ಹೈದರಾಬಾದ್: ಮಿಷನ್ ಮಜ್ನು ಸಿನಿಮಾದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಲಿರುವ ನಟಿ ರಶ್ಮಿಕಾ ಮಂದಣ್ಣ ಯುಎಸ್ಎಗೆ ತೆರಳಿದ್ದಾರೆ. ಅಲ್ಲಿ ನಟ ವಿಜಯ್ ದೇವರಕೊಂಡ ಅವರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗ್ತಿದೆ.
ಈ ಕುರಿತಂತೆ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪಾಸ್‌ಪೋರ್ಟ್ ಹಾಗೂ ವಿಮಾನದಲ್ಲಿ ಕುಳಿತುಕೊಂಡಿರುವ ಸೆಲ್ಫಿ ಫೋಟೋವನ್ನು ಹಂಚಿಕೊಂಡಿದ್ದು, 'ಈ ಬಾರಿ ನಿಮ್ಮಿಂದ ಸಾಕಷ್ಟು ದೂರವಿದ್ದೇನೆ. ಆದರೆ ಶೀಘ್ರದಲ್ಲೇ ಹಿಂತಿರುಗುತ್ತೇನೆ' ಎಂದು ಬರೆದಿದ್ದಾರೆ. ಆದರೆ ಯಾವ ದೇಶಕ್ಕೆ ತೆರಳುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಿಲ್ಲ.
ಸದ್ಯ ಯುಎಸ್ಎದಲ್ಲಿ ತೆಲುಗು ನಟ ವಿಜಯ್ ದೇವರಕೊಂಡ ಮುಂಬರುವ ಲೈಗರ್ ಸಿನಿಮಾದ ಚಿತ್ರೀಕರಣ ನಡೆಸುತ್ತಿದ್ದು, ರಶ್ಮಿಕಾ ಅವರನ್ನು ಭೇಟಿ ಮಾಡಲಿದ್ದಾರೆ. ರಶ್ಮಿಕಾ, ವಿಜಯ್ ಅವರನ್ನು ಭೇಟಿ ಮಾಡುವುದು ಹೊಸ ವಿಷಯವೇನಲ್ಲ. ಈ ಹಿಂದೆಯೂ ಗೋವಾದಲ್ಲಿ ಭೇಟಿ ಮಾಡಿದ್ದರು. ವಿಜಯ್ ಹಾಗೂ ರಶ್ಮಿಕಾ ತೆಲುಗಿನ ಗೀತಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಸಿನಿಮಾದಲ್ಲಿ ನಟಿಸಿದ್ದರು.
ಸದ್ಯ ನಟಿ ರಶ್ಮಿಕಾ ಮಂದಣ್ಣ ಮಿಷನ್ ಮಜ್ನು ಚಿತ್ರದ ಜೊತೆಗೆ ನಟ ಅಮಿತಾಬ್ ಬಚ್ಚನ್ ಅಭಿನಯದ ಗುಡ್ ಬೈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ಅಲ್ಲು ಅರ್ಜುನ್ ಅಭಿನಯದ ತೆಲುಗು ಚಿತ್ರ ಪುಷ್ಪದಲ್ಲಿ ರಶ್ಮಿಕಾ ನಟಿಸಿದ್ದಾರೆ.