ETV Bharat / sitara

ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ: ನಟ ರಾಮ್​ ಪೋತಿನೇನಿಗೆ 200 ರೂ. ದಂಡ

author img

By

Published : Jun 24, 2019, 8:12 PM IST

ತೆಲುಗು ನಟ ರಾಮ್ ಪೋತಿನೇನಿ ಇಸ್ಮಾರ್ಟ್ ಶಂಕರ್ ಚಿತ್ರದ ಶೂಟಿಂಗ್ ವೇಳೆ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದ್ದು ಪೊಲೀಸರು ರಾಮ್​ಗೆ 200 ರೂಪಾಯಿ ದಂಡ ವಿಧಿಸಿದ್ದಾರೆ.

ರಾಮ್ ಪೋತಿನೇನಿ

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧವಿದ್ದರೂ ಸಾರ್ವಜನಿಕರು ಈ ಕಾನೂನನ್ನು ಪಾಲಿಸುತ್ತಿಲ್ಲ. ದಂಡ ತಾನೇ ಕಟ್ಟಿಬಿಡೋಣ ಎಂಬ ಮನಸ್ಥಿತಿ ಉಳ್ಳವರು ಸಾಕಷ್ಟು ಮಂದಿ ಇದ್ದಾರೆ.

ram
ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿರುವ ರಾಮ್

ಇನ್ನು ಲಕ್ಷಾಂತರ ಅಭಿಮಾನಿಗಳಿಗೆ ಮಾದರಿಯಾಗಬೇಕಾಗಿರುವ ಸಿನಿಮಾ ನಟರೇ ತಪ್ಪು ಮಾಡಿದರೆ..? ತೆಲುಗು ನಟ ರಾಮ್ ಪೋತಿನೇನಿ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದ್ದು ಪೊಲೀಸರು ಅವರಿಗೆ 200 ರೂಪಾಯಿ ದಂಡ ವಿಧಿಸಿದ್ದಾರೆ. ರಾಮ್ ಸದ್ಯಕ್ಕೆ ಇಸ್ಮಾರ್ಟ್ ಶಂಕರ್ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಶೂಟಿಂಗ್ ಹೈದರಾಬಾದ್​​​ನಲ್ಲಿ ಜರುಗುತ್ತಿದ್ದು ಶೂಟಿಂಗ್ ಬಿಡುವಿನ ವೇಳೆ ರಾಮ್ ಅದೇ ಸ್ಥಳದಲ್ಲಿ ಸ್ಮೋಕ್ ಮಾಡಿದ್ದಾರೆ. ಇದನ್ನು ನೋಡಿದ ಚಾರ್​​ಮಿನಾರ್ ಪೊಲೀಸರು ರಾಮ್​ಗೆ ಸ್ಥಳದಲ್ಲೇ 200 ರೂಪಾಯಿ ದಂಡ ವಿಧಿಸಿದ್ದಾರೆ.

ರಾಮ್ ಧೂಮಪಾನ ಮಾಡುತ್ತಿರುವ ಫೋಟೋವನ್ನು ಸ್ಥಳದಲ್ಲೇ ಇದ್ದವರು ಕ್ಲಿಕ್ ಮಾಡಿದ್ದಾರೆ. ಇದೀಗ ಈ ಫೋಟೋ ವೈರಲ್ ಆಗಿದೆ. ಲಕ್ಷಾಂತರ ಅಭಿಮಾನಿಗಳು ರಾಮ್​​​ನನ್ನು ಫಾಲೋ ಮಾಡುತ್ತಿದ್ದು ಅವರೇ ಹೀಗೆ ಮಾಡಿದರೆ ಹೇಗೆ ಎಂಬುದು ಬುದ್ಧಿಜೀವಿಗಳ ಪ್ರಶ್ನೆಯಾಗಿದೆ.

Intro:Body:

Ram potineni

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.