ಬಾಲಿವುಡ್ ನಟ ರಣವೀರ್ ಸಿನಿ ಜರ್ನಿಯಲ್ಲಿ ಹೆಸರು ಗಳಿಸಿರುವ ಸಿನಿಮಾಗಳ ಪೈಕಿ ಜೋಯಾ ಅಕ್ತರ್ ನಿರ್ದೇಶನದ 'ಗಲ್ಲಿ ಬಾಯ್' ಕೂಡ ಒಂದು. ಈ ಸಿನಿಮಾದಲ್ಲಿ ರಣವೀರ್ ರ‍್ಯಾಪ್ ಹಾಡುಗಾರ ಮುರಾದ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
- View this post on Instagram
Uth jaa apni Raakh se, tu Udd jaa ab Talaash mein 🦅#mondaymotivation #gullyboy
">
ಈ ಚಿತ್ರದಲ್ಲಿ ಮುರಾದ್ ಪಾತ್ರ ನನಗೆ ಸರಿ ಹೊಂದುವ ಪಾತ್ರ ಎಂದು ರಣವೀರ್ ಹೇಳಿಕೊಂಡಿದ್ದಾರೆ. ಈ ಬಗ್ಗೆ ಮನದಾಳ ಬಿಚ್ಚಿಟ್ಟಿರುವ ರಣವೀರ್, ನನ್ನ ಕರ್ಮ ಭೂಮಿಗೆ ಗೌರವ ಸಲ್ಲಿಸಲು ಗಲ್ಲಿ ಬಾಯ್ ಒಂದೊಳ್ಳೆ ಅವಕಾಶ ಮಾಡಿಕೊಟ್ಟಿತು ಎಂದಿದ್ದಾರೆ.
- " class="align-text-top noRightClick twitterSection" data="
">
ನನಗೆ ನನ್ನೂರು ಮುಂಬೈ ಅಂದ್ರೆ ತುಂಬಾ ಇಷ್ಟ. ಇದಕ್ಕೆ ಕಾರಣ ನಾನು ಹುಟ್ಟಿರುವ ಊರು ಇದು. ಈ ನಗರದಲ್ಲಿ ಜೀವಿಸುವುದಕ್ಕೆ ನನಗೆ ಹೆಮ್ಮೆ ಅನಿಸುತ್ತದೆ ಎಂದು ರಣವೀರ್ ಹೇಳಿದ್ದಾರೆ. ಈ ಭೂಮಿಗೆ ಗೌರವ ಸಲ್ಲಿಸಲು ಗಲ್ಲಿ ಬಾಯ್ ಸಿನಿಮಾದಲ್ಲಿ ರ‍್ಯಾಪ್ ಸಂಗೀತಗಾರ ಮುರಾದ್ ಮಾತ್ರ ನನಗೆ ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದ್ದಾರೆ.
ಗಲ್ಲಿ ಬಾಯ್ ಸಿನಿಮಾ ಮುಂಬೈನ ರ‍್ಯಾಪ್ ಸಂಗೀತಗಾರ ನವೇದ್ ಶೈಕ್ ಜೀವನದ ಮೇಲೆ ರಚಿತವಾಗಿರುವ ಕಥೆ.