ETV Bharat / sitara

ಬಹು ನಿರೀಕ್ಷಿತ ಪುಷ್ಪ ಚಿತ್ರದ ನಟಿ ರಶ್ಮಿಕಾ ಮಂದಣ್ಣ ಫಸ್ಟ್ ಲುಕ್​ ರಿವೀಲ್​ - ರಶ್ಮಿಕಾ ಮಂದಣ್ಣ ಫಸ್ಟ್​ ಲುಕ್​

ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಪುಷ್ಪ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಕಿರಿಕ್​ ಬೆಡಗಿ ರಶ್ಮಿಕಾ ಮಂದಣ್ಣ ಅವರ ಫಸ್ಟ್​ ಲುಕ್​ ಅನ್ನು ಚಿತ್ರ ತಂಡ ಬಿಡುಗಡೆ ಮಾಡಿದೆ. ಹಾಗಾಗಿ ಸಿನಿಮಾ ದಿನದಿಂದ ದಿನಕ್ಕೆ ತನ್ನ ಕುತೂಹಲ ಹೆಚ್ಚಿಸಿಕೊಳ್ಳುತ್ತಿದೆ.

Rashmika Mandanna first look from Pushpa will reveal

author img

By

Published : Sep 29, 2021, 1:28 PM IST

Updated : Sep 29, 2021, 2:24 PM IST

ಸುಕುಮಾರ್​ ನಿರ್ದೇಶನ ಹೇಳಿರುವ ಹಾಗೂ ಟಾಲಿವುಡ್​ನ ಸ್ಟೈಲಿಷ್​​ ಸ್ಟಾರ್​ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ ಪುಷ್ಪ ಚಿತ್ರ ದಿನದಿಂದ ದಿನಕ್ಕೆ ತನ್ನ ಕ್ರೇಜ್​ ಅನ್ನು ಹೆಚ್ಚಿಸಿಕೊಳ್ಳುತ್ತಿದೆ. ಈ ಹಿಂದೆ ನಟ ಅಲ್ಲು ಅರ್ಜುನ್ ಅವರ ಫಸ್ಟ್​ ಲುಕ್​ ಬಿಡುಗಡೆ ಮಾಡಿ ಅಭಿಮಾನಿಗಳ ಬಳಗ ಹೆಚ್ಚಿಸಿಕೊಂಡಿದ್ದ ಚಿತ್ರ ತಂಡ ಈಗ ನಾಯಕಿಯ ಫಸ್ಟ್​ ಲುಕ್​ ರಿವೀಲ್​​ ಮಾಡಿ ಮತ್ತಷ್ಟು ಗಮನ ಸೆಳೆದಿದೆ.

ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣ ಅವರ ಫಸ್ಟ್​ ಲುಕ್​ ಇದಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. ರಶ್ಮಿಕಾ ಚಿತ್ರದಲ್ಲಿ ಶ್ರೀವಲ್ಲಿ ಪಾತ್ರಕ್ಕೆ ಬಣ್ಣ ಹಚ್ಚಿದ್ದು ಹಾಟ್ ಲುಕ್​​ನಲ್ಲಿ ಕಾಣಿಸಿಕೊಂಡಿರುವ ಅವರ ಪೋಸ್ಟರ್​​ ಭಾರಿ ಸದ್ದು ಮಾಡುತ್ತಿದೆ.

ಹಳ್ಳಿಯ ಸೊಗಡಿನಂತೆ ಕನ್ನಡಿಯ ಮುಂದೆ ಕುಳಿತು ಸಿಂಗಾರ ಮಾಡಿಕೊಳ್ಳುತ್ತಿರುವ ಪೋಸ್ಟರ್ ಇದಾಗಿದ್ದು ಅಭಿಮಾನಿಗಳಿಗೆ ಸಿನಿಮಾ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ರಶ್ಮಿಕಾ ಮಂದಣ್ಣ ತಮ್ಮ ಇನ್​​ಸ್ಟಾಗ್ರಾಂ​ ಖಾತೆಯಲ್ಲಿ ಪಾತ್ರದ ಮೊದಲ ಲುಕ್ ಹಂಚಿಕೊಂಡಿದ್ದಾರೆ. ಇನ್ನು ಚಿತ್ರದಲ್ಲಿ ಮಲಯಾಳಂ ನಟ ಫಹಾದ್ ಫಾಸಿಲ್, ಕನ್ನಡದ ಡಾಲಿ ಧನಂಜಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Last Updated : Sep 29, 2021, 2:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.