ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಟ್ರೈಲರ್ ಹಾಗೂ ಹಾಡುಗಳಿಂದ ಹವಾ ಸೃಷ್ಟಿಸಿರೋ ಸಿನಿಮಾ ಪುಷ್ಪ. ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರದಲ್ಲಿ ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಸ್ಟೈಲಿಷ್ ಸ್ಟಾರ್ ಜೊತೆ ಸ್ಕ್ರೀನ್ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಪುಷ್ಪ ಸಿನಿಮಾದ ಸಾಮಿ ಸಾಮಿ.. ಹಾಡು ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದೆ. ಈ ಹಾಡಿನಲ್ಲಿ ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಮಂದಣ್ಣ, ಲಂಗ ದಾವಣಿ ತೊಟ್ಟು ಮಸ್ತ್ ಸ್ಟೆಪ್ ಹಾಕಿದ್ದಾರೆ.
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ಹಾಡಿನ ಸಿಗ್ನೇಚರ್ ಸ್ಟೆಪ್ ಸಖತ್ ಟ್ರೆಂಡ್ ಆಗಿದೆ. ಈ ಹಾಡಿಗೆ ಇದೀಗ ರಶ್ಮಿಕಾ ಮಂದಣ್ಣ ಮಾಡ್ರನ್ ಕಾಸ್ಟೂಮ್‌ನಲ್ಲಿ ಸಾಮಿ ಹಾಡಿಗೆ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ.
ಇದರ ಜೊತೆಗೆ ಸಾಕಷ್ಟು ಜನರು ಸಾಮಿ ಸಾಮಿ ಹಾಡಿಗೆ ರೀಲ್ ಮಾಡುವುದನ್ನು ನಾನು ನೋಡಿದ್ದೇನೆ. ಈಗ ನಾನು ಕೂಡ ಸಾಮಿ ಹಾಡಿಗೆ ಬೊಂಬಾಟ್ ಸ್ಟೆಪ್ ಹಾಕುವ ಮೂಲಕ ರೀಲ್ ಗ್ರೂಫ್‌ಗೆ ಸೇರಿಕೊಳ್ಳುತ್ತೇನೆ ಅಂದಿದ್ದಾರೆ.
ಹೀಗಾಗಿ, ನಾನು ಕೂಡ ಒಂದು ರೀಲ್ ಮಾಡಿದ್ದೇನೆ. ನಿಮ್ಮಲ್ಲಿ ಇನ್ನೂ ಅನೇಕರು ಈ ಹಾಡಿಗೆ ರೀಲ್ ಮಾಡುವ ಮೂಲಕ, ನಮ್ಮ ಗ್ರೂಫ್‌ಗೆ ಸೇರಿಕೊಳ್ಳಿ ಅಂತಾ ಮಲೆನಾಡಿ ಬೆಡಗಿ ಪಡ್ಡೆ ಹುಡುಗರ ನಿದ್ದೆ ಗೆಡಿಸುವ ಡ್ಯಾನ್ಸ್ ಮಾಡಿದ್ದಾರೆ.
ಇನ್ನು ಸಾಮಿ ಸಾಮಿ ಹಾಡನ್ನು ರಾಜಲಕ್ಷ್ಮಿ ಸೆಂಥಿಗಣೇಶ್ ಹಾಡಿದ್ದು, ವಿವೇಕ್ ಅವರ ಸಾಹಿತ್ಯ ಮತ್ತು ದೇವಿ ಶ್ರೀ ಪ್ರಸಾದ್ ಸಂಗೀತವಿದೆ. ಈ ಸಿನಿಮಾವು ಆಂಧ್ರಪ್ರದೇಶದ ರಾಯಲಸೀಮಾ ಪ್ರದೇಶದ ಶೇಷಚಲಂ ಬೆಟ್ಟಗಳಲ್ಲಿ ನಡೆಯುತ್ತಿರುವ ಕೆಂಪು ಮರಳು ಕಳ್ಳಸಾಗಣೆ ಕಥೆಯ ಹಂದರ ಹೊಂದಿದೆ ಎನ್ನಲಾಗಿದೆ.
ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿರೋ ಈ ಚಿತ್ರವನ್ನ ನಿರ್ದೇಶಕ ಸುಕುಮಾರ್ ನಿರ್ದೇಶಿಸಿದ್ದಾರೆ. ಮುತ್ತಂಶೆಟ್ಟಿ ಮೀಡಿಯಾ ಸಹಯೋಗದಲ್ಲಿ ಮೈತ್ರಿ ಮೂವಿ ಮೇಕರ್ಸ್ ಸಿನಿಮಾ ನಿರ್ಮಾಣ ಮಾಡಿದೆ. ಡಿಸೆಂಬರ್ 17ರಂದು ತೆಲುಗು, ಮಲಯಾಳಂ, ತಮಿಳು, ಕನ್ನಡ ಮತ್ತು ಹಿಂದಿ ಸೇರಿ ಐದು ಭಾಷೆಗಳಲ್ಲಿ ಪುಷ್ಪ ಸಿನಿಮಾ ಬಿಡುಗಡೆಯಾಗಲಿದೆ.