ETV Bharat / sitara

ಮೊದಲ ಚಿತ್ರಕ್ಕೆ ಮುನ್ನವೇ ಇನ್ನೊಂದು ಹಿಂದಿ ಚಿತ್ರ ಒಪ್ಪಿಕೊಂಡ ರಶ್ಮಿಕಾ! - ರಶ್ಮಿಕಾ ಮಂದಣ್ಣ ಅಭಿನಯದ ಹಿಂದಿ ಸಿನಿಮಾ

ಅಮಿತಾಬ್​ ಮತ್ತು ರಶ್ಮಿಕಾ ಅಪ್ಪ-ಮಗಳಾಗಿ ಅಭಿನಯಿಸುತ್ತಿದ್ದು, ನೀನಾ ಗುಪ್ತಾ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರಂತೆ. 2021ರ ಮಾರ್ಚ್‍ನಲ್ಲಿ ಈ ಚಿತ್ರದ ಶೂಟಿಂಗ್​ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ..

rashmika mandanna will act in new bollywood movie deadly
ರಶ್ಮಿಕಾ
author img

By

Published : Dec 28, 2020, 7:36 AM IST

Updated : Dec 28, 2020, 9:48 AM IST

'ಮಿಷನ್ ಮಜ್ನು' ಎಂಬ ಚಿತ್ರದ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಡುತ್ತಿರುವುದಾಗಿ ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೇ ಹೇಳಿಕೊಂಡಿದ್ದರು. ಯಾವಾಗ ಅವರ ಕಡೆಯಿಂದ ಇಂಥದ್ದೊಂದು ಸುದ್ದಿ ಹೊರಬಿತ್ತೋ, ಆಗ ಸಂಭ್ರಮಪಟ್ಟವರು ಒಬ್ಬಿಬ್ಬರಲ್ಲ.

ಈಗಾಗಲೇ ಮೂರು ಭಾಷೆಗಳಲ್ಲಿ ನಟಿಸಿರುವ ರಶ್ಮಿಕಾ, ಹಿಂದಿಯಲ್ಲೂ ನಟಿಸಲಿ, ಅತೀ ಶೀಘ್ರದಲ್ಲೇ ಬಾಲಿವುಡ್‍ಗೆ ಎಂಟ್ರಿ ಕೊಡಲಿ ಎಂದು ಹಾರೈಸಿದವರೆಷ್ಟೋ ಜನ. ಅದಕ್ಕೆ ಸರಿಯಾಗಿ ರಶ್ಮಿಕಾ,`ಮಿಷನ್ ಮಜ್ನು' ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ವಿಷಯ ಕೇಳಿ ಹಲವರು ಖುಷಿಪಟ್ಟರು.

ಈಗ ಇನ್ನೊಂದು ಗುಡ್‍ನ್ಯೂಸ್​​ನ ಸಮಯ. 'ಮಿಷನ್ ಮಜ್ನು'ಚಿತ್ರ ಇನ್ನೂ ಪ್ರಾರಂಭವೇ ಆಗಿಲ್ಲ, ಆಗಲೇ 'ಡೆಡ್ಲಿ' ಎಂಬ ಇನ್ನೊಂದು ಬಾಲಿವುಡ್​ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿರುವ ಸುದ್ದಿ ಬಂದಿದೆ. ವಿಶೇಷವೆಂದರೆ, ಈ ಚಿತ್ರದಲ್ಲಿ ಅಮಿತಾಬ್​​ ಬಚ್ಚನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರೊಟ್ಟಿಗೆ ರಶ್ಮಿಕಾ ಸಹ ನಟಿಸುತ್ತಿದ್ದಾರೆ.

ಅಮಿತಾಬ್​ ಮತ್ತು ರಶ್ಮಿಕಾ ಅಪ್ಪ-ಮಗಳಾಗಿ ಅಭಿನಯಿಸುತ್ತಿದ್ದು, ನೀನಾ ಗುಪ್ತಾ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರಂತೆ. 2021ರ ಮಾರ್ಚ್‍ನಲ್ಲಿ ಈ ಚಿತ್ರದ ಶೂಟಿಂಗ್​ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.

'ಚಿಲ್ಲರ್ ಪಾರ್ಟಿ','ಕ್ವೀನ್', 'ಶಾಂದಾರ್' ಮತ್ತು ಹೃತಿಕ್ ರೋಷನ್ ಅಭಿನಯದ 'ಸೂಪರ್ 30' ಚಿತ್ರಗಳನ್ನು ನಿರ್ದೇಶಿಸಿದ್ದ ವಿಕಾಸ್ ಬಹ್ಲ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ರಿಲಯನ್ಸ್ ಎಂಟರ್​ಟೈನ್​ಮೆಂಟ್​ ಸಂಸ್ಥೆಯು ಈ ಸಿನಿಮಾವನ್ನು ನಿರ್ಮಿಸುತ್ತಿದೆ.

Last Updated : Dec 28, 2020, 9:48 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.