ಬಾಲಿವುಡ್ ನಟ ರಣದೀಪ್ ಹೂಡ ಮೊಟ್ಟ ಮೊದಲ ಬಾರಿಗೆ ಹಾಲಿವುಡ್ ಆಕ್ಷನ್ ಸಿನಿಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಸದ್ಯ ಹಾಲಿವುಡ್ನ ನೆಟ್ಫ್ಲಿಕ್ಸ್ ಸಂಸ್ಥೆಯು ಎಕ್ಸ್ಟ್ರಾಕ್ಷನ್ ಎಂಬ ಸಿನಿಮಾ ಮಾಡುತ್ತಿದ್ದು ಇದರಲ್ಲಿ ರಣದೀಪ್ ಕೂಡ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಕ್ರಿಸ್ ಹೆಮ್ಸ್ವರ್ತ್ ಮತ್ತು ಡೆವಿಡ್ ಕೂಡ ಕಾಣಿಸಿಕೊಳ್ಳಲಿದ್ದಾರೆ.
ಹಾಲಿವುಡ್ನಲ್ಲಿ ಸಿಕ್ಕಿರುವ ಅವಕಾಶದ ಬಗ್ಗೆ ತಮ್ಮ ಅನುಭವವನ್ನು ಹೇಳಿರುವ ರಣದೀಪ್, ಈ ಅವಕಾಶ ನನಗೆ ಸಿಕ್ಕಿರುವುದು ಹೆಮ್ಮೆ ಅನಿಸುತ್ತಿದೆ. ಈವರೆಗೆ ನಾನು ಹಲವು ಸಿನಿಮಾಗಳನ್ನು ಮಾಡಿದ್ದೇನೆ. ಆದ್ರೆ ಇಂತ ಆಕ್ಷನ್ ಸಿನಿಮಾಗಳನ್ನು, ಅದ್ರಲ್ಲೂ ಕೈ ಕೈ ಮಿಲಾಯಿಸಿ ಆಕ್ಷನ್ ಸೀನ್ ಮಾಡಿರುವ ಸಿನಿಮಾಗಳಲ್ಲಿ ನಟಿಸಿಲ್ಲ ಎಂದಿದ್ದಾರೆ.
ಇನ್ನು ಹಾಲಿವುಡ್ ಆಕ್ಷನ್ ಚಿತ್ರಗಳನ್ನು ಮಾಡಬೇಕಾದ್ರೆ ಅವರು ತುಂಬಾ ಮುಂಜಾಗ್ರತೆ ವಹಿಸಿ ಸಿನಿಮಾಗಳನ್ನು ಚಿತ್ರೀಕರಣ ಮಾಡುತ್ತಾರೆ. ಆದ್ದರಿಂದ ಸಿನಿಮಾದಲ್ಲಿ ನಟಿಸಲು ಒಂದೊಳ್ಳೆ ಅನುಭವವಾಗುತ್ತದೆ ಎಂದು ಹೇಳಿದ್ದಾರೆ.
ಎಕ್ಸ್ಟ್ರಾಕ್ಷನ್ ಸಿನಿಮಾದಲ್ಲಿ ಭಾರತೀಯರಾದ ಪಂಕಜ್ ತ್ರಿಪಾಠಿ, ಪ್ರಿಯಂಶು ಪೈಲ್ಯುಲ್ಲಿ, ರುದ್ರೇಶ್ ಕೂಡ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಜೋಯ್ ರುಸೋ ಚಿತ್ರಕಥೆ ಬರೆದಿದ್ದು, ರುಸೋ ಸಹೋದರರು ಬಂಡವಾಳ ಹಾಕಿದ್ದಾರೆ.