ಮುಂಬೈ (ಮಹಾರಾಷ್ಟ್ರ): ಹಿಂದಿ ಬಿಗ್ಬಾಸ್ ಸೀಸನ್ 15 ರಲ್ಲಿ ಭಾಗವಹಿಸಿರುವ ನಟಿ ರಾಖಿ ಸಾವಂತ್ಗೆ ಪ್ರತಿಸ್ಪರ್ಧಿ ಅಭಿಜಿತ್ ಟೀಕಿಸಿದ್ದಾರೆ. ರಿತೇಶ್ ನಿನ್ನ ಬಾಡಿಗೆ ಗಂಡ ಎಂದು ಅಭಿಜಿತ್ ಟೀಕಿಸಿರುವುದನ್ನು ಬಿಗ್ಬಾಸ್ ರಿಲೀಸ್ ಮಡಿರುವ ಹೊಸ ಪ್ರೋಮೋದಲ್ಲಿದೆ.
- " class="align-text-top noRightClick twitterSection" data="
">
ಪ್ರೋಮೋದಲ್ಲಿ, ಪತಿ ರಿತೇಶ್ ನಿನ್ನ ಬಾಡಿಗೆ ಗಂಡ ಎಂದು ಅಭಿಜಿತ್ ಹೇಳಿದ್ದರೆ ಅದಕ್ಕೆ ಆಕ್ರೋಶಗೊಂಡ ರಾಖಿ ಸಾವಂತ್ ನಾನು ಸಪ್ತಪದಿ ತುಳಿದು ರಿತೇಶ್ರನ್ನು ವಿವಾಹವಾಗಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಅಭಿಜಿತ್ ನಿನ್ನ ಮನಸ್ಸಿನಲ್ಲಿ ಈ ರೀತಿಯ ವಿಚಾರಗಳಿವೆ, ಹಾಗಾಗಿಯೇ ನೀನು ಈ ರೀತಿಯ ಹೇಳಿಕೆ ನೀಡುತ್ತಿರುವುದಾಗಿ ಪತಿ ರಿತೇಶ್ ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ ಸಲ್ಮಾನ್ ಖಾನ್ ಕೂಡ ಈ ರೀತಿಯೇ ಹೇಳಿಕೆ ನೀಡಿದ್ದಾರೆಂದು ಸ್ಫರ್ಧಿ ಅಭಿಜಿತ್ ವಾದಿಸಿದ್ದು, ಖಂಡಿತವಾಗಿಯೂ ಸಲ್ಮಾನ್ ಸರ್ ಹೀಗೆ ಹೇಳಿಲ್ಲ ಎಂದು ರಾಖಿ ಸಾವಂತ್ ಹೇಳಿದ್ದಾರೆ.
- " class="align-text-top noRightClick twitterSection" data="
">
ಇಬ್ಬರ ನಡುವಿನ ಮಾತಿನ ಚಕಮಕಿ ಎಲ್ಲೆ ಮೀರಿ, ಕೈ-ಕೈ ಮಿಲಾಯಿಸುವವರೆಗೆ ತಲುಪಿತು. ಅಭಿಜಿತ್ ಕೂದಲನ್ನು ಎಳೆದು ನೀನು ನಿನ್ನ ಹೆಂಡತಿಯನ್ನು ಬಾಡಿಗೆಗಾಗಿ ನೇಮಿಸಿದ್ದೀಯಾ ಎಂದು ರಾಖಿ ಸಾವಂತ್ ಪ್ರಶ್ನಿಸಿದ್ದು, ಅಭಿಜಿತ್ ಆಕ್ರೋಶಕ್ಕೆ ಕಾರಣವಾಯಿತು. ನಂತರ ಜಗಳವನ್ನು ಬಿಡಿಸಲು ಬಿಗ್ಬಾಸ್ ಸ್ಪರ್ಧಿಗಳು ಮುಂದಾದರು. ಈ ಪ್ರೋಮೋ ಇದೀಗ ವೀಕ್ಷಕರಲ್ಲಿ ಕುತೂಹಲ ಕೆರಳಿಸಿದೆ.
ಇದನ್ನೂ ಓದಿ: ಕತ್ರಿನಾ-ವಿಕ್ಕಿ ಕೌಶಲ್ ಕಲ್ಯಾಣ; ಚಿತ್ರ ನಿರ್ದೇಶಕ ಕಬೀರ್ ಖಾನ್ ಸೇರಿ ಗಣ್ಯರು ಜೈಪುರದತ್ತ ಪ್ರಯಾಣ
ರಿತೇಶ್ ಮತ್ತು ರಾಖಿ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಬಿಗ್ ಬಾಸ್ ಸೀಸನ್ 15 ಅನ್ನು ಕೆಲ ದಿನಗಳ ಹಿಂದೆ ಪ್ರವೇಶಿಸಿದ್ದರು.