ಫಿಟ್ನೆಸ್ಗೆ ಹೆಚ್ಚು ಆದ್ಯತೆ ಕೊಡುವ ಸೆಲಬ್ರಿಟಿಗಳಲ್ಲಿ ರಶ್ಮಿಕಾ ಕೂಡಾ ಒಬ್ಬರು. ಇತ್ತೀಚೆಗಷ್ಟೇ ಓಟ್ಸ್ ಪ್ಯಾನ್ ಕೇಕ್ ಮಾಡುತ್ತಿರುವ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದ ರಶ್ಮಿಕಾ ಈಗ ತಾವು ಸಮುದ್ರ ತೀರದಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
'ಇದೇ ಮೊದಲ ಬಾರಿಗೆ ಸಮುದ್ರದ ದಂಡೆ ಬಳಿ ವರ್ಕೌಟ್ ಮಾಡುತ್ತಿದ್ದೇನೆ. ನಾನು ಎಷ್ಟೇ ಒತ್ತಡದಿಂದ ಇದ್ದರೂ, ಎಷ್ಟೇ ಆಯಾಸದಿಂದ ಇದ್ದರೂ ಇಲ್ಲಿ ಬಂದು ವರ್ಕೌಟ್ ಮಾಡಿದರೆ ಎಲ್ಲಾ ಮಾಯವಾಗಿಬಿಡುತ್ತದೆ. ಅಲೆಗಳ ಶಬ್ಧ, ಸಮುದ್ರದಿಂದ ಬರುವ ಸುವಾಸನೆ, ಬೆಚ್ಚಗಿನ ಸೂರ್ಯನ ಕಿರಣಗಳು, ಇಲ್ಲಿನ ಮರಳು ನನಗೆ ಬಹಳ ಇಷ್ಟವಾಗಿದೆ. ಇದೊಂದು ಹೊಸ ಅನುಭವ' ಎಂದು ಸಮುದ್ರದ ದಂಡೆಯಲ್ಲಿ ವರ್ಕೌಟ್ ಮಾಡಿದ ಸಂತೋಷವನ್ನು ಹಂಚಿಕೊಂಡಿದ್ದಾರೆ ರಶ್ಮಿಕಾ.
- " class="align-text-top noRightClick twitterSection" data="
">
ರಶ್ಮಿಕಾ ಕರಿಯರ್ ವಿಚಾರಕ್ಕೆ ಬರುವುದಾದರೆ ಸುಕುಮಾರ್ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ಜೊತೆ 'ಪುಷ್ಪ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ 'ಸುಲ್ತಾನ್' ಚಿತ್ರದಲ್ಲಿ ಕೂಡಾ ನಟಿಸುತ್ತಿದ್ದಾರೆ. ಇದರೊಂದಿಗೆ ಮತ್ತೊಂದು ಹೊಸ ಚಿತ್ರಕ್ಕೆ ರಶ್ಮಿಕಾ ಸಹಿ ಹಾಕಿರುವುದಾಗಿ ತಿಳಿದುಬಂದಿದೆ.