ಬಿಗ್‌ಬಾಸ್ ಸೀಸನ್ 7 ಇದೀಗ ಫಿನಾಲೆ ಹಂತಕ್ಕೆ ಬಂದಿದೆ. ವಾಸುಕಿ ವೈಭವ್ ಈಗಾಗಲೇ ಫಿನಾಲೆಗೆ ಟಿಕೆಟ್ ಪಡೆದುಕೊಂಡಿದ್ದಾರೆ. ಇಂದು ಬಿಗ್‌ಬಾಸ್ ಮನೆಗೆ ಅತಿಥಿಯೊಬ್ಬರ ಆಗಮನವಾಗಿದೆ. ಮನೆಗೆ ಬಂದಿರುವ ಅತಿಥಿ ಸ್ಪರ್ಧಿಗಳಿಗೆ ಕನ್ನಡದ ಪಾಠ ಮಾಡುತ್ತಿದ್ದಾರೆ.
![ranjani raghavan entry to big boss house](https://etvbharatimages.akamaized.net/etvbharat/prod-images/kn-bng-03-bb7-kannadati-photo-ka10018_24012020151416_2401f_1579859056_907.jpg)
ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿರುವ ನೂತನ ಧಾರಾವಾಹಿ 'ಕನ್ನಡತಿ' ಪ್ರಮೊಷನ್ಗಾಗಿ ನಟಿ ರಜನಿ ರಾಘವನ್ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟು ಸ್ಪರ್ಧಿಗಳಿಗೆ ಕನ್ನಡ ಪಾಠ ಮಾಡಿದ್ದಾರೆ. ಧಾರಾವಾಹಿಯಲ್ಲಿ ಕನ್ನಡ ಭಾಷೆಯ ಟೀಚರ್ ಪಾತ್ರ ಮಾಡುತ್ತಿರುವ ರಜನಿ ಅಲಿಯಾಸ್ ಭುವನೇಶ್ವರಿ ಮನೆಯ ಸ್ಪರ್ಧಿಗಳೊಂದಿಗೆ ಸಮಯ ಕಳೆದಿದ್ದಾರೆ.
![ranjani raghavan entry to big boss house](https://etvbharatimages.akamaized.net/etvbharat/prod-images/kn-bng-03-bb7-kannadati-photo-ka10018_24012020151416_2401f_1579859056_500.jpg)
ಈ ವೇಳೆ ರಾಜ್ಯದ ಜಿಲ್ಲೆಗಳ ಬಗ್ಗೆ, ಒತ್ತಕ್ಷರ ಹಾಗೂ ಉಚ್ಛಾರಣೆ ಬಗ್ಗೆ ಪಾಠ ಮಾಡಿದ್ದಾರೆ. ಕುರಿ ಪ್ರತಾಪ್ ಹಾಗೂ ಇತರ ಸದಸ್ಯರ ಮಾತು ನಗು ತರಿಸಲಿದೆ. ಈ ಎಪಿಸೋಡ್ ಇಂದು ರಾತ್ರಿ ಪ್ರಸಾರವಾಗಲಿದೆ.
- " class="align-text-top noRightClick twitterSection" data="
">