ETV Bharat / sitara

ನಿಜ ಜೀವನದಲ್ಲೂ ಜೋಡಿಯಾಗಲಿದ್ದಾರಾ ಗೀತ-ಗೋವಿಂದಂ..? - ಸ್ಯಾಂಡಲ್​ವುಡ್ ನಟಿಯ ಮದುವೆ ಸುದ್ದಿಗಳು

ಕೋಟ್ಯಂತರ ಅಭಿಮಾನಿಗಳ ಹೃದಯ ಕದ್ದ ಸೌತ್ ಸುಂದರಿ, ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಕೆಲವು ವೈಯಕ್ತಿಕ ಕಾರಣಗಳಿಂದ ಮತ್ತೊಮ್ಮೆ ಸುದ್ದಿಯ ಮುನ್ನೆಲೆಗೆ ಬಂದಿದ್ದಾರೆ.

Rashmika Mandanna and Vijay Devarakonda will marry this year?
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ
author img

By

Published : Feb 21, 2022, 5:46 PM IST

ಹೈದರಾಬಾದ್: ನ್ಯಾಷನಲ್​ ಕ್ರಷ್​ ರಶ್ಮಿಕಾ ಮಂದಣ್ಣ ಹೊಸ ಚಿತ್ರಗಳನ್ನು ಅನೌನ್ಸ್​ ಮಾಡುವುದರಿಂದ ಹಿಡಿದು ತನ್ನ ಸಂಭಾವನೆ ಹೆಚ್ಚಿಸಿಕೊಂಡಿರುವ ಸುದ್ದಿಯವರೆಗೆ ಇತ್ತೀಚೆಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಇದೀಗ ತಮ್ಮ ವೈಯಕ್ತಿಕ ಕಾರಣಗಳಿಂದ ಅವರು ಸುದ್ದಿಯಾಗಿದ್ದಾರೆ.

Rashmika Mandanna and Vijay Devarakonda will marry this year?
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ

'ಪುಷ್ಪಾ' ಚಿತ್ರದ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ರಶ್ಮಿಕಾ ಇತ್ತೀಚೆಗೆ ಮಾಧ್ಯಮದ ಮುಂದೆ ತಮ್ಮ ಕನಸಿನ ಕುವರ ಹೇಗೆ ಇದ್ದರೆ ಚೆಂದ ಎಂದು ಹೇಳಿ ಅಭಿಮಾನಿಗಳಿಗೆ ಶಾಕ್​ ನೀಡಿದ್ದರು. ಈ ಹೇಳಿಕೆಯ ಬೆನ್ನಲ್ಲೇ ಟಾಲಿವುಡ್​​ನಲ್ಲಿ ರಶ್ಮಿಕಾ ಮದುವೆ ವಿಚಾರ ಮುನ್ನೆಲೆಗೆ ಬಂದಿದೆ. ಇದೇ ವರ್ಷದ ಕೊನೆಯ ತಿಂಗಳಲ್ಲಿ ಅವರು ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ದಟ್ಟವಾಗಿದೆ.

ಜೊತೆ ಜೊತೆಯಾಗಿ ನಟಿಸಿದ್ದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅಭಿಮಾನಿಗಳ ಪಾಲಿಗೆ ಸೂಪರ್​ ಜೋಡಿಗಾಗಿ ಕಂಡಿದ್ದರು. ಇದೇ ಜೋಡಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಗಾಳಿ ಸುದ್ದಿಯೊಂದು ಹರಿದಾಡುತ್ತಿದ್ದು, ಅದಕ್ಕೀಗ ರೆಕ್ಕೆಪುಕ್ಕ ಸಹ ಬಂದಿದೆ. ಆಗಾಗ್ಗೆ ವಿಜಯ್​ ಅವರೊಂದಿಗೆ ಓಡಾಡುತ್ತಿದ್ದ ರಶ್ಮಿಕಾ ಡೇಟಿಂಗ್​ ಮಾಡುತ್ತಿದ್ದಾರೆಂದು ಹೇಳಲಾಗಿತ್ತು.

ಈಗ ಇವರಿಬ್ಬರ ಮದುವೆ ಪ್ರಸ್ತಾಪ ಕೇಳಿ ಬರುತ್ತಿದ್ದು ಇದೇ ವರ್ಷ ಹಸೆಮಣೆ ಏರಲಿದ್ದಾರೆ ಎಂದೂ ಹೇಳಲಾಗುತ್ತಿದೆ. ತೆರೆ ಮೇಲೆ ಸಖತ್​ ಆಗಿ ಕಾಣಿಸಿಕೊಂಡಿದ್ದ ಜೋಡಿ ನಿಜ ಜೀವನದಲ್ಲೂ ಜೋಡಿಯಾಗಲಿದ್ದಾರೆ ಎಂಬ ಗಾಳಿ ಸುದ್ದಿ ಹಬ್ಬುತ್ತಿದ್ದಂತೆ ಅಭಿಮಾನಿಗಳು ತರಹೇವಾರಿ ಕಾಮೆಂಟ್​ ಮಾಡುತ್ತಿದ್ದಾರೆ.

ಆದರೆ, ಈ ಬಗ್ಗೆ ವಿಜಯ್ ದೇವರಕೊಂಡ ಆಗಲಿ ಅಥವಾ ರಶ್ಮಿಕಾ ಆಗಲಿ ತಾವು ಡೇಟಿಂಗ್ ಮಾಡುತ್ತಿರುವ​ ಮತ್ತು ಕೇಳಿ ಬರುತ್ತಿರುವ ಮದುವೆ ವಿಷ್ಯದ ಬಗ್ಗೆ ಎಲ್ಲಿಯೂ ಅಧಿಕೃವಾಗಿ ಹೇಳಿಕೊಂಡಿಲ್ಲ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಶ್ಮಿಕಾ ಪ್ರೀತಿ ಮತ್ತು ಮದುವೆ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು. ಯೋಗ್ಯ ವ್ಯಕ್ತಿಯನ್ನು ಮದುವೆಯಾದರೆ ಉತ್ತಮ ಎಂದು ಹೇಳಿ ಶಾಕ್​ ನೀಡಿದ್ದರು.

ಅಲ್ಲದೇ ಪ್ರೀತಿ ಒಬ್ಬರಿಂದ ಮಾತ್ರ ಮೂಡುವುದಲ್ಲ, ಎರಡೂ ಕಡೆಯಿಂದ ಬಂದಾಗ ಮಾತ್ರ ಪ್ರೀತಿ ಯಶಸ್ವಿಯಾಗುತ್ತದೆ. ಮದುವೆಯಾಗಲು ನಾನಿನ್ನೂ ಚಿಕ್ಕ ಹುಡುಗಿ, ಆ ಬಗ್ಗೆ ನಾನು ಯೋಚನೆ ಸಹ ಮಾಡಿಲ್ಲ ಎಂದು ಹೇಳುವ ಮೂಲಕ ಕನ್ನಡದ ಕಾವೇರಿ ರಶ್ಮಿಕಾ ಮಂದಣ್ಣ ಗುಟ್ಟನ್ನು ಗುಟ್ಟಾಗಿಯೇ ಇಡುವ ಪ್ರಯತ್ನ ಮಾಡಿದ್ದರು.

ರಕ್ಷಿತ್​ ಶೆಟ್ಟಿ ನಟನೆಯ ಕಿರಿಕ್​ ಪಾರ್ಟಿ ಮೂಲಕ ಸ್ಯಾಂಡಲ್​ವುಡ್​ನಲ್ಲಿ ನಾಯಕಿಯಾಗಿ ಮಿಂಚು ಹರಿಸಿದವರು ರಶ್ಮಿಕಾ. ಈ ಚಿತ್ರದ ಗೆಲುವಿನ ಬಳಿಕ ನಾಯಕನಾಗಿ ನಟಿಸಿದ್ದ ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಸಹ ಮಾಡಿಕೊಂಡಿದ್ದರು. ಕೆಲವು ಕಾರಣಗಳಿಂದ ಆ ಸಂಬಂಧ ಮುರಿದುಬಿತ್ತು.

ಇದನ್ನೂ ಓದಿ: ಮದುವೆಯಾಗಲು ನಾನಿನ್ನೂ ಚಿಕ್ಕ ಹುಡುಗಿ ಎಂದ ರಶ್ಮಿಕಾ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.