ETV Bharat / sitara

ರಶ್ಮಿಕಾ ಅಭಿನಯದ 'ಭೀಷ್ಮ' ಚಿತ್ರಕ್ಕೆ ಮುಹೂರ್ತ: ನಿತಿನ್ ಜೊತೆ ತೆರೆ ಹಂಚಿಕೊಳ್ಳುತ್ತಿರುವ ಗೀತ - undefined

ನಿತಿನ್ ಹಾಗೂ ರಶ್ಮಿಕಾ ಮಂದಣ್ಣ ಕಾಂಬಿನೇಷನ್​​ನಲ್ಲಿ ಮೂಡಿಬರುತ್ತಿರುವ 'ಭೀಷ್ಮ' ಚಿತ್ರಕ್ಕೆ ನಿನ್ನೆ ಮುಹೂರ್ತ ಜರುಗಿದೆ. ವೆಂಕಿ ಕುಡುಮಲ ನಿರ್ದೇಶನದಲ್ಲಿ ರಶ್ಮಿಕಾ ನಟಿಸುತ್ತಿರುವ ಎರಡನೇ ಚಿತ್ರ ಇದು. 'ಚಲೋ' ಸಿನಿಮಾವನ್ನು ಕೂಡಾ ವೆಂಕಿ ನಿರ್ದೇಶಿಸಿದ್ದರು.

ನಿತಿನ್ , ರಶ್ಮಿಕಾ
author img

By

Published : Jun 13, 2019, 3:16 PM IST

ಒಂದೆಡೆ ರಶ್ಮಿಕಾ ಮಂದಣ್ಣ ಅಭಿನಯದ 'ಡಿಯರ್ ಕಾಮ್ರೇಡ್​​​​' ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಇನ್ನು ಕಳೆದ ತಿಂಗಳು ಸೂಪರ್ ಸ್ಟಾರ್​ ಮಹೇಶ್ ಜೊತೆ ಅಭಿನಯಿಸುತ್ತಿರುವ 'ಸರಿಲೇರು ನೀಕೆವರು' ಸಿನಿಮಾದ ಮುಹೂರ್ತ ಕೂಡಾ ನೆರವೇರಿದೆ.

Rashmika
ರಶ್ಮಿಕಾ, ವೆಂಕಿ ಕುಡುಮುಲ

ರಶ್ಮಿಕಾ ಹೊಸ ಸಿನಿಮಾ 'ಭೀಷ್ಮ' ಮುಹೂರ್ತ ಕೂಡಾ ನಿನ್ನೆ ನೆರವೇರಿದೆ. ನಿತಿನ್​​ ಈ ಸಿನಿಮಾಗೆ ನಾಯಕನಾಗಿ ನಟಿಸಿದ್ದಾರೆ. ಮುಹೂರ್ತದ ಫೋಟೋಗಳನ್ನು ರಶ್ಮಿಕಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು 'ಸಿನಿಮಾ ಶೂಟಿಂಗ್ ಆರಂಭವಾಗಲು ಕಾತರದಿಂದ ಕಾಯುತ್ತಿದ್ದೇನೆ ' ಎಂದು ಬರೆದುಕೊಂಡಿದ್ದಾರೆ. ನಾಗವಂಶಿ ಈ ಸಿನಿಮಾಗೆ ಬಂಡವಾಳ ಹೂಡಿದ್ದು 'ಚಲೋ' ಖ್ಯಾತಿಯ ವೆಂಕಿ ಕುಡುಮುಲ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ವೆಂಕಿ ಕುಡುಮುಲ ಹಾಗೂ ರಶ್ಮಿಕಾ ಕಾಂಬಿನೇಷನ್​​ನಲ್ಲಿ ಮೂಡಿಬರುತ್ತಿರುವ ಎರಡನೇ ಚಿತ್ರ ಇದಾಗಿದೆ.

Bheeshma
'ಭೀಷ್ಮ'ಚಿತ್ರದ ಮುಹೂರ್ತ

ಜೂನ್ 20 ರಿಂದ ಚಿತ್ರದ ಶೂಟಿಂಗ್ ಆರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಜೀವನಪೂರ್ತಿ ಬ್ರಹ್ಮಚಾರಿ ಆಗಿ ಬದುಕಲು ನಿರ್ಧರಿಸಿದ್ದ ಯುವಕನಿಗೆ ಆತನ ಜೀವನದಲ್ಲಿ ಬರುವ ಹುಡುಗಿ ಹೇಗೆ ಪ್ರಭಾವ ಬೀರುತ್ತಾಳೆ. ನಂತರ ಆತನ ಜೀವನ ಹೇಗೆ ಬದಲಾಗುತ್ತದೆ ಎಂಬುದೇ ಚಿತ್ರಕಥೆ. ಚಿತ್ರಕ್ಕೆ ಮಣಿಶರ್ಮ ಪುತ್ರ ಮಹತಿ ಸಾಗರ್ ಸಂಗೀತ ನೀಡುತ್ತಿದ್ದಾರೆ. ಚಿತ್ರದಲ್ಲಿ ನಟಿಸುತ್ತಿರುವ ಇತರ ನಟ, ನಟಿಯರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.