ETV Bharat / sitara

ನಿಶ್ಚಿತಾರ್ಥ ಮಾಡಿಕೊಂಡ ರಾಣಾ ದಗ್ಗುಬಾಟಿ - ಮಿಹಿಕಾ ಜೋಡಿ - ರಾಣಾ ದಗ್ಗುಬಾಟಿಯಾ ಮಿಹಿಕಾ ಎಂಗೇಜ್​ಮೆಂಟ್​

ಬಾಹುಬಲಿ ಸಿನಿಮಾ ನಟ ರಾಣಾ ದಗ್ಗುಬಾಟಿ ಹಾಗೂ ಮುಂಬೈ ಮೂಲದ ಡಿಸೈನರ್​ ಮಿಹಿಕಾ ಬಜಾಜ್​ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಖಾಸಗಿ ಸಮಾರಂಭದ ಫೋಟೋಗಳನ್ನು ಇಬ್ಬರು ತಮ್ಮ ಇನ್ಸ್​ಸ್ಟಾಗ್ರಾಂ ಪೇಜ್​ನಲ್ಲಿ ಹಂಚಿಕೊಂಡಿದ್ದಾರೆ.

Rana Daggubati and Miheeka Bajaj have Roka ceremony
ನಿಶ್ಚಿತಾರ್ಥ ಮಾಡಿಕೊಂಡ ರಾಣಾ ದಗ್ಗುಬಾಟಿಯಾ ಮಿಹಿಕಾ ಜೋಡಿ
author img

By

Published : May 21, 2020, 4:05 PM IST

ಹೈದರಾಬಾದ್ : ಬಾಹುಬಲಿ ಸಿನಿಮಾದಲ್ಲಿ ಬಲ್ಲಾಳದೇವನ ಪಾತ್ರ ಮಾಡಿ ಮಿಂಚಿದ್ದ ತೆಲುಗು ನಟ ರಾಣಾ ದಗ್ಗುಬಾಟಿ ತನ್ನ ಮನದರಸಿ ಮಿಹಿಕಾ ಬಜಾಜ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಖಾಸಗಿ ಕಾರ್ಯಕ್ರಮದ ಪೋಟೋಗಳನ್ನು ರಾಣಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, "ಇದು ಅಧಿಕೃತ" ಎಂದು ಬರೆದುಕೊಂಡಿದ್ದಾರೆ.

ಸರಳ ಕಾರ್ಯಕ್ರಮದಲ್ಲಿ ವರ್ಣರಂಜಿತ ಹೂವಿನ ಅಲಂಕಾರ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ರಾಣಾ ಬಿಳಿ ಅಂಗಿ ಮತ್ತು ಬಿಳಿ ದೋತಿಯಲ್ಲಿ ಮಿಂಚಿದರೆ ಕಿತ್ತಳೆ -ಚಿನ್ನದ ಬಣ್ಣದ ಸೀರೆಯಲ್ಲಿ ಮಿಹಿಕಾ ಕಂಗೊಳಿಸುತ್ತಿದ್ದರು.

ಮುಂಬೈ ಮೂಲದ ಡ್ಯೂ ಡ್ರಾಪ್ ಸ್ಟುಡಿಯೋದ ಸ್ಥಾಪಕಿಯಾಗಿರುವ ಮಿಹಿಕಾ ಕೂಡ ತಮ್ಮ ಕಾರ್ಯಕ್ರಮದ ಫೋಟೋವನ್ನು ಇನ್ಸ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, 'ಅಧಿಕೃತವಾಗಿ ನನ್ನದು' ಎಂದು ಬರೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.