ETV Bharat / sitara

10 ಕಿಲೋ ತೂಕ ಇಳಿಸಿಕೊಂಡ ರಕ್ಷಿತ್ ಶೆಟ್ಟಿ ... ಕಾರಣ ಏನು...? - Saptasagaradache ello movie

ಹೇಮಂತ್ ರಾವ್ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಸಪ್ತ ಸಾಗರದಾಚೆ ಎಲ್ಲೋ' ಹೊಸ ಸಿನಿಮಾಗಾಗಿ ರಕ್ಷಿತ್ ಶೆಟ್ಟಿ ಸುಮಾರು 10 ಕಿಲೋ ತೂಕ ಇಳಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ 2 ಶೇಡ್​​​ಗಳಲ್ಲಿ ನಟಿಸಿದ್ದಾರೆ. ರಕ್ಷಿತ್​ಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ.

Rakshit shetty
ರಕ್ಷಿತ್ ಶೆಟ್ಟಿ
author img

By

Published : Mar 16, 2021, 2:20 PM IST

ಕಳೆದ ತಿಂಗಳು 'ರಾಮಾರ್ಜುನ' ಚಿತ್ರದ ಪ್ರಮೋಷನ್​ ಸಂದರ್ಭದಲ್ಲಿ ನಾರ್ಮಲ್ ಆಗಿದ್ದ ರಕ್ಷಿತ್​ ಶೆಟ್ಟಿ, ಇದೀಗ ತೂಕ ಇಳಿಸಿಕೊಂಡು ಸ್ಲಿಮ್​ ಆಗಿದ್ದಾರೆ. ರಕ್ಷಿತ್​​​​​​​​​​​ ಅಭಿನಯದ ಹೊಸ ಚಿತ್ರ 'ಸಪ್ತ ಸಾಗರದಾಚೆ ಎಲ್ಲೋ' ಇದಕ್ಕೆ ಕಾರಣ. ಇತ್ತೀಚೆಗಷ್ಟೇ ಸೆಟ್ಟೇರಿದ ಈ ಚಿತ್ರದ ಮುಹೂರ್ತದಲ್ಲಿ ರಕ್ಷಿತ್​​​​​​​​​​ ತಾವು ಸ್ಲಿಮ್​ ಆಗಿದ್ದು ಏಕೆ ಎಂದು ಹೇಳಿಕೊಂಡರು.

Rakshit shetty
'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಮುಹೂರ್ತ

'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದಲ್ಲಿ ರಕ್ಷಿತ್​ ಎರಡು ಶೇಡ್​ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಕಥೆ ಎರಡು ವಿಭಿನ್ನ ಕಾಲಘಟ್ಟದಲ್ಲಿ ನಡೆಯಲಿದೆಯಂತೆ ಮೊದಲಿಗೆ, 2010ರಲ್ಲಿ ಪ್ರಾರಂಭವಾಗುವ ಕಥೆ ಇಂಟರ್​ವೆಲ್​ ಹೊತ್ತಿಗೆ ಮುಗಿಯುತ್ತದೆ. ಆ ನಂತರ ಮತ್ತೆ 2020ರಲ್ಲಿ ಕಥೆ ಮುಂದುವರೆಯಲಿದೆ. ಎರಡು ಕಾಲಘಟ್ಟವಾದ್ದರಿಂದ, ರಕ್ಷಿತ್​ ಎರಡು ಶೇಡ್​ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಭಾಗದಲ್ಲಿ 10 ಕೆಜಿ ಇಳಿಸಿಕೊಂಡರೆ, ಎರಡನೆಯ ಕಾಲಘಟ್ಟದಲ್ಲಿ ಮತ್ತೆ 10 ಕೆಜಿ ತೂಕ ಹೆಚ್ಚಿಸಿಕೊಳ್ಳಲಿದ್ದಾರೆ. ಈಗಾಗಲೇ ಅವರು 10 ಕಿಲೋ ಹೆಚ್ಚು ತೂಕ ಇಳಿಸಿಕೊಂಡಿದ್ದರಂತೆ. ಗಡ್ಡ ತೆಗೆದಾಗ ಮುಖ ಬಹಳ ಚಿಕ್ಕದಾಗಿ ಕಂಡಿತಂತೆ. ಹಾಗಾಗಿ ಸ್ವಲ್ಪ ತೂಕ ಹೆಚ್ಚಿಸಿಕೊಂಡಿದ್ದಾರೆ. ಮೊದಲ ಭಾಗದ ಚಿತ್ರೀಕರಣದಲ್ಲಿ ಅವರು ತೊಡಗಿಸಿಕೊಳ್ಳಲಿದ್ದಾರೆ. ಆ ನಂತರ ಒಂದು ತಿಂಗಳ ಗ್ಯಾಪ್​ನಲ್ಲಿ ಅವರು ಮತ್ತೆ ತೂಕ ಹೆಚ್ಚಿಸಿಕೊಂಡು ಎರಡನೇ ಶೇಡ್​​​ಗೆ ಸಿದ್ಧವಾಗಲಿದ್ದಾರೆ. ಜೊತೆಗೆ ಅವರ ಗೆಟಪ್​ ಕೂಡಾ ಬದಲಾಗಲಿದೆಯಂತೆ.

Rakshit shetty
ರಕ್ಷಿತ್ ಶೆಟ್ಟಿ

ಇದನ್ನೂ ಓದಿ: ಯುವರತ್ನ ಫ್ರೀ-ರಿಲೀಸ್​ ಇವೆಂಟ್​ ಕ್ಯಾನ್ಸಲ್... ಅಭಿಮಾನಿಗಳಿಗೆ ಪವರ್​ಸ್ಟಾರ್​ ಕೊಟ್ರು ಈ ಕಾರಣ? ​

'ಸಪ್ತ ಸಾಗರದಾಚೆ ಎಲ್ಲೋ’ ಚಿತ್ರವನ್ನು ಹೇಮಂತ್ ರಾವ್ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಕಥೆ-ಚಿತ್ರಕಥೆ ಕೂಡಾ ಅವರದ್ದೇ. ಈ ಚಿತ್ರವನ್ನು ರಕ್ಷಿತ್,​ ತಮ್ಮ ಪರಂವಾ ಪಿಕ್ಚರ್ಸ್‌ ಎಂಬ ಹೊಸ ನಿರ್ಮಾಣ ಸಂಸ್ಥೆಯಡಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ರಕ್ಷಿತ್​​​ಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ. ಚಿತ್ರಕ್ಕೆ ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಮತ್ತು ಚರಣ್​ರಾಜ್​ ಸಂಗೀತವಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.