ಇಂದು ರಜನಿಕಾಂತ್ 70ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಅವರ ಅಪಾರ ಅಭಿಮಾನಿ ಬಳಗ ಹಲವು ಸೇವೆಗಳನ್ನು ಮಾಡಿದೆ. ತಮಿಳುನಾಡಿನ ರಜನಿ ಅಭಿಮಾನಿಗಳು ಅನ್ನಸಂತರ್ಪಣೆ, ರಕ್ತದಾನ ಸೇರಿದಂತೆ ಹಲವು ಉತ್ತಮ ಕೆಲಸಗಳನ್ನು ಮಾಡಿದ್ದಾರೆ.
ಇನ್ನು ರಜನಿಕಾಂತ್ ಅಪ್ಪಟ ಅಭಿಮಾನಿಗಳು ರಜನಿ ಅಭಿನಯಿಸಿದ ಹಿಟ್ ಸಿನಿಮಾಗಳ ಗೆಟಪ್ನಲ್ಲಿ ಬಂದು ಚೆನ್ನೈನ ನಿವಾಸದ ಬಳಿ ಸಂಭ್ರಮಿಸಿದ್ದಾರೆ. ಅಲ್ಲಿ ಕೇಕ್ ಕಟ್ ಮಾಡಿ ರಜನಿ ನಿವಾಸ ಭದ್ರತಾ ಸಿಬ್ಬಂದಿಗೆ ಸಿಹಿ ಹಂಚಿದ್ದಾರೆ.
ಆದ್ರೆ ರಜನಿಕಾಂತ್ ಈ ಯಾವ ಅಭಿಮಾನಿಗಳಿಗೂ ಇಂದು ದರ್ಶನ ಕೊಟ್ಟಿಲ್ಲ. ರಾಜಕೀಯ ಪ್ರವೇಶದ ನಂತ್ರ ಮಾಡುತ್ತಿರುವ ಮೊದಲ ಹುಟ್ಟುಹಬ್ಬ ಇದಾಗಿದ್ದು, ರಜನಿ ಮಕ್ಕಳ ಮಂದ್ರಮ್ ಪಕ್ಷಕ್ಕೆ ಖುಷಿ ಕೊಟ್ಟಿದೆ.