ETV Bharat / sitara

‘ಅಪ್ನಾ ಟೈಂ ಆಯೇಗಾ’ ಬಾಲಕನ ರ‍್ಯಾಂಪ್​ ಸಾಂಗ್​ ಶೇರ್ ಮಾಡಿದ ರಣವೀರ್ ಸಿಂಗ್ - ಅರುಣಾಚಲಪ್ರದೇಶದ ಬಾಲಕ

ರಣವೀರ್ ಸಿಂಗ್ ಅಭಿನಯದ ಗಲ್ಲಿ ಬಾಯ್​ ಚಿತ್ರದ ಪ್ರಸಿದ್ಧ ರ‍್ಯಾಂಪ್​​​ ಸಾಂಗ್​​ ಅಪ್ನಾ ಟೈಂ ಆಯೇಗಾ ವನ್ನು ಬಾಲಕನೊಬ್ಬ ವಿಭಿನ್ನ ಶೈಲಿಯಲ್ಲಿ ಹಾಡಿದ್ದು, ಎಲ್ಲರ ಮನಗೆದ್ದಿದ್ದಾನೆ. ಈ ವಿಡಿಯೋವನ್ನು ರಣವೀರ್​ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮಗುವಿನ ಶೈಲಿ ಮತ್ತು ಉತ್ಸಾಹವನ್ನು ಶ್ಲಾಘಿಸಿದ್ದಾರೆ.

ರಣವೀರ್ ಸಿಂಗ್
ರಣವೀರ್ ಸಿಂಗ್
author img

By

Published : Oct 7, 2021, 10:43 PM IST

ಹೈದರಾಬಾದ್: ಬಾಲಿವುಡ್ ನಟ ರಣವೀರ್ ಸಿಂಗ್​ ಅಭಿನಯಕ್ಕೆ ಮನ ಸೋಲದವರಿಲ್ಲ. ದಿನದಿಂದ ದಿನಕ್ಕೆ ಅವರ ನಟನೆಗೆ, ವ್ಯಕ್ತಿತ್ವಕ್ಕೆ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ, ಇದೀಗ ಅವರೇ ಪುಟ್ಟ ಮಗುವೊಂದರ ಅಭಿಮಾನಿಯಾಗಿದ್ದಾರೆ.

ಹೌದು, ರಣವೀರ್ ಸಿಂಗ್ ಅಭಿನಯದ ಗಲ್ಲಿ ಬಾಯ್​ ಚಿತ್ರದ ಪ್ರಸಿದ್ಧ ರ‍್ಯಾಂಪ್​​​ ಸಾಂಗ್​​ ಅಪ್ನಾ ಟೈಂ ಆಯೇಗಾ ವನ್ನು ಬಾಲಕನೊಬ್ಬ ವಿಭಿನ್ನ ಶೈಲಿಯಲ್ಲಿ ಹಾಡಿದ್ದು, ಎಲ್ಲರ ಮನಗೆದ್ದಿದ್ದಾನೆ. ಈ ವಿಡಿಯೋವನ್ನು ರಣವೀರ್​ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮಗುವಿನ ಶೈಲಿ ಮತ್ತು ಉತ್ಸಾಹವನ್ನು ಶ್ಲಾಘಿಸಿದ್ದಾರೆ.

ರಣವೀರ್ ಸಿಂಗ್ ತನ್ನ ಇನ್​ಸ್ಟಾದಲ್ಲಿ ಅರುಣಾಚಲ ಪ್ರದೇಶದ ಮಗುವಿನ ವಿಡಿಯೋ ಶೇರ್ ಮಾಡಿದ್ದಾರೆ. ಈ ಮಗು ರಣವೀರ್ ಸಿಂಗ್ ಅವರ ಅಪ್ನಾ ಟೈಂ ಆಯೇಗಾ ಹಾಡನ್ನು ತನ್ನದೇ ಶೈಲಿಯಲ್ಲಿ ಹಾಡಿದ್ದಾನೆ. ಇದು ರ‍್ಯಾಂಪ್​ ಶೈಲಿಯಂತಿದೆ.

ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ರಣವೀರ್ ಸಿಂಗ್​ ಈ ಪುಟ್ಟ ಮೊನ್ಪಾ ಮಗು, ನನ್ನ ಸ್ಫೂರ್ತಿ.. ನನ್ನ ಸಮಯ ಬರುತ್ತದೆ ಎಂದು ಶೀರ್ಷಿಕೆ ಬರೆದಿದ್ದಾರೆ.

ಈ ವಿಡಿಯೋವನ್ನು ಟ್ವಿಟರ್​​ನಲ್ಲಿ ಯುವ ಅರುಣಾಚಲ ಹೆಸರಿನ ಖಾತೆಯಿಂದ ಹಂಚಿಕೊಳ್ಳಲಾಗಿದೆ. ವಿಡಿಯೋ ಹಂಚಿಕೊಳ್ಳುವಾಗ, 'ಟ್ಯಾಲೆಂಟ್‌ಗೆ ವಯಸ್ಸಿನ ಮಿತಿಯಿಲ್ಲ, ಅದನ್ನು ಎಲ್ಲಿ ಬೇಕಾದರೂ ಕಾಣಬಹುದು' ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ರಣವೀರ್ ಸಿಂಗ್​ ಮತ್ತು ಆಲಿಯಾ ಭಟ್ ಅಭಿನಯದ ಸಿನಿಮಾ ಗಲ್ಲಿ ಬಾಯ್ 2019 ರಲ್ಲಿ ರಿಲೀಸ್ ಆಯ್ತು. ಚಿತ್ರದಲ್ಲಿ ರಣವೀರ್​ ಸಿಂಗ್​ ಸ್ಲಂ ಪ್ರದೇಶದ ಯುವಕನ ಪಾತ್ರ ನಿರ್ವಹಿಸಿ ಜನರ ಮನಸ್ಸು ಗೆದ್ದಿದ್ದರು.

ಇದನ್ನೂ ಓದಿ: ವಿಶ್ವದ ಅತಿದೊಡ್ಡ ಚಲನಚಿತ್ರ ನಗರಿ 'ರಾಮೋಜಿ ಫಿಲಂ​ ಸಿಟಿ' ನಾಳೆಯಿಂದ ಪುನಾರಂಭ

ರಣವೀರ್ ಸಿಂಗ್​ 83 ಎಂಬ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಈ ಚಿತ್ರವು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್​ ಜೀವನ ಚರಿತ್ರೆಯಾಧಾರಿತವಾಗಿದೆ. ಇದರಲ್ಲಿ ನಾಯಕಿಯಾಗಿ ದೀಪಿಕಾ ಪಡುಕೋಣೆ ಅಭಿನಯಿಸಲಿದ್ದಾರೆ. ಇದಲ್ಲದೇ, ರಣವೀರ್ 'ಸರ್ಕಸ್' ಮತ್ತು 'ಜಯೇಶ್ಭಾಯ್ ಜೋರ್ದಾರ್' ಚಿತ್ರಗಳಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.