ETV Bharat / sitara

ಶ್ವಾನಗಳ ಪ್ರೀತಿಗೆ ಮನಸೋತ ರಮ್ಯ...ವಿಡಿಯೋ ಹಂಚಿಕೊಂಡ ಮೋಹಕ ತಾರೆ - Ramya social media post

ಮೋಹಕ ತಾರೆ ರಮ್ಯ, ಚಿತ್ರರಂಗದಿಂದ ದೂರ ಉಳಿದಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಬಹಳ ಆ್ಯಕ್ಟಿವ್ ಇದ್ದಾರೆ. ಮುದ್ದಿನ ಶ್ವಾನಗಳೊಂದಿಗೆ ಆಟವಾಡುತ್ತಿರುವ ವಿಡಿಯೋವೊಂದನ್ನು ರಮ್ಯ ಹಂಚಿಕೊಂಡಿದ್ದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Ramya
ರಮ್ಯ
author img

By

Published : Feb 22, 2021, 5:58 PM IST

ಸ್ಯಾಂಡಲ್​​​ವುಡ್​​​​​​​ನಲ್ಲಿ ಒಂದು ದಶಕಗಳ ಕಾಲ ಸಿಲ್ವರ್ ಸ್ಕ್ರೀನ್ ಮೇಲೆ ವಿಜೃಂಭಿಸಿದ ನಟಿ ಮೋಹಕ ತಾರೆ ರಮ್ಯ. 'ನಾಗರಹಾವು' ಸಿನಿಮಾ ಬಳಿಕ ಸಂಪೂರ್ಣವಾಗಿ ಚಿತ್ರರಂಗದಿಂದ ದೂರ ಉಳಿದಿರುವ ರಮ್ಯ ಸಂಪೂರ್ಣವಾಗಿ ರಾಜಕೀಯದಲ್ಲಿ ಬ್ಯುಸಿಯಾಗಿದ್ರು.ಈ ಹಿನ್ನೆಲೆಯಲ್ಲಿ ರಮ್ಯ ಕೆಲವು ವರ್ಷಗಳು ಎಲ್ಲೂ ಕಾಣಿಸಿಕೊಂಡಿರಲಿಲ್ಲ.

ಇದನ್ನೂ ಓದಿ: ಭಾರೀ ಕುತೂಹಲ ಮೂಡಿಸಿದ ಧನುಷ್ ಅಭಿನಯದ 'ಜಗಮೇ ತಂತ್ರಂ​' ಟೀಸರ್​​​

ಕಳೆದ ಒಂದು ವರ್ಷದಿಂದ ರಮ್ಯ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇದ್ದಾರೆ. ಪ್ರಚಲಿತ ವಿದ್ಯಮಾನಗಳ ಬಗ್ಗೆ ಕೂಡಾ ರಮ್ಯ ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇತ್ತಿಚೆಗೆ ಬಂಧನವಾದ ದಿಶಾ ರವಿ ಪರ ಕೂಡಾ ರಮ್ಯ ದನಿಯೆತ್ತಿದ್ದರು. ಇದರೊಂದಿಗೆ ರಮ್ಯ ತಮ್ಮ ಫೋಟೋ, ವಿಡಿಯೋಗಳನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳುತ್ತಿದ್ದು ಈಗ ತನ್ನ ಪ್ರೀತಿಯ ಶ್ವಾನಗಳೊಂದಿಗೆ ಆಟವಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ರಮ್ಯ ಸಾಕಿರುವ ಮೂರು ಶ್ವಾನಗಳು ಅವರೊಂದಿಗೆ ಖುಷಿಯಿಂದ ಆಟವಾಡುತ್ತಿವೆ. ಮತ್ತೊಂದೆಡೆ ರಮ್ಯ ಮೇಕಪ್ ಇಲ್ಲದೆಯೂ ಬಹಳ ಸುಂದರವಾಗಿ ಕಾಣುತ್ತಿದ್ದಾರೆ. ರಮ್ಯ ಪೋಸ್ಟ್​​​ಗೆ ರಕ್ಷಿತ, ಜೆನ್ನಿಫರ್ ಕೊತ್ವಾಲ್, ಧನ್ಯ ರಾಮ್​ ಕುಮಾರ್, ಅದ್ವಿತಿ ಶೆಟ್ಟಿ, ಸಂಯುಕ್ತ ಹೊರನಾಡು, ಆಶಿಕಾ ರಂಗನಾಥ್ ಹಾಗೂ ಇನ್ನಿತರರು ಕಮೆಂಟ್ ಮಾಡಿದ್ದಾರೆ. ಅಭಿಮಾನಿಗಳು ಕೂಡಾ ಈ ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿ ಕಮೆಂಟ್ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.