ಬಾಲಿವುಡ್ ನಟಿ ಆಲಿಯಾ ಭಟ್ ಅಭಿನಯದ 'ಗಂಗೂಬಾಯಿ ಕಥಿಯಾವಾಡಿ' ಚಿತ್ರದ ಟ್ರೈಲರ್ ಶುಕ್ರವಾರ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದಲ್ಲಿ ಆಲಿಯಾ ಮುಂಬೈನ ರೆಡ್ ಲೈಟ್ ಏರಿಯಾದ ಕಾಮಟಿಪುರದ ಪವರ್‌ಫುಲ್ ಮಹಿಳೆ ಗಂಗೂಬಾಯಿ ಪಾತ್ರದಲ್ಲಿ ನಟಿಸಿದ್ದಾರೆ.
ಈ ಸಿನಿಮಾವು ನೈಜ ಕಥೆ ಆಧಾರಿತವಾಗಿದ್ದು, ಚಿತ್ರದಲ್ಲಿ ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಫೆಬ್ರವರಿ 25 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿದೆ.
ಇನ್ನು 'ಗಂಗೂಬಾಯಿ ಕಥಿಯಾವಾಡಿ' ಸಿನಿಮಾದ ಟ್ರೈಲರ್ ಕುರಿತು ನಟ ರಣಬೀರ್ ಕಪೂರ್ ಪ್ರತಿಕ್ರಿಯೆ ನೀಡಿದ್ದು, ಸಿನಿಮಾದಲ್ಲಿ ಆಲಿಯಾ ಪೋಸ್ ನೀಡಿದಂತೆ ಹಿಂದಕ್ಕೆ ತಿರುಗಿ ಕೈಎತ್ತಿ ನಮಸ್ಕಾರ ಮಾಡಿದ್ದಾರೆ. ಈ ಕುರಿತಾದ ವಿಡಿಯೋ ಇಲ್ಲಿದೆ ನೋಡಿ.