿದೆ.

ಐದು ಹಾಡುಗಳಿಗೆ ಪ್ರಜ್ವಲ್ ಪೈ ಸಂಗೀತ, 2 ಸಾಹಗಳಿಗೆ ಥ್ರಿಲ್ಲರ್ ಮಂಜು ಹಾಗೂ ವಿಕ್ರಮ್ ಮೋರ್ ಸಾಹಸ, ಛಾಯಾಗ್ರಹಣ ಸುರೇಶ್ ಬಾಬು, ವಿಜಯ್ ಎನ್ ಕುಮಾರ್ ಸಂಕಲನ, ಸಂತು ಹಾಗೂ ಗೀತಾ ನೃತ್ಯ ನಿರ್ದೇಶನ, ರವಿ ಸಂತೆಹಕ್ಲು ಕಲಾ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಸಂತೋಷ್ ನಾಯಕ್ ಹಾಡುಗಳನ್ನು ಬರೆದಿದ್ದಾರೆ.

ಮನೋರಂಜನ್ ವಿ ರವಿಚಂದ್ರನ್ ಜೊತೆ ಕೀರ್ತಿ ನಾಯಕಿ ಆಗಿ ಅಭಿನಯಿಸಿದ್ದಾರೆ, ಕಡ್ಡಿಪುಡಿ ಚಂದ್ರು, ಹನುಮಂತೆ ಗೌಡ, ರಘು ಶ್ರೀವತ್ಸವ್, ಶಾಂಭವಿ, ಸೂರಜ್ ಹಾಗೂ ಇತರರು ತಾರಗಣದಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.