ಕನ್ನಡ ಚಿತ್ರರಂಗದಲ್ಲಿ ಟಾಪ್ ನಟರ ಜೊತೆ ಅಭಿನಯಿಸಿದ ಲಕ್ಕಿ ನಟಿ ಅಂದರೆ ರಚಿತಾ ರಾಮ್. ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ಆಗಿರುವ ಈ ಚೆಂದುಳ್ಳಿ ಚೆಲುವೆಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 29ನೇ ವರ್ಷಕ್ಕೆ ಕಾಲಿಟ್ಟಿರುವ ರಚಿತಾ ರಾಮ್ಗೆ ಬಿಚ್ಚುಗತ್ತಿ ಸಿನಿಮಾ ಖ್ಯಾತಿಯ ನಟ ರಾಜ್ ವರ್ಧನ್ ಸರ್ಪ್ರೈಸ್ ನೀಡಿದ್ದಾರೆ.
ಅದೆನಾಪ್ಪ ಅಂದ್ರೆ 12 ಗಂಟೆಗೆ ಸರಿಯಾಗಿ ರಾಜವರ್ಧನ್ ರಚಿತಾ ರಾಮ್ ಮನೆಗೆ ಭೇಟಿ ನೀಡಿ ರಚಿತಾ ಕೈಯಲ್ಲಿ ಕೇಕ್ ಕಟ್ ಮಾಡಿಸುವ ಮೂಲಕ ಹುಟ್ಟು ಹಬ್ಬದ ಶುಭಾಶಯ ಹೇಳಿದ್ದಾರೆ. ನಟ ರಾಜವರ್ಧನ್ ಜೊತೆ ನಿರ್ದೇಶಕ ಮಯೂರ್ ರಾಘವೇಂದ್ರ ಕೂಡ ಬರ್ತ್ ಡೇ ಸೆಲೆಬ್ರೆಷನ್ನಲ್ಲಿ ಭಾಗಿಯಾಗಿದ್ದಾರೆ.

ಇನ್ನು ಮಯೂರ್ ತಮಿಳಿನ ಕೋಲಾಮಾವು ಕೋಕಿಲ ಚಿತ್ರವನ್ನ ಕನ್ನಡದಲ್ಲಿ ರಿಮೇಕ್ ಮಾಡುತ್ತಿದ್ದು, ಈ ಚಿತ್ರದಲ್ಲಿ ನಯನತಾರ ಮಾಡಿದ ಪಾತ್ರವನ್ನ ರಚಿತಾ ರಾಮ್ ಮಾಡುತ್ತಿದ್ದಾರೆ. ರಚಿತಾ ರಾಮ್ ಹುಟ್ಟು ಹಬ್ಬಕ್ಕೆ ನಾಲ್ಕೈದು ಹೊಸ ಸಿನಿಮಾಗಳ ಪೋಸ್ಟರ್ ರಿಲೀಸ್ ಆಗಿದ್ದು, ಡಿಂಪಲ್ ಕ್ವೀನ್ ಬರ್ತ್ ಡೇಗೆ ಈ ಚಿತ್ರಗಳೇ ಉಡುಗೊರೆಯಾಗಿ ಸಿಕ್ಕಿವೆ.
