ETV Bharat / sitara

'ಮರ್ಡರ್​' ಚಿತ್ರಕ್ಕೆ ಕಾನೂನು ಕಂಟಕ: ರಾಮ್​ ಗೋಪಾಲ್ ವರ್ಮಾ ವಿರುದ್ಧ ಪ್ರಕರಣ

2018 ರಲ್ಲಿ ತೆಲಂಗಾಣದ ಮಿರಿಯಾಲಗುಡದಲ್ಲಿ ನಡೆದಿದ್ದ ಮರ್ಯಾದಾ ಹತ್ಯೆ ಕುರಿತು 'ಮರ್ಡರ್'​ ಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದ ರಾಮ್​ಗೋಪಾಲ್ ವರ್ಮಾ ಮತ್ತು ನಿರ್ಮಾಪಕ ನಟ್ಟಿ ಕರುಣಾ ವಿರುದ್ಧ ಪ್ರಕರಣ ದಾಖಲಾಗಿದೆ.

Ram Gopal Varma booked in 'Murder' movie row
ರಾಮ್​ ಗೋಪಾಲ್ ವರ್ಮಾ ವಿರುದ್ಧ ಪ್ರಕರಣ ದಾಖಲು
author img

By

Published : Jul 5, 2020, 1:38 PM IST

ಹೈದರಾಬಾದ್: ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ 2018 ರ ತೆಲಂಗಾಣದ ಮರ್ಯಾದಾ ಹತ್ಯೆ ಪ್ರಕರಣದ ಕುರಿತು 'ಮರ್ಡರ್' ಹೆಸರಿನಲ್ಲಿ ಚಿತ್ರ ನಿರ್ಮಾಣ ಮಾಡಲು ಮುಂದಾಗಿರುವ ನಿರ್ಮಾಪಕ ​ರಾಮ್ ಗೋಪಾಲ್ ವರ್ಮಾ ವಿರುದ್ಧ ಪ್ರಕರಣ ದಾಖಲಾಗಿದೆ.

ಪಿ. ಬಾಲಸ್ವಾಮಿ ಅವರು ಸಲ್ಲಿಸಿದ್ದ ಅರ್ಜಿಯ ಮೇರೆಗೆ ನ್ಯಾಯಾಲಯವು ವರ್ಮಾ ಮತ್ತು ಇನ್ನೋರ್ವ ನಿರ್ಮಾಪಕನ ಮೇಲೆ ಪ್ರಕರಣ ದಾಖಲಿಸಲು ಆದೇಶ ನೀಡಿದೆ. ಅರ್ಜಿದಾರ ಬಾಲಸ್ವಾಮಿ ಅವರ ಪುತ್ರ ಪ್ರಣಯ್​ ಕುಮಾರ್​ ಎಂಬಾತ ತನ್ನ ಮಗಳನ್ನು ಪ್ರೀತಿಸಿ ಮದುವೆಯಾಗಿದ್ದಕ್ಕಾಗಿ ಆತನ ಮಾವ (ಪತ್ನಿಯ ತಂದೆ) ಮಾರುತಿ ರಾವ್ 2018 ರಲ್ಲಿ ಕೊಲೆ ಮಾಡಿದ್ದ.

ಈ ಘಟನೆಯ ಕುರಿತು ಮರ್ಡರ್ ಹೆಸರಿನಲ್ಲಿ​ ಚಿತ್ರ ನಿರ್ಮಾಣ ಮಾಡಲು ನಿರ್ದೇಶಕ ವರ್ಮಾ ಮತ್ತು ನಿರ್ಮಾಪಕ ನಟ್ಟಿ ಕರುಣಾ ಮುಂದಾಗಿದ್ದರು. ಹೀಗಾಗಿ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 153 ಎ (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಸಾಮರಸ್ಯ ಕದಡುವುದು) ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆ ಮತ್ತು ಸೆಕ್ಷನ್​​ಗಳಡಿಯಲ್ಲಿ ನರ್ಮಗೊಂಡ ಜಿಲ್ಲೆಯ ಮಿರಿಯಾಲಗುಡ ಟೌನ್- I ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಳೆದ ತಿಂಗಳು ನ್ಯಾಯಾಲಯವನ್ನು ಸಂಪರ್ಕಿಸಿದ್ದ ಬಾಲಸ್ವಾಮಿ ಚಿತ್ರವನ್ನು ನಿಷೇಧಿಸುವಂತೆ ಕೋರಿದ್ದರು. ಮಗ ಪ್ರಣಯ್ ಮತ್ತು ಅವರ ಸೊಸೆ ಅಮೃತ ಅವರ ಫೋಟೋಗಳನ್ನು ಅವರ ಒಪ್ಪಿಗೆಯಿಲ್ಲದೆ ಬಳಸಲಾಗುತ್ತಿದೆ ಎಂದು ಆರೋಪಿಸಿದ್ದರು.

ಮೇಲ್ಜಾತಿಯ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದ ಎಂಬ ಕಾರಣಕ್ಕೆ 14 ಸೆಪ್ಟೆಂಬರ್ 2018 ರಂದು ಮಿರಿಯಾಲಗುಡದ ಖಾಸಗಿ ಆಸ್ಪತ್ರೆಯಿಂದ ತನ್ನ ಪತ್ನಿ ಮತ್ತು ತಾಯಿಯೊಂದಿಗೆ ಹೊರಬರುತ್ತಿದ್ದಾಗ 24 ವರ್ಷದ ಪ್ರಣಯ್​ನನ್ನು ಸಾರ್ವಜನಿಕರ ಎದುರೇ ಕೊಲ್ಲಲಾಗಿತ್ತು. ಭೀಕರ ಹತ್ಯೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಘಟನೆಯ ಬಳಿಕ ಜನ ಆಕ್ರೋಶ ವ್ಯಕ್ತಪಡಿಸಿ ಬೀದಿಗಿಳಿದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.